ಕರ್ನಾಟಕ

karnataka

ನಾಲ್ಕು ವಾರ ದಾಟಿದ ರಷ್ಯಾ - ಉಕ್ರೇನ್​ ಯುದ್ಧ.. ಉಕ್ರೇನ್​ಗೆ ಬ್ರಿಟನ್, ಅಮೆರಿಕ ನೆರವು​!

By

Published : Mar 24, 2022, 7:30 AM IST

ನಾಲ್ಕು ವಾರಗಳು ಮುಗಿದರೂ ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಯುದ್ಧ ಮುಂದುವರೆದಿದೆ. ಎರಡು ರಾಷ್ಟ್ರಗಳಲ್ಲಿ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ಉಕ್ರೇನ್​ನ ಲಕ್ಷಾಂತರ ಪ್ರಜೆಗಳು ಹಸಿವಿನಿಂದ ಬಳಲುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಅಧ್ಯಕ್ಷರಿಬ್ಬರೂ ಯುದ್ಧ ನಿಲ್ಲಿಸುವ ನಿರ್ಧಾರಕ್ಕೆ ಮಾತ್ರ ಬರದೇ ಇರುವುದು ಶೋಚನೀಯ ಸಂಗತಿಯಾಗಿದೆ.

Britain giving Ukraine thousands more missiles, Russia and Ukraine war, Britain Prime Minister Boris Johnson, NATO and Seven groups, ಉಕ್ರೇನ್‌ಗೆ ಸಾವಿರಾರು ಕ್ಷಿಪಣಿಗಳು ನೀಡುತ್ತಿರುವ ಬ್ರಿಟನ್​ ಮತ್ತು ಅಮೆರಿಕ ಸರ್ಕಾರ, ರಷ್ಯಾ ಮತ್ತು ಉಕ್ರೇನ್​ ಯುದ್ಧ, ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್, ನ್ಯಾಟೋ ಮತ್ತು ಸೆವೆನ್​ ಗ್ರೂಪ್​,
ಉಕ್ರೇನ್​ಗೆ ಸಹಾಯ ಹಸ್ತಚಾಚುತ್ತಿರುವ ಬ್ರಿಟನ್

ಲಂಡನ್: ನಾಲ್ಕು ವಾರಗಳು ಕಳೆದ್ರೂ ಯುದ್ಧ ನಿಲ್ಲಿಸುವ ತೀರ್ಮಾನಕ್ಕೆ ರಷ್ಯಾ ಮತ್ತು ಉಕ್ರೇನ್​ ಅಧ್ಯಕ್ಷರು ಮುಂದಾಗುತ್ತಿಲ್ಲ. ಇದರ ಮಧ್ಯೆ ಬ್ರಿಟನ್ ಮತ್ತು ಅಮೆರಿಕ ಸರ್ಕಾರ ಸಾವಿರಾರು ಕ್ಷಿಪಣಿಗಳು ಸೇರಿದಂತೆ ಮಿಲಿಟರಿ ಉಪಕರಣಗಳನ್ನು ಉಕ್ರೇನ್​ಗೆ ನೀಡಲು ಮುಂದಾಗಿವೆ. ಪ್ರಧಾನಿ ಬೋರಿಸ್ ಜಾನ್ಸನ್ ಸಾವಿರಾರು ಕ್ಷಿಪಣಿಗಳನ್ನು ಉಕ್ರೇನ್​ಗೆ ಕಳುಹಿಸಲು ಸಜ್ಜಾಗಿದ್ದಾರೆ.

ನ್ಯಾಟೋ ಮತ್ತು ಗ್ರೂಪ್ ಆಫ್ ಸೆವೆನ್‌ನ ನಾಯಕರೊಂದಿಗೆ ಮಾತುಕತೆ ನಡೆಸಲು ಪ್ರಧಾನಿ ಜಾನ್ಸನ್ ಗುರುವಾರ (ಇಂದು) ಬ್ರಸೆಲ್ಸ್‌ಗೆ ಪ್ರಯಾಣಿಸುತ್ತಿದ್ದಾರೆ. ಅವರ ಭೇಟಿಯ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಉಕ್ರೇನ್​ಗೆ ಹೆಚ್ಚು ನೆರವು ಒದಗಿಸುವ ನಿರೀಕ್ಷೆಯಿದೆ. ಇದರಲ್ಲಿ ಆ್ಯಂಟಿ - ಟ್ಯಾಂಕ್ ಮತ್ತು ಹೆಚ್ಚು ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ 6,000 ಕ್ಷಿಪಣಿಗಳ ಕೊಡುಗೆಯೂ ಸೇರಿದೆ ಎಂದು ತಿಳಿದು ಬಂದಿದೆ.

