ಕರ್ನಾಟಕ

karnataka

ಉಕ್ರೇನ್, ಚೀನಾ, ಉತ್ತರ ಕೊರಿಯಾ ಸಮಸ್ಯೆಗಳನ್ನು ಮಟ್ಟ ಹಾಕಲು ಜಿ7 ಸಭೆಯಲ್ಲಿ ಚರ್ಚೆ

By

Published : Apr 15, 2023, 1:24 PM IST

ಉಕ್ರೇನ್, ಚೀನಾ, ಉತ್ತರ ಕೊರಿಯಾ ಸಮಸ್ಯೆಗಳನ್ನು ಮಟ್ಟಹಾಕಲು ಜಿ7 ಸಭೆಯಲ್ಲಿ ನಾಯಕರು ಚರ್ಚಿಸಿದ್ದಾರೆ.

diplomats to grapple with Ukraine  G7 diplomats to grapple with Ukraine  G7 diplomats grapple with Ukraine  WAR IN UKRAINE  NORTH KOREAN THREATS  ಮಸ್ಯೆಗಳನ್ನು ಮಟ್ಟ ಹಾಕಲು ಜಿ7 ಸಭೆಯಲ್ಲಿ ಚರ್ಚೆ  ಉತ್ತರ ಕೊರಿಯಾ ಸಮಸ್ಯೆ  ಸಮಸ್ಯೆಗಳನ್ನು ಮಟ್ಟಹಾಕಲು ಜಿ7 ಸಭೆ  ಉಕ್ರೇನ್‌ಗೆ ಅಣುಬಾಂಬ್​ ಹೆದರಿಕೆ  ಉತ್ತರ ಕೊರಿಯಾದ ಬೆದರಿಕೆಗಳು  ಚೀನಾ ತೈವಾನ್ ನಡುವೆ ಯುದ್ಧದ ಭೀತಿ
ಜಿ7 ಸಭೆಯಲ್ಲಿ ಚರ್ಚೆ

ಕರುಯಿಜಾವಾ, ಜಪಾನ್: ಉಕ್ರೇನ್‌ಗೆ ರಷ್ಯಾದ ಅಣುಬಾಂಬ್‌ ಬೆದರಿಕೆ, ಪ್ರತಿಸ್ಪರ್ಧಿ ತೈವಾನ್ ಸುತ್ತಲೂ ಚೀನಾದ ಯುದ್ಧದ ಮಿಲಿಟರಿ ಚಟುವಟಿಕೆ. ಉತ್ತರ ಕೊರಿಯಾದ ಅಭೂತಪೂರ್ವ ಕ್ಷಿಪಣಿ ಪರೀಕ್ಷೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಭಾನುವಾರದಂದು ಕರುಯಿಜಾವಾದಲ್ಲಿ ನಡೆದ ಜಿ7 ರಾಷ್ಟ್ರಗಳ ಸಭೆಯಲ್ಲಿ ಗಂಭೀರವಾಗಿ ಚರ್ಚೆಸಲಾಗಿದೆ.

ಜಿ7 ಸಭೆಯಲ್ಲಿ ಚರ್ಚೆ

ಭದ್ರತಾ ಮಂಡಳಿಯಲ್ಲಿ ರಷ್ಯಾ ಮತ್ತು ಚೀನಾದ ಹಸ್ತಕ್ಷೇಪದ ನಡುವೆ ವಿಶ್ವಸಂಸ್ಥೆ ದುರ್ಬಲಗೊಂಡಿದೆ. ಈ ನಡುವೆ G7 ನಂತಹ ಜಾಗತಿಕ ವೇದಿಕೆಗಳು ಇನ್ನಷ್ಟು ಪ್ರಾಮುಖ್ಯತೆ ಪಡೆದಿವೆ ಎಂದು ಕೆಲವರು ನಂಬುತ್ತಾರೆ. ಜಪಾನ್‌ನ ಕೀಯೊ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕ ಯುಯಿಚಿ ಹೊಸೋಯಾ ಅವರ ಪ್ರಕಾರ, ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಕೊನೆಗೊಳಿಸಲು ಮತ್ತು ಚೀನಾದಿಂದ ತೈವಾನ್‌ ಮೇಲಿನ ಸಂಭಾವ್ಯ ಆಕ್ರಮಣವನ್ನು ತಡೆಯಲು ಈ ವರ್ಷದ G7 ಸಭೆಗಳು ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿವೆ ಎಂದು ಅವರು ಹೇಳಿದ್ದಾರೆ.

ಜಪಾನ್, ಅಮೆರಿಕ, ಇಂಗ್ಲೆಂಡ್​, ಫ್ರಾನ್ಸ್, ಜರ್ಮನಿ, ಕೆನಡಾ, ಇಟಲಿ ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಸುಧಾರಿಸುವ ಮಾರ್ಗಗಳು ಮತ್ತು ಬಡ ದೇಶಗಳಿಗೆ ಮುಖ್ಯವಾದ ಸಮಸ್ಯೆಗಳನ್ನು ಚರ್ಚಿಸುವ ನಿರೀಕ್ಷೆಯಿದೆ.

