ಕರ್ನಾಟಕ

karnataka

ದಕ್ಷಿಣ ಕೊರಿಯಾ ಜಲಗಡಿಗೆ ಬಿದ್ದ ಉತ್ತರ ಕೊರಿಯಾ ಕ್ಷಿಪಣಿ.. ರಾಷ್ಟ್ರಗಳ ಮಧ್ಯೆ ಯುದ್ಧಭೀತಿ

By

Published : Nov 2, 2022, 9:50 PM IST

ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಮತ್ತೆ ತಲೆದೋರಿದೆ. ಅಮೆರಿಕದ ಜೊತೆಗೂಡಿ ದಕ್ಷಿಣ ಕೊರಿಯಾದ ಸೇನಾಭ್ಯಾಸಕ್ಕೆ, ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗಿಸಿ ತೀಕ್ಷ್ಣ ತಿರುಗೇಟು ನೀಡಿದೆ.

north-korean-missile
ದಕ್ಷಿಣ ಕೊರಿಯಾ ಜಲಗಡಿಗೆ ಬಿದ್ದ ಉತ್ತರ ಕೊರಿಯಾ ಕ್ಷಿಪಣಿ

ಸಿಯೋಲ್​(ದಕ್ಷಿಣ ಕೊರಿಯಾ):ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ಮಧ್ಯೆ ಯುದ್ಧ ಭೀತಿ ಶುರುವಾಗಿದೆ. ಅಮೆರಿಕದ ಜೊತೆಗೂಡಿ ದಕ್ಷಿಣ ಕೊರಿಯಾ ನಡೆಸುತ್ತಿರುವ ವೈಮಾನಿನ ತಾಲೀಮಿನ ವಿರುದ್ಧವಾಗಿ ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗ ಮಾಡಿದೆ. ಇಂದು 25 ಕ್ಷಿಪಣಿಗಳನ್ನು ಉಡಾಯಿಸಿದ್ದು, ಅದರಲ್ಲಿ ಒಂದು ದಕ್ಷಿಣ ಕೊರಿಯಾದ ಜಲಗಡಿಗೆ ಬಂದು ಬಿದ್ದಿದೆ. ಇದು ಉಭಯ ರಾಷ್ಟ್ರಗಳ ಮಧ್ಯೆ ಮತ್ತೆ ತ್ವೇಷಮಯ ವಾತಾವರಣ ಸೃಷ್ಟಿಸಿದೆ.

ಉತ್ತರ ಕೊರಿಯಾ ಬುಧವಾರ ಬೆಳಗಿನ ನಸುಕಿನ ಜಾವ 19 ಕ್ಷಿಪಣಿಗಳ ಉಡಾಯಿಸಿದೆ. ಬಳಿಕ ಮಧ್ಯಾಹ್ನ 6 ಕ್ಷಿಪಣಿಗಳನ್ನು ಸ್ಫೋಟಿಸಿದೆ. ಇದರಲ್ಲಿ ಒಂದು ಕ್ಷಿಪಣಿ ದಕ್ಷಿಣ ಕೊರಿಯಾದ ವಾಸ್ತವಿಕ ಜಲಗಡಿಗೆ ಬಂದು ಅಪ್ಪಳಿಸಿದೆ. ಉತ್ತರ ಕೊರಿಯಾದ ಈ ದಾಳಿಯಿಂದಾಗಿ ಕಡಲ ತೀರದ ಜನರನ್ನು ಮಿಲಿಟರಿ ಬಂಕ್​ನಲ್ಲಿ ಆಶ್ರಯ ಪಡೆಯಲು ದಕ್ಷಿಣ ಕೊರಿಯಾ ಸೂಚಿಸಿದೆ.

ಅಮೆರಿಕದ ಜೊತೆಗೂಡಿ ದಕ್ಷಿಣ ಕೊರಿಯಾ ವೈಮಾನಿಕ ಅಭ್ಯಾಸ ನಡೆಸುತ್ತಿರುವುದು ನಮ್ಮ ದೇಶದ ಮೇಲೆ ದಾಳಿಯ ಸೂಚನೆಯಾಗಿದೆ. ಒಂದು ವೇಳೆ ದಾಳಿ ನಡೆದದ್ದೇ ಆದಲ್ಲಿ ಅಣ್ವಸ್ತ್ರ ಪ್ರಯೋಗಕ್ಕೂ ದೇಶ ಸಿದ್ಧವಿದೆ ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಕ್ಷಿಪಣಿ ಪ್ರಯೋಗ ನಡೆಸಿ ಖಡಕ್​ ಸಂದೇಶ ರವಾನಿಸಿದೆ.

ದಕ್ಷಿಣ ಕೊರಿಯಾ ಟೀಕೆ:ಇನ್ನು ಉತ್ತರ ಕೊರಿಯಾದ ಕ್ಷಿಪಣಿ ಪ್ರಯೋಗಕ್ಕೆ ದಕ್ಷಿಣ ಕೊರಿಯಾ ತೀವ್ರ ಟೀಕೆ ಮಾಡಿದೆ. ಇದೊಂದು ಅಸಹನೀಯ ನಡೆಯಾಗಿದೆ. ಪ್ರಾದೇಶಿಕ ಆಕ್ರಮಣದ ಬೆದರಿಕೆ ಎಂದು ಕಿಡಿಕಾರಿದೆ. ಉತ್ತರ ಕೊರಿಯಾ ಮೇಲೆ ಆಕ್ರಮಣ ಮಾಡುವ ಉದ್ದೇಶದಿಂದ ಅಮೆರಿಕದ ಜೊತೆಗೂಡಿ ಸೇನಾಭ್ಯಾಸ ನಡೆಸುತ್ತಿಲ್ಲ ಎಂದೂ ಸ್ಪಷ್ಟನೆ ನೀಡಿದೆ.

1953 ರ ಬಳಿಕ ಮೊದಲ ಗಡಿ ದಾಳಿ:ಇನ್ನು ಉಭಯ ರಾಷ್ಟ್ರಗಳ ಮಧ್ಯೆ ನಡೆದ ಯುದ್ಧದ ಬಳಿಕ ಅಂದರೆ, 1953 ರ ನಂತರ ಮೊದಲ ಗಡಿ ಗಲಾಟೆ ಇದಾಗಿದೆ. 1953 ರ ಕೊರಿಯಾ ಯುದ್ಧದ ನಂತರ ದೇಶವೊಂದು ಗಡಿ ದಾಟಿ ದಾಳಿ ಮಾಡಿದೆ. ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ ಕಿತ್ತಾಟ ಯುದ್ಧಕ್ಕೂ ನಾಂದಿ ಹಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಓದಿ:88ನೇ ಮದುವೆಯಾಗಲು ಸಿದ್ಧರಾದ 61ರ ಪ್ಲೇಬಾಯ್ ಕಿಂಗ್: ಈಗ ವಧು ಯಾರು ಗೊತ್ತಾ?

ABOUT THE AUTHOR

...view details