ETV Bharat / bharat

ತೈವಾನ್ ಸುತ್ತಮುತ್ತ ಮತ್ತೆ ಮಿಲಿಟರಿ ತಾಲೀಮು ಪ್ರಾರಂಭಿಸಿದ ಚೀನಾ: 13 ವಿಮಾನ, 3 ಯುದ್ಧನೌಕೆಗಳು ಪತ್ತೆ

author img

By

Published : Apr 8, 2023, 11:55 AM IST

ತೈವಾನ್ ಅಧ್ಯಕ್ಷ ಸಾಯ್‌ ಇಂಗ್‌ ವೆನ್‌ ಅಮೆರಿಕ ಪ್ರವಾಸದಿಂದ ಹಿಂದಿರುಗಿದ ಒಂದು ದಿನದ ಬಳಿಕ ಚೀನಾವು ತೈವಾನ್ ಸುತ್ತಮುತ್ತ ಮಿಲಿಟರಿ ತಾಲೀಮು ಪ್ರಾರಂಭಿಸಿದೆ.

Taiwan
ತೈವಾನ್

ನವದೆಹಲಿ: ತೈವಾನ್​ನ ಸಮುದ್ರ ಪ್ರದೇಶದಲ್ಲಿ ಚೀನಾ ದೇಶವು ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಚೀನಾದ 13 ವಿಮಾನಗಳು ಮತ್ತು ಮೂರು ಯುದ್ಧನೌಕೆಗಳನ್ನು ತೈವಾನ್ ದ್ವೀಪದ ಸುತ್ತಮುತ್ತ ಪತ್ತೆ ಮಾಡಲಾಗಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಟ್ವೀಟ್‌ ಮಾಡಿ ತಿಳಿಸಿದೆ. ಮಾಹಿತಿ ಪ್ರಕಾರ, ಹದಿಮೂರು ಪಿಎಲ್‌ಎ ವಿಮಾನಗಳು ಮತ್ತು 3 ಪೀಪಲ್ಸ್ ಲಿಬರೇಷನ್ ಆರ್ಮಿ ನೇವಿ (PLAN) ಹಡಗುಗಳು ಇಂದು ಬೆಳಗ್ಗೆ 6 ಗಂಟೆಗೆ ಪತ್ತೆಯಾಗಿವೆ.

  • 13 PLA aircraft and 3 PLAN vessels around Taiwan were detected by 6 a.m.(UTC+8) today. R.O.C. Armed Forces have monitored the situation and tasked CAP aircraft, Navy vessels, and land-based missile systems to respond these activities. pic.twitter.com/tAWDXV99Ep

    — 國防部 Ministry of National Defense, R.O.C. 🇹🇼 (@MoNDefense) April 8, 2023 " class="align-text-top noRightClick twitterSection" data=" ">

ಸದ್ಯದ ಪರಿಸ್ಥಿತಿಯ ಕುರಿತು ಮೇಲ್ವಿಚಾರಣೆ ನಡೆಸಲು ಮತ್ತು ಅವರ ಚಟುವಟಿಕೆಗಳನ್ನ ತಿಳಿದುಕೊಳ್ಳಲು ನಮ್ಮ ಸಶಸ್ತ್ರ ಪಡೆ ಸನ್ನದ್ಧವಾಗಿದೆ. ಯದ್ಧ​ ಏರ್ ಪೆಟ್ರೋಲ್ ( CAP ) ವಿಮಾನಗಳು, ನೌಕಾಪಡೆಯ ಹಡಗುಗಳು ಮತ್ತು ಭೂ ಆಧಾರಿತ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ. ಪತ್ತೆಯಾದ ನಾಲ್ಕು ವಿಮಾನಗಳು a - SU - 30, Y - 8 RECCE ಮತ್ತು ಎರಡು J - 16 ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನ ದಾಟಿಕೊಂಡು ತೈವಾನ್‌ನ ನೈಋತ್ಯ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂದು ತೈವಾನ್​ ರಕ್ಷಣಾ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ತೈವಾನ್ ಮೇಲೆ ಆಕ್ರಮಣ ಮಾಡುವ ಸಾಮರ್ಥ್ಯದ ಬಗ್ಗೆ ಚೀನಾಕ್ಕೆ ಅನುಮಾನವಿದೆ : ಸಿಐಎ ಮುಖ್ಯಸ್ಥ

