ಕರ್ನಾಟಕ

karnataka

ಉತ್ತರ ಕೊರಿಯಾದತ್ತ ಓಡಿದ ಅಮೆರಿಕದ ಸೈನಿಕ: ಸ್ಟಂಟ್ ಎಂದು ಭಾವಿಸಿದ ಪ್ರವಾಸಿಗರು!

By

Published : Jul 19, 2023, 11:08 PM IST

ಉತ್ತರ ಕೊರಿಯಾದತ್ತ ಅಮೆರಿಕದ ಸೈನಿಕನೊಬ್ಬ ಓಡಿ ಹೋಗಿದ್ದಾನೆ. ಈ ದೃಶ್ಯವನ್ನು ಪ್ರವಾಸಿಗರ ಗುಂಪಿನಲ್ಲಿದ್ದ ನ್ಯೂಜಿಲೆಂಡ್‌ನ ರಾಜಧಾನಿ ವೆಲ್ಲಿಂಗ್‌ಟನ್‌ನ ಸಾರಾ ಲೆಸ್ಲಿ ಗಮನಿಸಿದ್ದಾರೆ.

Etv Bharat
Etv Bharat

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ಅಮೆರಿಕದ ಸೈನಿಕನೊಬ್ಬ ಉತ್ತರ ಕೊರಿಯಾದತ್ತ ಓಡಿ ಹೋಗಿದ್ದಾನೆ. ಇದನ್ನು ಕಂಡ ಪ್ರವಾಸಿಗರು ಇದೊಂದು ಸ್ಟಂಟ್ ಎಂದು ಭಾವಿಸಿದ್ದರು. ಜೊತೆಗೆ ನಿಜವಾಗಿಯೂ ಏನಾಗುತ್ತಿದೆ ಎಂದು ನಂಬಲು ಸಾಧ್ಯವಾಗಲಿಲ್ಲ ಎಂದು ಸಾರಾ ಲೆಸ್ಲಿ ಎಂಬುವವರು ತಿಳಿಸಿದ್ದಾರೆ.

ನ್ಯೂಜಿಲೆಂಡ್‌ನ ಪ್ರವಾಸಿಗರಾದ ಸಾರಾ ಲೆಸ್ಲಿ ಮತ್ತು ಆಕೆಯ ತಂದೆ ಮಂಗಳವಾರ ಬೆಳಗ್ಗೆ ಸಿಯೋಲ್‌ನಿಂದ ದಕ್ಷಿಣ ಮತ್ತು ಉತ್ತರ ಕೊರಿಯಾವನ್ನು ವಿಭಜಿಸುವ ಸೇನಾರಹಿತ ವಲಯಕ್ಕೆ ಭೇಟಿ ನೀಡಿದ್ದ ಗುಂಪಿನಲ್ಲಿದ್ದರು. ಪ್ರೈ.ಲಿ. 2ನೇ ದರ್ಜೆಯ ಸೈನಿಕ ಟ್ರಾವಿಸ್ ಕಿಂಗ್ ಸಹ 43 ಪ್ರವಾಸಿಗರ ಗುಂಪಿನಲ್ಲಿದ್ದರು. 23 ವರ್ಷದ ಟ್ರಾವಿಸ್​ ಕಿಂಗ್ 1ನೇ ಶಸ್ತ್ರಸಜ್ಜಿತ ವಿಭಾಗದ ಅಶ್ವದಳದ ಸ್ಕೌಟ್ ಆಗಿದ್ದು, ದಕ್ಷಿಣ ಕೊರಿಯಾದ ಜೈಲಿನಲ್ಲಿ ಸುಮಾರು ಎರಡು ತಿಂಗಳು ಇದ್ದರು. ಜುಲೈ 10ರಂದು ಬಿಡುಗಡೆಯಾಗಿದ್ದು, ಸೋಮವಾರ ಟೆಕ್ಸಾಸ್‌ನ ಫೋರ್ಟ್ ಬ್ಲಿಸ್‌ಗೆ ಪ್ರಯಾಣಿಸಬೇಕಿತ್ತು. ಆದರೆ, ಅಲ್ಲಿ ಟ್ರಾವಿಸ್ ಕಿಂಗ್​ ಹೆಚ್ಚುವರಿ ಮಿಲಿಟರಿ ಕ್ರಮಗಳು ಮತ್ತು ಸೇವೆಯಿಂದ ಬಿಡುಗಡೆ ಎದುರಿಸಬೇಕಾಗಿತ್ತು.

