ETV Bharat / international

ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧಿಗಳ ನಡುವೆ ಪೈಪೋಟಿ: ಯುಕೆ ಟಿವಿ ಚರ್ಚೆ ರದ್ದು

author img

By

Published : Jul 18, 2022, 8:31 PM IST

ಕನ್ಸರ್ವೇಟಿವ್ ಪಕ್ಷದ ಇಮೇಜ್​ಗೆ ಹಾನಿಯನ್ನುಂಟುಮಾಡುವ ಬಗ್ಗೆ ಕಾಳಜಿ ವಹಿಸಿರುವ ಕನ್ಸರ್ವೇಟಿವ್ ಸಂಸದರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧಿಗಳ ನಡುವೆ  ಪೈಪೋಟಿ
ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧಿಗಳ ನಡುವೆ ಪೈಪೋಟಿ

ಲಂಡನ್: ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧಿಗಳ ನಡುವೆ ಯೋಜಿತ ಚರ್ಚೆಯನ್ನು ರದ್ದುಗೊಳಿಸಲು ದೂರದರ್ಶನದ ಮೇಲಧಿಕಾರಿಗಳು ಒತ್ತಾಯಿಸಿದ್ದಾರೆ.

ಈಗ ಉಳಿದ ಐದು ಅಭ್ಯರ್ಥಿಗಳೆಂದರೆ ರಿಷಿ ಸುನಕ್, ಲಿಜ್ ಟ್ರಸ್, ಕೆಮಿ ಬಡೆನೋಚ್, ಪೆನ್ನಿ ಮೊರ್ಡಾಂಟ್ ಮತ್ತು ಟಾಮ್ ತುಗೆಂಧತ್. ಮಂಗಳವಾರ ರಾತ್ರಿ ಮೂರನೇ ದೂರದರ್ಶನ ಚರ್ಚೆಯಲ್ಲಿ ಇವರು ಕಾಣಿಸಿಕೊಳ್ಳಬೇಕಿತ್ತು. ಆದರೆ, ಮಾಜಿ ಹಣಕಾಸು ಸಚಿವ ಸುನಕ್ ಮತ್ತು ವಿದೇಶಾಂಗ ಕಾರ್ಯದರ್ಶಿ ಟ್ರಸ್ ಅವರು ಹಿಂದೆ ಸರಿದಿದ್ದಾರೆ ಎಂದು ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದ್ದ ಸ್ಕೈ ನ್ಯೂಸ್ ಹೇಳಿದೆ.

ಕನ್ಸರ್ವೇಟಿವ್ ಪಕ್ಷದ ಇಮೇಜ್​ಗೆ ಹಾನಿಯನ್ನುಂಟುಮಾಡುವ ಬಗ್ಗೆ ಕಾಳಜಿ ವಹಿಸಿರುವ ಕನ್ಸರ್ವೇಟಿವ್ ಸಂಸದರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣ ಅಭ್ಯರ್ಥಿಗಳು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ವಿಭಜನೆಗಳನ್ನು ಬಹಿರಂಗಪಡಿಸುತ್ತಾರೆ ಎಂಬ ಆತಂಕದಿಂದ ಈ ಚರ್ಚೆಯನ್ನೇ ನಿಲ್ಲಿಸಲು ನಿರ್ಧರಿಸಿದ್ದಾರೆ.

ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7 ರಂದು ಕನ್ಸರ್ವೇಟಿವ್ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5 ರಂದು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸುವವರೆಗೂ ಅವರು ಪ್ರಧಾನ ಮಂತ್ರಿಯಾಗಿಯೇ ಇರುತ್ತಾರೆ.

ಹಿಂದಿನ ಎರಡು ದೂರದರ್ಶನ ಚರ್ಚೆಗಳಲ್ಲಿ, ತೆರಿಗೆ ಸಂಬಂಧ ಭಾರೀ ಚರ್ಚೆ ನಡೆಸಲಾಗಿದೆ. ಭಾನುವಾರದ ಚರ್ಚೆಯಲ್ಲಿ ವೈಯುಕ್ತಿಯ ದಾಳಿಗಳಾಗಿವೆ. ಅಭ್ಯರ್ಥಿಗಳು ಪರಸ್ಪರ ಮತ್ತು ಅವರ ಪ್ರಸ್ತಾಪಗಳನ್ನು ನೇರವಾಗಿ ಟೀಕಿಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮೂರನೇ ಡಿಬೇಟ್​ ಅನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಬ್ರಿಟನ್​ ಪ್ರಧಾನಿ ಹುದ್ದೆಗೆ ಮತ್ತಷ್ಟು ಸನಿಹ.. ಎರಡನೇ ಸುತ್ತಿನಲ್ಲೂ ಸುನಕ್​ ಭಾರೀ ಮುನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.