ಕರ್ನಾಟಕ

karnataka

ಅಮೆರಿಕನ್​ ಓಪನ್​ ಗೆದ್ದ ಮೆಡ್ವೆಡೆವ್ ಅಭಿನಂದಿಸಿದ ವ್ಲಾಡಿಮಿರ್ ಪುಟಿನ್​

By

Published : Sep 14, 2021, 8:59 AM IST

Putin hails Medvedev's win over Djokovic in US Open final

ಚೊಚ್ಚಲ ಗ್ರಾಂಡ್​ಸ್ಲಾಮ್ ಗೆದ್ದ ರಷ್ಯಾದ ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಅವರನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದಿಸಿದ್ದಾರೆ.

ಮಾಸ್ಕೋ, ರಷ್ಯಾ:ಯುಎಸ್​ ಓಪನ್​​​ನಲ್ಲಿ ವಿಶ್ವನಂಬರ್​ ಒನ್​ ನೋವಾಕ್​ ಜೊಕೊವಿಕ್​​​​ ಸೋಲು ಅನುಭವಿಸಿದ್ದು, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮಡ್ವೆಡೆವ್ ಅವರನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದಿಸಿದ್ದಾರೆ.

ಇದೊಂದು ಬ್ರಿಲಿಯಂಟ್ ವಿಕ್ಟರಿ ಎಂದು ಬಣ್ಣಿಸಿರುವ ಪುಟಿನ್ ಯುಎಸ್​​ ಓಪನ್ ಫೈನಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಕೌಶಲ್ಯ ಮತ್ತು ಪರಿಶ್ರಮವನ್ನು ನೀವು ಪ್ರದರ್ಶಿಸಿದ್ದೀರಿ ಎಂದಿರುವ ಅವರು ನಿಮ್ಮ ಎದುರಾಳಿಗೆ ಯಾವುದೇ ಅವಕಾಶ ನೀಡದೇ, ಆತ್ಮವಿಶ್ವಾಸದಿಂದ ಆಟವಾಡುವ ಮೂಲಕ ಗೆಲುವು ಸಾಧಿಸಿದ್ದೀರಿ ಎಂದು ಮೆಡ್ವೆಡೆವ್​ಗೆ ಮೆಚ್ಚುಗೆ ಸೂಚಿಸಿದ್ದಾರೆ.

ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮರಿಯಾ ಜಖರೋವಾ ಅವರು ಮೆಡ್ವೆಡೆವ್ ಅವರನ್ನು ಅಭಿನಂದಿಸಿದ್ದಾರೆ. ಮೆಡ್ವಡೆವ್ ಅವರು ಇತಿಹಾಸದ ಶ್ರೇಷ್ಠ ಟೆನಿಸ್ ಆಟಗಾರ ಎಂದು ಬಣ್ಣಿಸಿದ್ದಾರೆ.

ಪ್ರಶಸ್ತಿ ನೀಡುವ ಸಮಯದಲ್ಲಿ ಮೆಡ್ವೆಡೆವ್ ಅವರು ಭಾಷಣದಿಂದ ನಾನು ಪ್ರಭಾವಿತನಾಗಿದ್ದೇವೆ. ಮೆಡ್ವೆಡೆವ್ ನೊವಾಕ್ ಜೊಕೊವಿಕ್ ಅವರ ಕೌಶಲ್ಯ ಮತ್ತು ಸಾಧನೆಗಳಿಗೂ ಗೌರವ ಸಲ್ಲಿಸಿದ್ದಾರೆ ಎಂದು ಜಖರೋವಾ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಸೆರ್ಬಿಯನ್ ಟೆನ್ನಿಸ್ ಆಟಗಾರ ನೋವಾಕ್​ ಜೊಕೊವಿಕ್ ಯುಎಸ್​ ಓಪನ್ ಫೈನಲ್​ನಲ್ಲಿ ಮೆಡ್ವೆಡೆವ್ ವಿರುದ್ಧ 6-4, 6-4, 6-4 ನೇರ ಸೆಟ್​ಗಳಿಂದ ಸೋಲು ಅನುಭವಿಸಿದ್ದಾರೆ.

ಇದನ್ನೂ ಓದಿ:ಇಸಿಬಿ ಆರ್ಥಿಕ ಬಿಕ್ಕಟ್ಟು ಶಮನಕ್ಕೆ ಬಿಸಿಸಿಐ ವಿಶೇಷ ಆಫರ್​: ಏನದು ಗೊತ್ತಾ?

ABOUT THE AUTHOR

...view details