ಕರ್ನಾಟಕ

karnataka

ಚೀನಾ ವಿಮಾನ ಪತನದ ಕೊನೆ ಕ್ಷಣದ ದೃಶ್ಯ

By

Published : Mar 21, 2022, 5:09 PM IST

ಚೀನಾದ ಬೋಯಿಂಗ್‌ 737 ವಿಮಾನ ಪತನಕ್ಕೂ ಮುನ್ನ ಕೊನೆಯ ಕ್ಷಣದ ದೃಶ್ಯಗಳು ದೊರೆತಿವೆ. ನತದೃಷ್ಟ ವಿಮಾನದಲ್ಲಿ 133 ಮಂದಿ ಪ್ರಯಾಣಿಕರಿದ್ದರು.

Major planecrash in China, Boeing 737 plane crashed into the mountains;  falling plane in CCTV footage
ಚೀನಾ ವಿಮಾನ ಪತನ; ನೆಲಕ್ಕೆ ಅಪ್ಪಳಿಸುವ ಮುನ್ನ ಕೊನೆ ಕ್ಷಣದ ದೃಶ್ಯ ಸೆರೆ

ಬೀಜಿಂಗ್​: ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನ ತಾಂತ್ರಿಕ ದೋಷದಿಂದ ಗುವಾಂಗ್‌ ಕ್ಸಿ ಪ್ರದೇಶದಲ್ಲಿ ಇಂದು ಪತನವಾಗಿದೆ. ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದ್ದು ಯಾವುದೇ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ.

ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡ ವಿಮಾನವು ವೇಗವಾಗಿ ಆಕಾಶದಿಂದ ಭೂಮಿಯತ್ತ ರಾಕೆಟ್‌ ಮಾದರಿಯಲ್ಲಿ ಬಂದಪ್ಪಳಿಸಿರುವುದನ್ನು ಈ ಕೆಳಗಿನ ದೃಶ್ಯದಲ್ಲಿ ನೋಡಬಹುದು.

ಬೋಯಿಂಗ್ 737 ವಿಮಾನವು ಗುವಾಂಗ್​ ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮೀಣ ಪ್ರದೇಶದಲ್ಲಿ ಬಿದ್ದಿದೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿರುವ ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಸಾವು-ನೋವಿನ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:133 ಜನರಿದ್ದ ವಿಮಾನ ಪತನ... ಎಲ್ಲರೂ ಸುಟ್ಟು ಭಸ್ಮವಾಗಿರುವ ಶಂಕೆ!

ABOUT THE AUTHOR

...view details