ETV Bharat / bharat

ಟಾಟಾ ಬೈ ಬೈ ಟು ಮಾಸ್ಕ್​​.. ಮುಂಬೈನಲ್ಲಿ ಮುಖಗವಸು​ ಕಡ್ಡಾಯ ನಿಯಮ ಶೀಘ್ರವೇ ರದ್ದು!

author img

By

Published : Mar 23, 2022, 7:34 PM IST

ದೇಶದಲ್ಲಿ ಜಾರಿಯಲ್ಲಿರುವ ಕೋವಿಡ್​​ ನಿಯಮಾವಳಿಗಳು/ಮಾರ್ಗಸೂಚಿಗಳು ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿವೆ. ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ಸಹ ಹಂಚಿಕೊಂಡಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮಾತ್ರ ಕಡ್ಡಾಯವಾಗಿರಲಿದೆ..

Mumbai will soon be mask free
Mumbai will soon be mask free

ಮುಂಬೈ(ಮಹಾರಾಷ್ಟ್ರ): ಕೊರೊನಾ ಮಾಹಾಮಾರಿ ವೇಳೆ ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಈಗಲೂ ಈ ನಿಯಮ ಜಾರಿಯಲ್ಲಿದೆ. ಆದರೆ, ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ. ಇದೇ ಕಾರಣಕ್ಕಾಗಿ ವಾಣಿಜ್ಯ ನಗರಿ ಮುಂಬೈ ಮಾಸ್ಕ್​ ಮುಕ್ತವಾಗಲಿದೆ. ಮುಖಗವಸು ಹಾಕಿಕೊಳ್ಳುವ ಕಡ್ಡಾಯ ನಿಯಮ ಶೀಘ್ರದಲ್ಲೇ ರದ್ದುಗೊಳಿಸಲು ಅಲ್ಲಿನ ಮಹಾನಗರ ಪಾಲಿಕೆ ಮುಂದಾಗಿದೆ.

ದೇಶದಲ್ಲಿ ಕೊರೊನಾ ಹಾವಳಿ ಶುರುವಾದಾಗಿನಿಂದಲೂ ಜನರು ಮುಖಕ್ಕೆ ಮಾಸ್ಕ್​ ಹಾಕಿಕೊಂಡು ತಮ್ಮ ದಿನನಿತ್ಯದ ಕೆಲಸದಲ್ಲಿ ಭಾಗಿಯಾಗುವಂತಹ ಅನಿವಾರ್ಯತೆ ನಿರ್ಮಾಣಗೊಂಡಿದೆ. ಆದರೆ, ದೇಶದಲ್ಲಿ ಕೋವಿಡ್ ಸೋಂಕಿತ ಪ್ರಕರಣ ಇದೀಗ ಕಡಿಮೆಯಾಗಿದ್ದು, ಮಹಾರಾಷ್ಟ್ರದ ಮುಂಬೈನಲ್ಲೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ, ಮಾಸ್ಕ್ ಕಡ್ಡಾಯ ನಿಯಮ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಮಹಾನಗರ ಪಾಲಿಕೆ ಮುಂದಿನ ನಾಲ್ಕೈದು ದಿನಗಳಲ್ಲಿ ಈ ಘೋಷಣೆ ಹೊರ ಹಾಕಲಿದೆ.

Mumbai will soon be mask free
ಮಾಸ್ಕ್​ ಕಡ್ಡಾಯ ನಿಯಮ ಶೀಘ್ರವೇ ಮುಂಬೈನಲ್ಲಿ ರದ್ದು

ಇದನ್ನೂ ಓದಿ: ಐಪಿಎಲ್​ ವೀಕ್ಷಣೆಗೆ ಶೇ. 25ರಷ್ಟು ಪ್ರೇಕ್ಷಕರಿಗೆ ಅವಕಾಶ; ಟಿಕೆಟ್ ಮಾರಾಟ ಈಗಾಗಲೇ ಶುರು

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಲಿಕೆ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಣಿ, ಮಾಸ್ಕ್ ಕಡ್ಡಾಯ ನಿಯಮ ಸಡಿಲಗೊಳಿಸಲು ಮುಂದಾಗಿದ್ದು, ಮಾರ್ಷಲ್​​ಗಳಿಗೆ ನೀಡಿರುವ ಅಧಿಕಾರ ಹಿಂಪಡೆದುಕೊಳ್ಳಲು ಮುಂದಾಗಿದ್ದೇವೆ. ಮಾಸ್ಕ್ ಕಡ್ಡಾಯ ನಿಯಮ ಹಿಂಪಡೆದುಕೊಳ್ಳುವ ಪ್ರಸ್ತಾವನೆ ಸಿದ್ಧಪಡಿಸಲಾಗ್ತಿದೆ.

ಮುಂದಿನ ಕೆಲ ದಿನಗಳಲ್ಲಿ ಈ ನಿರ್ಧಾರ ಹೊರಬರಲಿದೆ ಎಂದು ತಿಳಿಸಿದ್ದಾರೆ. ಕೋವಿಡ್ ಉತ್ತುಂಗದಲ್ಲಿದ್ದ ವೇಳೆ ಕಡ್ಡಾಯವಾಗಿ ಮುಖವಾಡ ಹಾಕಿಕೊಳ್ಳುವಂತೆ ಮುಂಬೈ ಜನರಿಗೆ ಸೂಚನೆ ನೀಡಲಾಗಿತ್ತು. ಮಾಸ್ಕ್​ ಧರಿಸಲು ವಿಫಲವಾದವರಿಗೆ ದಂಡ ಸಹ ವಿಧಿಸಲಾಗಿದೆ. ಮಹಾನಗರ ಪಾಲಿಕೆ ನಿರ್ಧಾರಕ್ಕೆ ಹೆದರಿ ಎಲ್ಲರೂ ನಿಯಮ ಪಾಲನೆ ಮಾಡಿರುವ ಕಾರಣ ಇದೀಗ 3ನೇ ಅಲೆ ಹತೋಟಿಗೆ ಬಂದಿದೆ.

ದೇಶದಲ್ಲಿ ಜಾರಿಯಲ್ಲಿರುವ ಕೋವಿಡ್​​ ನಿಯಮಾವಳಿಗಳು/ಮಾರ್ಗಸೂಚಿಗಳು ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿವೆ. ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ಸಹ ಹಂಚಿಕೊಂಡಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಮಾತ್ರ ಕಡ್ಡಾಯವಾಗಿರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.