ಉಕ್ರೇನ್‌ಗೆ ಅಣುಬಾಂಬ್​ ಹೆದರಿಕೆ:ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪರಮಾಣು ಭೀತಿ ಎದುರಾಗಿದ್ದು, ಈ ವಿಷಯ G7 ಚರ್ಚೆಯಲ್ಲಿ ಪ್ರಮುಖವಾಗಿದೆ. ಯುದ್ಧದಲ್ಲಿ ಬಳಸಿದ ಮೊದಲ ಪರಮಾಣು ಬಾಂಬ್‌ನ ಗುರಿಯಾದ ಹಿರೋಷಿಮಾದಲ್ಲಿ ಮುಂದಿನ ತಿಂಗಳು ಶೃಂಗಸಭೆ ನಡೆಯಲಿದೆ. ಉಕ್ರೇನ್‌ನ ವಿರುದ್ಧ ಯುದ್ಧ ಗೆಲ್ಲಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಅಸ್ತ್ರ ಬಳಸಬಹುದು ಎಂಬ ಭಯದ ನಡುವೆ ಈ ವಿಷಯವು ಹೆಚ್ಚು ಪ್ರಮುಖವಾಗಿದೆ.

ಉಕ್ರೇನ್‌ನಲ್ಲಿ ರಷ್ಯಾದ ನಡೆಗಳ ಮೇಲೆ ಪ್ರಭಾವ ಬೀರುವ ಕೆಲವೇ ರಾಷ್ಟ್ರಗಳ ಪೈಕಿ ಚೀನಾವನ್ನು ಗಮನದಲ್ಲಿಡಲಾಗುತ್ತಿದೆ. ವಿಶ್ವದ ಎರಡು ದೊಡ್ಡ ನಿರಂಕುಶಾಧಿಕಾರಗಳ ನಡುವಿನ ವಿದೇಶಾಂಗ ನೀತಿಯ ಹೊಂದಾಣಿಕೆಯ ಬಗ್ಗೆ ಕರುಯಿಜಾವಾದಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಗಮನಹರಿಸಲಾಗಿದೆ.

ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಸರ್ವಾಧಿಕಾರಿ ಪ್ರಚೋದನೆಗಳನ್ನು ಮುಂದುವರಿಸಲು ಹೆಚ್ಚು ಧೈರ್ಯಶಾಲಿಯಾಗಿದ್ದಾರೆ. ಇತ್ತೀಚೆಗೆ ಮಾಸ್ಕೋಗೆ ಪ್ರಯಾಣಿಸಿದ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಗಾಢಗೊಳಿಸುವ ಸಂಬಂಧ ಮಾತುಕತೆ ನಡೆಸಿದ್ದಾರೆ. ಉಕ್ರೇನ್‌ಗೆ ಈಗಾಗಲೇ ಗಣನೀಯವಾದ ಬೆಂಬಲವನ್ನು ಉತ್ತೇಜಿಸಲು ಜಪಾನ್ G7 ಅನ್ನು ಬಳಸಬಹುದು ಎಂದು ಕಾಂಡಾ ಯೂನಿವರ್ಸಿಟಿ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನ ಉಪನ್ಯಾಸಕ ಜೆಫ್ರಿ ಹಾಲ್ ಹೇಳಿದ್ದಾರೆ.

ಚೀನಾ ತೈವಾನ್ ನಡುವೆ ಯುದ್ಧದ ಭೀತಿ:ಚೀನಾ ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುವ ದ್ವೀಪವನ್ನು ಸುತ್ತುವರಿಯಲು ಬೀಜಿಂಗ್ ಇತ್ತೀಚೆಗೆ ವಿಮಾನಗಳು ಮತ್ತು ಹಡಗುಗಳನ್ನು ತೈವಾನ್​ ಸುತ್ತ-ಮುತ್ತ ರವಾನೆ ಮಾಡಿ ತನ್ನ ಮಿಲಟರಿ ಬಲ ಪ್ರದರ್ಶನ ನಡೆಸಿತ್ತು. ಅಷ್ಟೇ ಅಲ್ಲ ಕ್ಸಿ ಅವರ ಇತ್ತೀಚಿನ ಹೇಳಿಕೆಗಳು G7 ಸಭೆಯಲ್ಲಿ ಭಯವನ್ನು ಹೆಚ್ಚಿಸಿವೆ.

