ಕರ್ನಾಟಕ

karnataka

ದಕ್ಷಿಣ ಕೊರಿಯಾ ಗಡಿಗೆ ಡ್ರೋನ್​ ಬಳಿಕ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

By

Published : Dec 31, 2022, 6:44 AM IST

ದಕ್ಷಿಣ ಕೊರಿಯಾದ ಗಡಿಯಲ್ಲಿ ಕ್ಷಿಪಣಿ ಸದ್ದು - ಡ್ರೋನ್​ ಬಳಿಕ ಮಿಸೈಲ್​ ಉಡಾಯಿಸಿದ ಉತ್ತರ ಕೊರಿಯಾ - ಶಾಂತಿ ಒಪ್ಪಂದ ಮೀರಿದ ಕಿಮ್​ ಜಾಂಗ್​ ಉನ್​ ಸರ್ಕಾರ

north-korea-fires-missile-toward-south-korea-sea
ಡ್ರೋನ್​ ಬಳಿಕ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ಸಿಯೋಲ್:ಗಡಿ ಶಾಂತಿ ಒಪ್ಪಂದವನ್ನು ಉತ್ತರ ಕೊರಿಯಾ ಪದೇ ಪದೆ ಮೀರುತ್ತಿದೆ. ಈಚೆಗಷ್ಟೇ 5 ಡ್ರೋನ್​ಗಳು ದಕ್ಷಿಣ ಕೊರಿಯಾದ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿದ್ದವು. ಇದೀಗ ಕ್ಷಿಪಣಿಗಳನ್ನು ಹಾರಿಸಿರುವ ನಿರಂಕುಶಾಧಿಕಾರಿ ಕಿಮ್​ ಜಾಂಗ್​ ಉನ್​ ಸರ್ಕಾರ ಮತ್ತೆ ಗಡಿ ಶಾಂತಿಯನ್ನು ಕದಡಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಶನಿವಾರ ಬೆಳಗ್ಗೆ ಉತ್ತರದ ಪೂರ್ವದ ಸಮುದ್ರದ ಗಡಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಲಾಗಿದೆ. ಇವು ಗಡಿಗೆ ಬಂದು ಅಪ್ಪಳಿಸಿವೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ. ಆದರೆ, ಎಷ್ಟು ಕ್ಷಿಪಣಿಗಳು, ಎಷ್ಟು ದೂರಕ್ಕೆ ಬಂದು ಬಿದ್ದಿವೆ ಎಂಬ ನಿಖರ ಮಾಹಿತಿ ಹಂಚಿಕೊಂಡಿಲ್ಲ. ಉತ್ತರ ಕೊರಿಯಾ ತನ್ನ ಶಸ್ತ್ರಾಗಾರವನ್ನು ಆಧುನೀಕರಣಗೊಳಿಸಲು ಮತ್ತು ಅಮೆರಿಕದ ಜೊತೆಗಿನ ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ಈ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಭವಿಷ್ಯದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದುವ ಕಾರಣಕ್ಕಾಗಿ ಅದು ಹೀಗೆ ಮಾಡುತ್ತಿದೆ ಎಂದು ಹೇಳಿದ್ದಾರೆ.

2017 ರಿಂದ ಕೊರಿಯಾ ರಾಷ್ಟ್ರಗಳ ಮಧ್ಯೆ ಶಾಂತಿ ಸ್ಥಾಪಿಸಿಕೊಂಡು ಬರಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೀಗ ಉತ್ತರ ಕೊರಿಯಾ ಕುಚೇಷ್ಟೆ ನಡೆಸುತ್ತಿದೆ. ಈ ಹಿಂದೆಯೂ ಉತ್ತರ ಕೊರಿಯಾದ ಕ್ಷಿಪಣಿಗಳು ದಕ್ಷಿಣ ಕೊರಿಯಾದ ಗಡಿ ಬಳಿ ಸ್ಫೋಟಿಸಿದ್ದವು. ಡಿಸೆಂಬರ್​ 26 ರಂದು ವಾಯುಪ್ರದೇಶವನ್ನು ಉಲ್ಲಂಘಿಸಿ ಬಂದ ಉತ್ತರ ಕೊರಿಯಾದ 5 ಡ್ರೋನ್​ಗಳನ್ನು ದಕ್ಷಿಣ ಕೊರಿಯಾದ ಸೇನೆ ಪತ್ತೆ ಮಾಡಿತ್ತು.

ದಾಳಿ ಎಚ್ಚರಿಕೆ ಶಂಕೆಯ ಮೇಲೆ ಫೈಟರ್​ ಜೆಟ್​ಗಳು ಮತ್ತು ಹೆಲಿಕಾಪ್ಟರ್​​ಗಳ ಹಾರಾಟ ನಡೆಸಲಾಯಿತು. ಅಲ್ಲದೇ ಉತ್ತರ ಕೊರಿಯಾದ ಕುತಂತ್ರಕ್ಕೆ ಎದುರಾಗಿ ದಕ್ಷಿಣ ಕೊರಿಯಾವು 3 ಡ್ರೋನ್​ಗಳನ್ನು ಗಡಿಯನ್ನು ನುಗ್ಗಿಸಿ ಹಾರಾಟ ನಡೆಸಿತ್ತು.

ಓದಿ:ಬೂಸ್ಟರ್​ ಡೋಸ್​ ತೆಗೆದುಕೊಳ್ಳುವುದು ಸುರಕ್ಷಿತ: ಸ್ಮಾರ್ಟ್​ವಾಚ್​ ಆಧಾರದಲ್ಲಿ ಇಸ್ರೇಲ್​ ಅಧ್ಯಯನ

TAGGED:

ABOUT THE AUTHOR

...view details