ಕರ್ನಾಟಕ

karnataka

ಸೆ.20ರಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಸಭೆ: ನೂರಕ್ಕೂ ಹೆಚ್ಚು ರಾಷ್ಟ್ರಗಳು ಭಾಗಿ ಸಾಧ್ಯತೆ

By

Published : Sep 14, 2021, 9:45 AM IST

over-100-world-leaders-to-attend-un-gathering-in-person

ಸೆಪ್ಟೆಂಬರ್ 27ರಂದು ಸಾಮಾನ್ಯ ಸಭೆಯ ವಾರ್ಷಿಕ ಸಭೆ ಮುಗಿಯಲಿದ್ದು, ಉತ್ತರ ಕೊರಿಯಾ, ಮಯನ್ಮಾರ್, ಗಿನಿ ಮತ್ತು ಅಫ್ಘಾನಿಸ್ತಾನದ ನಿಯೋಗಗಳಿಂದ ಬಂದವರು. ಈ ವೇಳೆ, ಭಾಷಣ ಮಾಡಲಿದ್ದಾರೆ.

ವಿಶ್ವಸಂಸ್ಥೆ:ಭಾರತದ ಪ್ರಧಾನಿ ನರೇಂದ್ರ ಮೋದಿ,ಅಮೆರಿಕ ಅಧ್ಯಕ್ಷ ಜೋ ಬೈಡನ್, ಜೋರ್ಡಾನ್​​ನ ಎರಡನೇ ಕಿಂಗ್ ಅಬ್ದುಲ್ಲಾ ಮತ್ತು ಬ್ರೆಜಿಲ್ ಹಾಗೂ ವೆನಿಜುವೆಲಾದ ಅಧ್ಯಕ್ಷರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯಸಭೆಯ ವಾರ್ಷಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಾಮಾನ್ಯ ಸಭೆಯಲ್ಲಿ ಸುಮಾರು 193 ಸದಸ್ಯ ರಾಷ್ಟ್ರಗಳಿದ್ದು, ಜಪಾನ್, ಭಾರತ ಮತ್ತು ಬ್ರಿಟನ್​ನ ಪ್ರಧಾನಿಗಳು ಹಾಗೂ ಇಸ್ರೇಲ್‌ನ ಹೊಸ ಪ್ರಧಾನ ಮಂತ್ರಿ ನಫ್ತಾಲಿ ಬೆನೆಟ್ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಸೇರಿದಂತೆ ಸುಮಾರು 23 ಮುಖ್ಯಸ್ಥರು ಈ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕೊರೊನಾ ಕಾರಣದಿಂದಾಗಿ ಹಿಂದಿನ ವರ್ಷ ವರ್ಚುಯಲ್ ಆಗಿ ಸಭೆ ಆಯೋಜಿಸಲಾಗಿತ್ತು. ಈ ಬಾರಿಯೂ ಸಾಮಾನ್ಯ ಸಭೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ನಡೆಸಲು ತೀರ್ಮಾನಿಸಲಾಗಿತ್ತು. ಆದ್ದರಿಂದಾಗಿ ಹಿಂದಿನ ಬಾರಿಯಂತೆ, ಈ ಬಾರಿಯೂ ಕೆಲವು ರಾಷ್ಟ್ರಗಳಿಗೆ ಪೂರ್ವ ನಿಯೋಜಿತ ಭಾಷಣಗಳನ್ನು ಮಾಡಲು ಅವಕಾಶ ನೀಡಲಾಗಿದೆ.

ಮೊದಲೇ ರೆಕಾರ್ಡ್ ಮಾಡಲಾದ ಭಾಷಣಗಳನ್ನೇ ಪೂರ್ವ ನಿಯೋಜಿತ ಭಾಷಣಗಳು ಎನ್ನಲಾಗುತ್ತದೆ. ಈ ಬಾರಿ ಇರಾನ್, ಈಜಿಪ್ಟ್, ಫ್ರಾನ್ಸ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯ ಮುಖ್ಯಸ್ಥರು ಪೂರ್ವ ನಿಯೋಜಿತ ಹೇಳಿಕೆ ನೀಡಲಿದ್ದಾರೆ.

ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್‌ ಅವರು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆಯನ್ನು ಸೆಪ್ಟೆಂಬರ್ 20ರಂದು ಕರೆಯುವ ಮೂಲಕ ಸಾಮಾನ್ಯ ಸಭೆ ಆರಂಭವಾಗುತ್ತದೆ.

ಸೆಪ್ಟೆಂಬರ್ 27ರಂದು ಸಾಮಾನ್ಯ ಸಭೆಯ ವಾರ್ಷಿಕ ಸಭೆ ಮುಗಿಯಲಿದ್ದು, ಉತ್ತರ ಕೊರಿಯಾ, ಮಯನ್ಮಾರ್, ಗಿನಿ ಮತ್ತು ಅಫ್ಘಾನಿಸ್ತಾನದ ನಿಯೋಗಗಳಿಂದ ಬಂದವರು. ಈ ವೇಳೆ, ಭಾಷಣ ಮಾಡಲಿದ್ದಾರೆ.

ಇನ್ನು ಕೋವಿಡ್ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಮುಖ್ಯಸ್ಥರು, ತಮ್ಮೊಂದಿಗೆ ಕೇವಲ 6 ಮಂದಿಯನ್ನು ಮಾತ್ರ ಕರೆತರಬಹುದು. ಆದರೆ, ಅದರಲ್ಲಿ ನಾಲ್ಕು ಮಂದಿಯನ್ನು ಮಾತ್ರ ಸಾಮಾನ್ಯ ಸಭೆಯ ಕೊಠಡಿಯೊಳಗೆ ತೆರಳಲು ಅನುಮತಿ ನೀಡಲಾಗುತ್ತದೆ. ಜೊತೆಗೆ ವಿಶ್ವಸಂಸ್ಥೆಯ ಎಲ್ಲ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆತಂಕಕಾರಿ: ಬ್ಯಾಚೆಲೆಟ್ ಹೇಳಿಕೆ ತಿರಸ್ಕರಿಸಿದ ಭಾರತ

ABOUT THE AUTHOR

...view details