ತೈವಾನ್ ಅಧ್ಯಕ್ಷ ಸಾಯ್​ ಇಂಗ್ ವೆನ್ ಅವರು ಯುನೈಟೆಡ್ ಸ್ಟೇಟ್ಸ್ ಪ್ರವಾಸದಿಂದ ಹಿಂದಿರುಗಿದ ಒಂದು ದಿನದ ನಂತರ ತೈವಾನ್ ಸುತ್ತ ಚೀನಾ ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿಯ ಈಸ್ಟರ್ನ್ ಥೀಯೇಟರ್ ಕಮಾಂಡ್ ಯುನೈಟೆಡ್ ಶಾರ್ಪ್ ಸ್ವೀರ್ಡ್ ಏಪ್ರಿಲ್ 8 ರಿಂದ 10 ರವರೆಗೆ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಹೇಳಿತ್ತು.

ಇದನ್ನೂ ಓದಿ : ಚೀನಾ ಅಟ್ಯಾಕ್ ಮಾಡಿದರೆ ತೈವಾನ್ ರಕ್ಷಿಸುತ್ತೇವೆ : ಅಮೆರಿಕ ಖಡಕ್​​​​ ವಾರ್ನಿಂಗ್​​

ಗುರುವಾರ ಯುಎಸ್ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರನ್ನು ತೈವಾನ್​ನ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅವರು ಭೇಟಿಯಾದರು. ತೈವಾನ್ ಅಧ್ಯಕ್ಷರು ಮೊದಲ ಬಾರಿಗೆ ಯುಎಸ್ ಹೌಸ್ ಸ್ಪೀಕರ್ ಅವರನ್ನು ಭೇಟಿಯಾಗಿದ್ದಾರೆ. ಆದರೆ, ಸಾಯ್​ ಅಮೆರಿಕಕ್ಕೆ ಭೇಟಿ ನೀಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ತೈವಾನ್‌ ಮತ್ತು ಯಾವುದೇ ವಿದೇಶಿ ಸರ್ಕಾರಗಳ ನಡುವಿನ ಮಾತುಕತೆ ದೇಶದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಚೀನಾ ಪ್ರತಿಪಾದಿಸಿದೆ.

ಹೀಗಾಗಿ, ಅಧ್ಯಕ್ಷರು ಅಮೆರಿಕ ಪ್ರವಾಸ ಮುಗಿಸಿ ತೈವಾನ್‌ಗೆ ಹಿಂದಿರುಗಿದ ಮರು ದಿನವೇ ಸೇನಾ ಕಾರ್ಯಾಚರಣೆ ಮುಂದುವರೆಸಿದೆ. ಇದಕ್ಕೂ ಮುನ್ನ ಶುಕ್ರವಾರ, ತೈವಾನ್ ಅಧ್ಯಕ್ಷ ವೆನ್ ಅವರ ಯುಎಸ್ ಭೇಟಿಯ ಸಂದರ್ಭದಲ್ಲಿ ಆತಿಥ್ಯ ವಹಿಸಿದ್ದ ಎರಡು ಅಮೆರಿಕನ್ ಸಂಸ್ಥೆಗಳ ಮೇಲೆ ಚೀನಾ ನಿರ್ಬಂಧ ವಿಧಿಸಿತ್ತು.

ಇದನ್ನೂ ಓದಿ : ಚೀನಾ - ತೈವಾನ್ ಬಿಕ್ಕಟ್ಟು : ದ್ವೀಪ ರಾಷ್ಟ್ರಕ್ಕೆ ಅಮೆರಿಕದ ಶಸ್ತ್ರಾಸ್ತ್ರ ಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.