ಬೀಜಿಂಗ್:ಆಗಸ್ಟ್ 25 ರಂದು ಮ್ಯಾನ್ಮಾರ್ ಮೂಲಕ ಹಿಂದೂ ಮಹಾಸಾಗರ ಪ್ರವೇಶಿಸುವ ಹೊಸ ರೈಲು ಮಾರ್ಗವನ್ನು ಚೀನಾ ಗಡಿಯಲ್ಲಿ ಉದ್ಘಾಟಿಸಲಾಗಿದೆ. ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡುವಿನಿಂದ ಚೀನಾದ ಯುನ್ನಾನ್ ಪ್ರಾಂತ್ಯ ಹಾಗೂ ಮ್ಯಾನ್ಮಾರ್ನ ಚಿನ್ ಶ್ವೆ ಹಾವ್ವರೆಗೂ ಈ ರೈಲು ಮಾರ್ಗ ವಿಸ್ತರಿಸಿದೆ.
ಈ ರೈಲು ಮಾರ್ಗವು ಚೀನಾಗೆ ಸಿಂಗಾಪುರ ಬಂದರಿನಿಂದ ಮ್ಯಾನ್ಮಾರ್ ಮೂಲಕ ಸರಕು ಸಾಗಿಸಲು ಅನುವು ಮಾಡಿಕೊಡುತ್ತದೆ. ಸಿಂಗಾಪುರ ಬಂದರಿಂದ ಯಾಂಗೋನ್ ಬಂದರಿಗೆ ಸರಕುಗಳನ್ನು ಸಾಗಿಸಲಾಗುವುದು. ಅಲ್ಲಿಂದ ಅದನ್ನು ಕೊಕಾಂಗ್ ಸ್ವ - ಆಡಳಿತ ವಲಯದ ಚಿನ್ ಶ್ವೇ ಹಾವ್ಗೆ ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ನಂತರ ಲಿಂಕಾಂಗ್ನಿಂದ ಚೆಂಗ್ಡುಗೆ ರೈಲಿನ ಮೂಲಕ ಸಾಗಿಸಲಾಗುತ್ತದೆ. ಮ್ಯಾನ್ಮಾರ್ನ ಚೀನೀ ರಾಯಭಾರ ಕಚೇರಿಯ ಪ್ರಕಾರ, ಲಿಂಕಾಂಗ್ನಿಂದ ರೈಲ್ವೆ ಮೂಲಕ ಚೆಂಗ್ಡುಗೆ ಹೋಗಲು ಮೂರು ದಿನಗಳು ಬೇಕಾಗುತ್ತದೆ.
ಈ ಮಾರ್ಗವು ಪಶ್ಚಿಮ ಚೀನಾವನ್ನು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುವ ಮೊದಲ ಮಾರ್ಗವಾಗಿದೆ. ಜತೆಗೆ ಯುನಾನ್ ಪ್ರಾಂತ್ಯಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳಲು ಬೇಕಾದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಮಾರ್ಗವು ಮ್ಯಾನ್ಮಾರ್ ಭಾಗದಲ್ಲಿ ಮಂಡಲೇ, ಲಶಿಯೊ ಮತ್ತು ಹ್ಸೆನ್ವಿ ಮೂಲಕ ಹಾದು ಹೋಗುತ್ತದೆ. ಈ ಮಾರ್ಗವು ಮ್ಯಾನ್ಮಾರ್ ನ ಸೇನಾ ಆಡಳಿತಕ್ಕೆ ಆದಾಯ ಒದಗಿಸುತ್ತಿದ್ದು, ಚೀನಾ ಮತ್ತು ಮ್ಯಾನ್ಮಾರ್ ಗೆ ಅಂತಾರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗುವ ನಿರೀಕ್ಷೆಯಿದೆ.