ಟೊಂಗಾ: ಇತ್ತೀಚೆಗಷ್ಟೇ ಭೀಕರ ಜ್ವಾಲಾಮುಖಿ ಸ್ಫೋಟದಿಂದ ತತ್ತರಿಸಿದ್ದ ಟೊಂಗಾ ರಾಷ್ಟ್ರದಲ್ಲಿ ಇದೀಗ ಭೂಕಂಪ ಸಂಭವಿಸಿದೆ. ಟೊಂಗಾದ ಪಂಗೈನಲ್ಲಿ ರಿಕ್ಟರ್ ಮಾಪಕದಲ್ಲಿ 6.2 ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.
ಪಂಗೈನಿಂದ ಪಶ್ಚಿಮ - ವಾಯುವ್ಯದೆಡೆ 219 ಕಿಲೋ ಮೀಟರ್ ದೂರ ಹಾಗೂ 14.5 ಕಿಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.