ಕರ್ನಾಟಕ

karnataka

ಗೂಗಲ್‌ಗೆ 21 ಬಿಲಿಯನ್ ರೂಬಲ್ಸ್ ದಂಡ ವಿಧಿಸಿದ ರಷ್ಯಾ

By

Published : Jul 18, 2022, 10:01 PM IST

ರಷ್ಯಾದ ದೂರಸಂಪರ್ಕ ನಿಯಂತ್ರಕ ರೋಸ್ಕೊಮ್ನಾಡ್ಜೋರ್, ಗೂಗಲ್​ ಮಾಲೀಕತ್ವದ ವಿಡಿಯೋ ಪ್ಲಾಟ್‌ಫಾರ್ಮ್ YouTube ಗೆದಂಡವನ್ನು ವಿಧಿಸಿದೆ.

ಗೂಗಲ್‌ಗೆ 21 ಬಿಲಿಯನ್ ರೂಬಲ್ಸ್ ದಂಡ ವಿಧಿಸಿದ ರಷ್ಯಾ
ಗೂಗಲ್‌ಗೆ 21 ಬಿಲಿಯನ್ ರೂಬಲ್ಸ್ ದಂಡ ವಿಧಿಸಿದ ರಷ್ಯಾ

ಮಾಸ್ಕೋ:ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಹಸ್ತಕ್ಷೇಪಕ್ಕೆ ಸಂಬಂಧಿಸಿದ ವಿಷಯವನ್ನು ತೆಗೆದುಹಾಕಲು ವಿಫಲವಾದ ಕಾರಣಕ್ಕಾಗಿ, ಮಾಸ್ಕೋ ನ್ಯಾಯಾಲಯವು ಗೂಗಲ್​ಗೆ 21 ಬಿಲಿಯನ್ ರೂಬಲ್ಸ್ (28,96,97,49,396.00 ರೂ.) ದಂಡ ವಿಧಿಸಿದೆ ಎಂದು ದೂರಸಂಪರ್ಕ ನಿಯಂತ್ರಕ ಸೋಮವಾರ ತಿಳಿಸಿದೆ. ಉಕ್ರೇನ್‌ನಲ್ಲಿನ ಆಕ್ರಮಣದ ಕುರಿತು ಸುಳ್ಳು ಮಾಹಿತಿ ಹಾಕುವುದನ್ನು ನಿರ್ಬಂಧಿಸಲು ಗೂಗಲ್ ​ -ಮಾಲೀಕತ್ವದ ವಿಡಿಯೋ ಪ್ಲಾಟ್‌ಫಾರ್ಮ್ YouTube ವಿಫಲವಾಗಿದೆ ಎಂದು ರೋಸ್ಕೊಮ್ನಾಡ್ಜೋರ್ ಹೇಳಿದರು.

ಸ್ಟ್ರೀಮಿಂಗ್ ಸೈಟ್ "ಉಗ್ರಗಾಮಿ ಮತ್ತು ಭಯೋತ್ಪಾದಕ ಪ್ರಚಾರ", "ಅಪ್ರಾಪ್ತ ವಯಸ್ಕರು ಅನಧಿಕೃತ ಪ್ರದರ್ಶನಗಳಲ್ಲಿ ಭಾಗವಹಿಸಲು ಕರೆ ನೀಡುವ" ವಿಷಯವನ್ನು ನಿರ್ಬಂಧಿಸಿಲ್ಲ ಎಂದು ರೋಸ್ಕೊಮ್ನಾಡ್ಜೋರ್ ಹೇಳಿದೆ. ಇದು ಗೂಗಲ್‌ಗೆ ಪುನರಾವರ್ತಿತ ಕನ್ವಿಕ್ಷನ್ ಆಗಿರುವುದರಿಂದ ದಂಡವನ್ನು ರಷ್ಯಾದಲ್ಲಿ ಅದರ ವಾರ್ಷಿಕ ಆದಾಯವನ್ನು ಆಧರಿಸಿದೆ ಎಂದು ನಿಯಂತ್ರಕರು ಹೇಳಿದ್ದಾರೆ.

ಇದನ್ನೂ ಓದಿ:ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧಿಗಳ ನಡುವೆ ಪೈಪೋಟಿ: ಯುಕೆ ಟಿವಿ ಚರ್ಚೆ ರದ್ದು

ರಷ್ಯಾದ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ಪಾಶ್ಚಿಮಾತ್ಯ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಮೇಲೆ ತಮ್ಮ ಒತ್ತಡವನ್ನು ಹೇರುತ್ತಿದ್ದಾರೆ. ಗೂಗಲ್ ಇತ್ತೀಚೆಗೆ ರಷ್ಯಾದ ಮಾರುಕಟ್ಟೆಯನ್ನು ತೊರೆದು ಉಕ್ರೇನ್‌ನಲ್ಲಿನ ರಷ್ಯಾದ ಮಿಲಿಟರಿ ಹಸ್ತಕ್ಷೇಪವನ್ನು ಖಂಡಿಸಿತ್ತು. ರಷ್ಯಾದ ಸುದ್ದಿ ಸಂಸ್ಥೆ ರಿಯಾ-ನೊವೊಸ್ಟಿ ಉಲ್ಲೇಖಿಸಿದ ತಜ್ಞರಾದ ವ್ಲಾಡಿಮಿರ್ ಝೈಕೋವ್ ಅವರ ಪ್ರಕಾರ, ರಷ್ಯಾದ ನ್ಯಾಯಾಲಯವು ಪಾಶ್ಚಿಮಾತ್ಯ ತಂತ್ರಜ್ಞಾನ ಸಂಸ್ಥೆಗೆ ವಿಧಿಸಿದ ದಂಡ ಇದಾಗಿದೆ.

ಸಂಸ್ಥೆಯು ದೇಶದಿಂದ ಹಿಂದೆ ಸರಿದಿರುವುದರಿಂದ ರಷ್ಯಾದ ಅಧಿಕಾರಿಗಳು ಗೂಗಲ್‌ಗೆ ಅವರು ಬಯಸಿದಷ್ಟು ದಂಡವನ್ನು ವಿಧಿಸಬಹುದು ಎಂದು ಅವರು ಹೇಳಿದರು.

ABOUT THE AUTHOR

...view details