ಕರ್ನಾಟಕ

karnataka

ಉಕ್ರೇನ್​ ಮೇಲೆ ರಷ್ಯಾ ದಾಳಿ ವಿನಾಶಕ್ಕೆ ಕಾರಣವಾಗಲಿದೆ: ಅಮೆರಿಕ ಅಧ್ಯಕ್ಷ ಜೋ ಬೈಡನ್

By

Published : Feb 24, 2022, 9:44 AM IST

ರಷ್ಯಾದ ಮಿಲಿಟರಿ ಪಡೆಗಳಿಂದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿಗೆ ಒಳಗಾದ ಉಕ್ರೇನ್ ಜನರೊಂದಿಗೆ ಇಡೀ ಪ್ರಪಂಚವಿದೆ. ಪುಟಿನ್ ಪೂರ್ವಯೋಜಿತವಾಗಿ ಯುದ್ಧವನ್ನು ಶುರು ಮಾಡಿದ್ದಾರೆ. ಇದು ಭಾರಿ ದುರಂತ, ಜೀವಹಾನಿ ಮತ್ತು ಮಾನವನ ವಿನಾಶಕ್ಕೆ ನಾಂದಿ ಹಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕಳವಳ ವ್ಯಕ್ತಪಡಿಸಿದ್ದಾರೆ.

US President Joe Biden
ಅಧ್ಯಕ್ಷ ಜೋ ಬಿಡೆನ್​

ವಾಷಿಂಗ್ಟನ್​: ಉಕ್ರೇನ್​ ಮೇಲೆ ರಷ್ಯಾ ದಾಳಿ ವಿನಾಶಕ್ಕೆ ಕಾರಣವಾಗಲಿದೆ. ರಷ್ಯಾದ ಈ ಕ್ರಮದ ವಿರುದ್ಧ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಸೂಕ್ತ ಮತ್ತು ನಿರ್ಣಾಯಕ ರೀತಿಯಲ್ಲಿ ಉತ್ತರಿಸಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.

ಉಕ್ರೇನ್​ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಅವರು, ರಷ್ಯಾದ ಮಿಲಿಟರಿ ಪಡೆಗಳಿಂದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿಗೆ ಒಳಗಾದ ಉಕ್ರೇನ್ ಜನರೊಂದಿಗೆ ಇಡೀ ಪ್ರಪಂಚವಿದೆ. ಪುಟಿನ್ ಪೂರ್ವಯೋಜಿತವಾಗಿ ಯುದ್ಧವನ್ನು ಶುರು ಮಾಡಿದ್ದಾರೆ. ಇದು ಭಾರಿ ದುರಂತ, ಜೀವಹಾನಿ ಮತ್ತು ಮಾನವನ ವಿನಾಶಕ್ಕೆ ನಾಂದಿ ಹಾಡಲಿದೆ. ಇದಕ್ಕೆ ರಷ್ಯಾವೇ ಪೂರ್ಣ ಹೊಣೆಯಾಗಲಿದೆ ಎಂದು ಹೇಳಿದ್ದಾರೆ.

ಶ್ವೇತಭವನದಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತೇನೆ. ರಾಷ್ಟ್ರೀಯ ಭದ್ರತಾ ತಂಡದಿಂದ ನಿಯಮಿತವಾಗಿ ಮಾಹಿತಿ ಪಡೆಯುತ್ತೇನೆ. ನಾಳೆ G7 ದೇಶಗಳ ನಾಯಕರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ನ್ಯಾಟೋ ಮಿತ್ರರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸಿದರೆ ಕಂಡರಿಯದ ಪರಿಣಾಮ': ವಿಶ್ವದ ಇತರೆ ರಾಷ್ಟ್ರಗಳಿಗೆ ಪುಟಿನ್​​ ಎಚ್ಚರಿಕೆ

ABOUT THE AUTHOR

...view details