ETV Bharat / international

ತಾಲಿಬಾನ್‌ಗೆ ಭಾರತದ ಜೊತೆ ವ್ಯಾಪಾರ ಸಂಬಂಧ ಮುಂದುವರಿಸುವ ಬಯಕೆ

author img

By

Published : Aug 31, 2021, 2:10 PM IST

ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನ್‌ನಿಂದ ಹೊರ ನಡೆದ ಬಳಿಕ ಮತ್ತಷ್ಟು ರೆಕ್ಕೆ ಪುಕ್ಕಗಳು ಬಂದಂತಾಗಿರುವ ತಾಲಿಬಾನ್‌ ಆರ್ಥಿಕ ನೆರವಾಗಿ ಮುಂದೇನು ಎಂಬ ಚಿಂತೆಯಲ್ಲಿದೆ. ಈ ನಡುವೆ ಭಾರತ ಉಪಖಂಡಕ್ಕೆ ಬಹಳ ಮಹತ್ವದ್ದಾಗಿದೆ. ನೆರೆಯ ಭಾರತದ ಜೊತೆಗೆ ಅಫ್ಘಾನಿಸ್ತಾನದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಮುಂದುವರಿಸಲು ತಾಲಿಬಾನ್‌ ಬಯಸುತ್ತದೆ ಎಂದು ಉಗ್ರ ಸಂಘಟನೆ ಹೇಳಿದೆ.

Taliban playing the India card to get recognition: expert
ತಾಲಿಬಾನ್‌ಗೆ ಭಾರತದ ಜೊತೆ ವ್ಯಾಪಾರ ಸಂಬಂಧ ಮುಂದುವರಿಸುವ ಬಯಕೆ!

ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ನಂತರ ನೂರಾರು ಮಂದಿ ನಾಗಕರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರ ಸಂಘಟನೆಯ ವಿರುದ್ಧ ವಿಶ್ವದ ಏಜೆನ್ಸಿಗಳು ಸಮರ ಸಾರಿದ್ದು, ಆರ್ಥಿಕ ನೆರವನ್ನು ಸಂಪೂರ್ಣವಾಗಿ ಬಂದ್‌ ಮಾಡಿವೆ. ಇದರ ಬೆನ್ನಲ್ಲೇ ತಾಲಿಬಾನ್‌ಗಳು ನೆರೆದೇಶಗಳ ಜೊತೆ ಸಂಪರ್ಕಕ್ಕೆ ಪ್ರಯತ್ನಿಸುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್‌ ನಾಯಕ ಶೇರ್ ಮೊಹಮ್ಮದ್ ಸ್ಟಾನೆಕ್‌ಜಾಯ್, ಭಾರತ ಉಪಖಂಡಕ್ಕೆ ಬಹಳ ಮಹತ್ವದ್ದಾಗಿದೆ. ನೆರೆಯ ಭಾರತದ ಜೊತೆಗೆ ಅಫ್ಘಾನಿಸ್ತಾನದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧ ಮುಂದುವರಿಸಲು ತಾಲಿಬಾನ್‌ ಬಯಸುತ್ತದೆ ಎಂದು ಹೇಳಿದ್ದಾರೆ. ಆದ್ರೆ, ಜಗತ್ತಿನ ಎದುರು ಮಾನ್ಯತೆಗಾಗಿ ತಾಲಿಬಾನ್‌ ಇದೀಗ ಭಾರತದ ಹೆಸರನ್ನು ಬಳಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಟಿವಿ ಭಾರತ ಜೊತೆ ಮಾತನಾಡಿದ ಮಾಜಿ ರಾಯಭಾರಿ ಜಿತೇಂದ್ರ ತ್ರಿಪಾಠಿ, ಮನ್ನಣೆ ಪಡೆಯುವುದಕ್ಕಾಗಿ ತಾಲಿಬಾನ್ ಭಾರತದ ಬಗ್ಗೆ ಇಂತಹ ಹೇಳಿಕೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

ಭಾರತವು ಅಫ್ಘಾನಿಸ್ತಾನ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ದಿದ್ದರೂ 2018 ರಿಂದ ತಾಲಿಬಾನಿಗಳೊಂದಿಗೆ ಪರೋಕ್ಷ ಸಂಪರ್ಕದಲ್ಲಿದೆ. ಈ ವರ್ಷದ ಆರಂಭದಲ್ಲಿ ಸ್ವಲ್ಪಮಟ್ಟಿಗೆ ನೇರ ಸಂಪರ್ಕದಲ್ಲಿದೆ ಎಂದು ತ್ರಿಪಾಠಿ ಹೇಳಿದ್ದಾರೆ.

ಇದನ್ನೂ ಓದಿ: ಅಫ್ಘಾನ್‌ ನೆಲ ಬಳಸಿ ನೆರೆ ದೇಶಗಳ ಮೇಲೆ ದಾಳಿ ಮಾಡುವಂತಿಲ್ಲ: ವಿಶ್ವಸಂಸ್ಥೆ ನಿರ್ಣಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.