ಚೀನಾದ ಆರ್ಥಿಕ ಏರಿಕೆಯನ್ನು ನಿರ್ವಹಿಸುವ ಮಾರ್ಗಗಳನ್ನು G7 ಪರಿಶೀಲಿಸುತ್ತಿರುವಾಗ, ಬೀಜಿಂಗ್ ವ್ಯಾಪಾರ ಮತ್ತು ಹೂಡಿಕೆಗಾಗಿ ಉತ್ಸುಕರಾಗಿರುವ ಪಾಕಿಸ್ತಾನದಿಂದ ಅರ್ಜೆಂಟೀನಾದವರಿಗಿನ ದೇಶಗಳ ಸಂಬಂಧವನ್ನು ಬಲಪಡಿಸುತ್ತಿದೆ. ಇದು ಚೀನಾದ ಜಾಗತಿಕ ಹೆಜ್ಜೆಗುರುತನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುತ್ತದೆ. ಉತ್ತಮ ಆಡಳಿತ ಮತ್ತು ಮಾನವ ಹಕ್ಕುಗಳ ಗೌರವಕ್ಕೆ ಹೂಡಿಕೆಯನ್ನು ಜೋಡಣೆ ಮಾಡುವ ಉತ್ತರ ಅಮೆರಿಕ ಮತ್ತು ಯುರೋಪಿಯನ್ ಪ್ರಯತ್ನಗಳಿಗೆ ಸವಾಲು ಹಾಕುತ್ತದೆ.

ಮುಂದಿನ ತಿಂಗಳು ನಡೆಯಲಿರುವ ನಾಯಕರ ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಕಿಶಿದಾ ಅವರ ನಿರ್ಧಾರವು ಚೀನಾದ ಪ್ರತಿಸ್ಪರ್ಧಿಗಳೊಂದಿಗೆ ಭದ್ರತಾ ಸಹಕಾರವನ್ನು ಬಲಪಡಿಸುವ ಜಪಾನ್‌ನ ಬಯಕೆಯನ್ನು ಸೂಚಿಸುತ್ತದೆ.

ಉತ್ತರ ಕೊರಿಯಾದ ಬೆದರಿಕೆಗಳು: ಈ ವರ್ಷದ G7 ಮಾತುಕತೆಗಳು ರಾಜತಾಂತ್ರಿಕತೆ ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕವಾಗಿವೆ. ಪ್ರತಿಕೂಲವಾದ ಉತ್ತರ ಕೊರಿಯಾವನ್ನು ನಿಶ್ಯಸ್ತ್ರೀಕರಣದ ಮಾತುಕತೆಗಳಿಗೆ ಮರಳಲು ಒತ್ತಡ ಹೇರುವ ಗುರಿಯನ್ನು ಹೊಂದಿದೆ ಎಂದು ಸಿಯೋಲ್‌ನ ಇವಾ ವುಮನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಾರ್ಕ್ ವಾನ್ ಗೊನ್ ಹೇಳಿದ್ದಾರೆ.

ಕಳೆದ ವರ್ಷದಿಂದ ಉತ್ತರ ಕೊರಿಯಾ ಸುಮಾರು 100 ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಇದರಲ್ಲಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಯುಎಸ್ ಮುಖ್ಯ ಭೂಭಾಗವನ್ನು ತಲುಪುವ ಸಾಮರ್ಥ್ಯ ತೋರಿಸಿವೆ. ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ಬೆದರಿಕೆ ಹಾಕುವ ವಿವಿಧ ಶಸ್ತ್ರಾಸ್ತ್ರಗಳನ್ನು ಇದರಲ್ಲಿ ಒಳಗೊಂಡಿವೆ.

ನಾಯಕ ಕಿಮ್ ಜೊಂಗ್ ಉನ್ ಅವರು ಪರಮಾಣು ಅಸ್ತ್ರ ಬಳಸಲು ಉಕ್ರೇನ್ ಮೇಲಿನ ರಷ್ಯಾದ ಯುದ್ಧದ ನೀತಿಯನ್ನ ಅನುಸರಿಸಲು ಕಾಯುತ್ತಿದ್ದಾರೆ ಎನ್ನಲಾಗ್ತಿದೆ. ಬೀಜಿಂಗ್ ಮತ್ತು ಮಾಸ್ಕೋದಲ್ಲಿ ನಡೆದ ಕಳೆದ ವರ್ಷ ಉತ್ತರ ಕೊರಿಯಾದ ಪ್ರಮುಖ ಕ್ಷಿಪಣಿ ಪರೀಕ್ಷೆಗಳ ಮೇಲೆ ಭದ್ರತಾ ಮಂಡಳಿಯ ನಿರ್ಬಂಧಗಳನ್ನು ಬಿಗಿಗೊಳಿಸಲು ಯುಎಸ್ ನೇತೃತ್ವದ ಡ್ರೈವ್ ಅನ್ನು ನಿರ್ಬಂಧಿಸಿದೆ.

ಓದಿ:ತೈವಾನ್ ಸುತ್ತಮುತ್ತ ಮತ್ತೆ ಮಿಲಿಟರಿ ತಾಲೀಮು ಪ್ರಾರಂಭಿಸಿದ ಚೀನಾ: 13 ವಿಮಾನ, 3 ಯುದ್ಧನೌಕೆಗಳು ಪತ್ತೆ

ABOUT THE AUTHOR

...view details