ಇದರ ನಡುವೆ ಪ್ರವಾಸಿಗರ ಗುಂಪಿನಲ್ಲಿದ್ದ ಈ ಟ್ರಾವಿಸ್ ಕಿಂಗ್ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿದ್ದರು. ಹೀಗಾಗಿ ಈತ ಓರ್ವ​ ಸೈನಿಕ ಅಥವಾ ಕಾನೂನು ತೊಂದರೆಯಲ್ಲಿದ್ದರು ಎಂದು ತನಗೆ ತಿಳಿದಿರಲಿಲ್ಲ ಎಂದು ಲೆಸ್ಲಿ ಹೇಳಿದ್ದಾರೆ. ಪ್ರವಾಸಿಗರ ಗುಂಪು ಮುಂಜಾನೆ ಸಿಯೋಲ್‌ನಿಂದ ಬಸ್‌ನಲ್ಲಿ ಹೊರಟಿತ್ತು. ಸೈನಿಕ ಕಿಂಗ್ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದುದನ್ನು ನಾನು ಗಮನಿಸಿದೆ. ಇತರರೊಂದಿಗೆ ಆತ ಮಾತನಾಡುತ್ತಿರುವುದನ್ನು ನಾನು ನೀಡಲಿಲ್ಲ ಎಂದು ಲೆಸ್ಲಿ ತಿಳಿಸಿದ್ದಾರೆ.

ಪ್ರವಾಸವು ಮಂಗಳವಾರ ಮಧ್ಯಾಹ್ನ ಮುಗಿಯುವ ಅಂತ್ಯಕ್ಕೆ ಬಂದಿತ್ತು. ಪ್ರವಾಸಿಗರು ಫೋಟೋಗಳನ್ನು ತೆಗೆಯುವುದರಲ್ಲಿ ತೊಡಗಿದ್ದರು. ಇದೇ ಸಮಯದಲ್ಲಿ ಸೈನಿಕ ಕಿಂಗ್ ವೇಗವಾಗಿ ಓಡುತ್ತಿರುವುದನ್ನು ನೋಡಿದೆ. ಆದರ, ಇದನ್ನು ತಮಾಷೆ ಅಥವಾ ಸ್ಟಂಟ್‌ ಮಾಡಲಾಗುತ್ತಿದೆ ಎಂದು ನಾನು ಆರಂಭದಲ್ಲಿ ಊಹಿಸಿದ್ದೆ. ಇದೇ ವೇಳೆ, 'ಆ ವ್ಯಕ್ತಿಯನ್ನು ಹಿಡಿಯಿರಿ' ಎಂದು ಕೂಗುವುದನ್ನು ನಾನು ಕೇಳಿಸಿಕೊಂಡೆ. ಸುಮಾರು 10 ಮೀಟರ್ ಓಡಿದ ನಂತರ ಸೈನಿಕ ಕಿಂಗ್ ಕಣ್ಮರೆಯಾದ ಎಂದು ಲೆಸ್ಲಿ ವಿವರಿಸಿದ್ದಾರೆ.

ಈ ಸಾರಾ ಲೆಸ್ಲಿ ನ್ಯೂಜಿಲೆಂಡ್‌ನ ರಾಜಧಾನಿ ವೆಲ್ಲಿಂಗ್‌ಟನ್‌ನ ವಕೀಲರಾಗಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಅಧ್ಯಯನ ಮಾಡಿದ ನಂತರ ಮತ್ತು ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ನೋಡಿದ ಬಳಿಕ ಕೊರಿಯಾದ ಬಗ್ಗೆ ಆಸಕ್ತಿ ಹೊಂದಿದ್ದರು. ಈ ನಿಟ್ಟಿನಲ್ಲಿ ಸಿಯೋಲ್‌ನಿಂದ ದಕ್ಷಿಣ ಮತ್ತು ಉತ್ತರ ಕೊರಿಯಾವನ್ನು ವಿಭಜಿಸುವ ಸೇನಾರಹಿತ ವಲಯಕ್ಕೆ ಅವರು ಭೇಟಿ ನೀಡಿದ್ದರು.

ಇದನ್ನೂ ಓದಿ:ಮಾನವ ಗೂಢಚಾರಿಗಳ ಸ್ಥಾನವನ್ನು ಎಐ ಪಡೆಯಲು ಸಾಧ್ಯವೇ ಇಲ್ಲ: ಬ್ರಿಟನ್​ ಗುಪ್ತಚರ ಅಧಿಕಾರಿ

ABOUT THE AUTHOR

...view details