ಓದಿ:ಬಿರ್ಭೂಮ್ ಹತ್ಯಾಕಾಂಡ: ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ ದೀದಿ, ಅಪರಾಧಿಗಳನ್ನು ಕ್ಷಮಿಸಬೇಡಿ ಎಂದ ಮೋದಿ

ಉಕ್ರೇನ್‌ಗೆ ಮಿಲಿಟರಿ ಮತ್ತು ಆರ್ಥಿಕ ಬೆಂಬಲವನ್ನು ಹೆಚ್ಚಿಸಲು ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್​ ಸರ್ಕಾರ) ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತದೆ. ಈ ಹೋರಾಟದಲ್ಲಿ ಉಕ್ರೇನ್​ ರಕ್ಷಣೆಯನ್ನು ಬಲಪಡಿಸುತ್ತದೆ ಎಂದು ಜಾನ್ಸನ್ ಹೇಳಿದ್ದಾರೆ. ಈಗಾಗಲೇ 4,000 ಕ್ಕೂ ಹೆಚ್ಚು ಆ್ಯಂಟಿ-ಟ್ಯಾಂಕ್ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಬ್ರಿಟನ್​ ಸರ್ಕಾರ ಕಳುಹಿಸಿದೆ. ರಷ್ಯಾ ಮತ್ತು ಉಕ್ರೇನ್‌ನಲ್ಲಿ ತಪ್ಪು ಮಾಹಿತಿಗಳನ್ನು ಹರಡದಂತೆ ನೋಡಿಕೊಳ್ಳಲು ಬಿಬಿಸಿ ವರ್ಲ್ಡ್ ಸರ್ವೀಸ್‌ಗೆ ತುರ್ತು ನಿಧಿಯಲ್ಲಿ ಸುಮಾರು 4 ಮಿಲಿಯನ್ ಪೌಂಡ್‌ಗಳನ್ನು ($5.3 ಮಿಲಿಯನ್) ಒದಗಿಸುತ್ತಿದೆ ಎಂದು ಜಾನ್ಸನ್​​ ಸರ್ಕಾರ ಹೇಳುತ್ತಿದೆ.

ಅಮೆರಿಕ ಸಹಾಯ:ಕೀವ್​ ನಗರ ಮೇಲೆ ಯಾವುದೇ ಪ್ರಗತಿ ಸಾಧಿಸದ ಹಿನ್ನೆಲೆ ರಷ್ಯಾ ಗ್ರೌಂಡ್​ ಫೋರ್ಸ್​ ಕೀವ್​ನಿಂದ ಸುಮಾರು 15-20 ಕಿಲೋಮೀಟರ್ (9-12 ಮೈಲುಗಳು) ಮಧ್ಯದಲ್ಲಿ ರಕ್ಷಣಾತ್ಮಕ ಹೋರಾಟ ಮುಂದುವರೆಸುತ್ತಿರುವಂತೆ ತೋರುತ್ತಿದೆ ಎಂದು ಅಮೆರಿಕ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಷ್ಯಾ ಪಡೆಗಳು ಕೀವ್​ ನಗರದೊಳಗೆ ಪ್ರವೇಶಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ ಕೀವ್‌ನ ಪೂರ್ವಕ್ಕೆ ಉಕ್ರೇನಿಯನ್ ಪಡೆಗಳು ರಷ್ಯಾದ ಸೈನಿಕರನ್ನು ಮತ್ತಷ್ಟು ದೂರ ತಳ್ಳಲು ಸಮರ್ಥವಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಓದಿ:ಟಾಟಾ ಬೈ ಬೈ ಟು ಮಾಸ್ಕ್​​.. ಮುಂಬೈನಲ್ಲಿ ಮುಖಗವಸು​ ಕಡ್ಡಾಯ ನಿಯಮ ಶೀಘ್ರವೇ ರದ್ದು!

ರಷ್ಯಾದ ಪಡೆಗಳು ಪೂರ್ವ ಡೊನ್‌ಬಾಸ್ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್‌ ವಶಕ್ಕೆ ಹೆಚ್ಚಿನ ಪ್ರಯತ್ನ ಮಾಡುತ್ತಿವೆ. ಅಜೋವ್ ಸಮುದ್ರದಲ್ಲಿ ರಷ್ಯಾದ ಹಡಗುಗಳು ನಡೆಸುತ್ತಿರುವ ಕೆಲವು ಚಟುವಟಿಕೆಗಳನ್ನು ಅಮೆರಿಕ ಗಮನಿಸಿದೆ. ವಾಹನಗಳು ಸೇರಿದಂತೆ ಲ್ಯಾಂಡಿಂಗ್ ಹಡಗುಗಳನ್ನು ತೀರಕ್ಕೆ ಕಳುಹಿಸುವ ಪ್ರಯತ್ನಗಳು ಕಂಡುಬರುತ್ತವೆ ಎಂದು ಅಮೆರಿಕ ಅಧಿಕಾರಿ ಹೇಳಿದರು.

ಅಮೆರಿಕದಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ಭದ್ರತಾ ನೆರವು ಉಕ್ರೇನ್‌ಗೆ ಮುಂದುವರೆಸಿದೆ. U.S. ಅನುಮೋದಿಸಿದ $350 ಮಿಲಿಯನ್ ಪ್ಯಾಕೇಜ್‌ನಿಂದ ಅಂತಿಮ ಸಾಗಣೆಗಳು ಮುಂದಿನ ದಿನದಲ್ಲಿ ಉಕ್ರೇನ್‌ಗೆ ಆಗಮಿಸಲಿವೆ ಮತ್ತು ಇತ್ತೀಚಿನ $800 ಮಿಲಿಯನ್ ಪ್ಯಾಕೇಜ್‌ನಿಂದ ಮೊದಲ ಸಾಗಣೆಗಳು ಶೀಘ್ರದಲ್ಲೇ ಉಕ್ರೇನ್​ ತಲುಪುತ್ತವೆ ಎಂದು ಅಮೆರಿಕದ ಅಧಿಕಾರಿ ತಿಳಿಸಿದ್ದಾರೆ.


ABOUT THE AUTHOR

...view details