ETV Bharat / international

88ನೇ ಮದುವೆಯಾಗಲು ಸಿದ್ಧರಾದ 61ರ ಪ್ಲೇಬಾಯ್ ಕಿಂಗ್: ಈಗ ವಧು ಯಾರು ಗೊತ್ತಾ?

author img

By

Published : Nov 2, 2022, 5:55 PM IST

ಇಂಡೋನೇಷ್ಯಾದ ವ್ಯಕ್ತಿ ಈಗಾಗಲೇ 87 ಮದುವೆಗಳನ್ನು ಆಗಿದ್ದು, ಎಷ್ಟು ಮಕ್ಕಳಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಈಗ 88ನೇ ಮದುವೆಯಾಗಲು ಸಿದ್ಧರಾಗಿದ್ದಾರೆ.

Indonesian man marrying for 88th time; bride is ex-wife
88ನೇ ಮದುವೆಯಾಗಲು ಸಿದ್ಧರಾದ 61ರ ಪ್ಲೇಬಾಯ್ ಕಿಂಗ್

ಹೈದರಾಬಾದ್: ಇಂಡೋನೇಷ್ಯಾದ ವ್ಯಕ್ತಿಯೊಬ್ಬರು 88ನೇ ಮದುವೆಯಾಗಲು ಸಜ್ಜಾಗಿದ್ದಾರೆ. ಹೌದು, ಇದನ್ನು ನಂಬಿದರೆ ನಂಬಿ ಅಥವಾ ಬಿಡಿ. ಆದರೆ, ವಿಚಿತ್ರ ಅನಿಸಿದರೂ ನಿಜ. ಇಂಡೋನೇಷ್ಯಾದ ಪಶ್ಚಿಮ ಜಾವಾದ ಮಜಲೆಂಗ್ಕಾದ 61 ವರ್ಷದ ಕಾನ್ ಎಂಬ ಹೆಸರಿನ ವ್ಯಕ್ತಿಯೇ 88ನೇ ವಿವಾಹವಾಗಲು ಮುಂದಾಗಿದ್ದಾರೆ. ಇಷ್ಟು ಮದುವೆಗಳಾಗಿರುವ ಕಾರಣಕ್ಕಾಗಿಯೇ ಈತನನ್ನು ಪ್ಲೇಬಾಯ್ ಕಿಂಗ್ ಎಂದೇ ಕರೆಯಲಾಗುತ್ತದೆ.

ಮತ್ತೊಂದು ಅಚ್ಚರಿ ಎಂದರೆ ಸದ್ಯ ಕಾನ್​ ಮದುವೆ ಆಗುತ್ತಿರುವ ನವವಧು ಆತನ ಮಾಜಿ ಪತ್ನಿಯೇ. ರೈತನಾದ ಈ ಕಾನ್ ತನ್ನ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾಗಿದ್ದರು. ಈತನ ಮೊದಲ ಪತ್ನಿ ಈತನಗಿಂತ ಎರಡು ವರ್ಷ ದೊಡ್ಡವಳು ಆಗಿದ್ದರು. ಆದರೆ, ಮದುವೆಯಾದ ಎರಡು ವರ್ಷದಲ್ಲಿ ಆಕೆ ವಿಚ್ಛೇದನ ಕೇಳಿದ್ದರಿಂದ ಇಬ್ಬರು ದೂರವಾಗಿದ್ದೇವೆ ಎಂದು ಕಾನ್​ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಆಕೆ ವಯಸ್ಸು 26.. ಮದುವೆ 6... 7ನೇ ಮದುವೆಯಲ್ಲಿ ರೆಡ್​​ ಹ್ಯಾಂಡ್​ ಆಗಿ ಹಿಡಿದ ಗಂಡ!

ಮಹಿಳೆಯರಿಗೆ ಒಳ್ಳೆಯದಲ್ಲದ ಕೆಲಸಗಳನ್ನು ಮಾಡಲು ನಾನು ಬಯಸುವುದಿಲ್ಲ. ಅವರ ಭಾವನೆಗಳೊಂದಿಗೆ ಆಟ ಕೂಡ ಆಗುತ್ತಿಲ್ಲ. ಅನೈತಿಕತೆ ಬದಲು ನಾನು ಮದುವೆಯಾಗುವುದು ಒಳ್ಳೆಯದು ಎಂದು ನಾನು ಭಾವಿಸಿದ್ದೇನೆ ಎಂದೂ ಕಾನ್​ ಹೇಳಿದ್ದಾರೆ.

ಈಗ ಮದುವೆ ಆಗುತ್ತಿರುವ ಮಹಿಳೆ ಮದುವೆಯಾದ ಕೇವಲ ಒಂದು ಬೇರೆಯಾಗಿದ್ದಳು. ನಾವು ಬೇರ್ಪಟ್ಟು ಬಹಳ ಸಮಯವಾಗಿದ್ದರೂ ನಮ್ಮ ನಡುವಿನ ಪ್ರೀತಿ ಇನ್ನೂ ಜೀವಂತವಾಗಿದೆ ಎಂದು ತಿಳಿಸಿದ್ದಾರೆ. ಇನ್ನು, ಈಗಾಗಲೇ 87 ಮದುವೆಗಳನ್ನು ಆಗಿರುವ ಕಾನ್​ಗೆ ಎಷ್ಟು ಮಕ್ಕಳಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ: ಒಮ್ಮೆ ಜೆಸಿಬಿ ಡ್ರೈವರ್, ಮತ್ತೊಮ್ಮೆ ಅನಾಥ... 28 ವರ್ಷಕ್ಕೆ 24 ಮಹಿಳೆಯರ ಕಟ್ಟಿಕೊಂಡ ಭೂಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.