ಕರ್ನಾಟಕ

karnataka

ಪರಸ್ಪರ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಿ: ತಕ್ಷಣಕ್ಕೆ ಸಮರ ನಿಲ್ಲಿಸಿ, ರಷ್ಯಾ- ಉಕ್ರೇನ್​​ಗೆ ಭಾರತ ಕರೆ

By

Published : Mar 1, 2022, 6:42 AM IST

ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಅವರು ಮಾತನಾಡಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ತಕ್ಷಣವೇ ಹಾಗೂ ತುರ್ತು ಸ್ಥಳಾಂತರಕ್ಕೆ ಭಾರತ ಏನೆಲ್ಲ ಮಾಡಬಹುದೋ ಅದನ್ನು ಮಾಡುತ್ತಿದೆ ಎಂದು ಹೇಳಿದರು. ಅಷ್ಟೇ ಅಲ್ಲ ಉಕ್ರೇನ್​​ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಮತ್ತು ಯುದ್ಧವನ್ನು ಕೊನೆಗೊಳಿಸಲು ನಾವು ರಷ್ಯಾವನ್ನು ಮತ್ತೊಮ್ಮೆ ಕೇಳಿಕೊಳ್ಳುತ್ತೇವೆ ಎಂದು ತಿರುಮೂರ್ತಿ ಹೇಳಿದರು.

UNGA-UKRAINE-INDIA
UNGA-UKRAINE-INDIA

ನ್ಯೂಯಾರ್ಕ್​( ಅಮೆರಿಕ):ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲೂ ನಿರ್ಣಯದ ಪರ ಮತ ಹಾಕದೇ ತಟಸ್ಥ ಧೋರಣೆ ತೆಳೆದಿರುವ ಭಾರತ, ಉಕ್ರೇನ್​ನಲ್ಲಿ ರಷ್ಯಾ ನಡೆಸುತ್ತಿರುವ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಭಾರತ ಕರೆ ನೀಡಿದೆ. ಪ್ರಾಮಾಣಿಕ ಮಾತುಕತೆಯ ಮೂಲಕ ಮಾತ್ರ ಎಲ್ಲ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಸಾಧ್ಯ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿದೆ.

ಇದೇ ವೇಳೆ ಉಕ್ರೇನ್‌ನಲ್ಲಿ ದಿನದಿನಕ್ಕೂ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕೈಗೊಂಡ ನಿರ್ಣಯಕ್ಕೆ ಮತ ಹಾಕದೇ ತಟಸ್ಥ ನಿಲುವನ್ನು ಅನುಸರಿಸಿರುವ ಭಾರತ. ಮತ್ತು ತನ್ನ ಕರೆಯನ್ನು ಪುನರುಚ್ಚರಿಸಿದೆ. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವುದು ಮತ್ತು ಹಗೆತನವನ್ನು ಕೊನೆಗೊಳಿಸುವುದು ಎರಡೂ ರಾಷ್ಟ್ರಗಳ ಮೊದಲ ಆದ್ಯತೆ ಆಗಬೇಕು ಎಂದು ಭಾರತ ಹೇಳಿದ್ದು, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮಾತುಕತೆ ಹಾಗೂ ನಿರಂತರ ಸಂವಾದದ ಮೂಲಕ ಮಾತ್ರ ಬಗೆಹರಿಸಿಕೊಳ್ಳಬಹುದು ಎಂದು ಭಾರತ ಎರಡೂ ರಾಷ್ಟ್ರಗಳಿಗೆ ಮನವಿ ಮಾಡಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಅವರು ಮಾತನಾಡಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ತಕ್ಷಣವೇ ಹಾಗೂ ತುರ್ತು ಸ್ಥಳಾಂತರಕ್ಕೆ ಭಾರತ ಏನೆಲ್ಲ ಮಾಡಬಹುದೋ ಅದನ್ನು ಮಾಡುತ್ತಿದೆ ಎಂದು ಹೇಳಿದರು. ಅಷ್ಟೇ ಅಲ್ಲ ಉಕ್ರೇನ್​​ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಮತ್ತು ಯುದ್ಧವನ್ನು ಕೊನೆಗೊಳಿಸಲು ನಾವು ರಷ್ಯಾವನ್ನು ಮತ್ತೊಮ್ಮೆ ಕೇಳಿಕೊಳ್ಳುತ್ತೇವೆ ಎಂದು ತಿರುಮೂರ್ತಿ ಹೇಳಿದರು.

ಯುದ್ಧ ಕೊನೆಗಾಣಿಸಲು ರಾಜತಾಂತ್ರಿಕತೆಯ ಹಾದಿಗೆ ಮರಳುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ ಎಂದು ಭಾರತ ಬಲವಾಗಿ ನಂಬಿದೆ ಎಂಬುದನ್ನು ತಿರುಮೂರ್ತಿ ಅವರು ಪ್ರತಿಪಾದಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಹಾಗೂ ಉಕ್ರೇನ್‌ ಅಧ್ಯಕ್ಷರ ಜೊತೆಗಿನ ಮಾತುಕತೆ ವೇಳೆ, ಮಾತುಕತೆ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ಹಾಗೂ ಮನವಿ ಮಾಡಿಕೊಂಡಿದ್ದಾರೆ.

ಹಾಗಾಗಿ ಪ್ರಾಮಾಣಿಕ ಹಾಗೂ ನಿರಂತರ ಮಾತುಕತೆಯಿಂದ ಮಾತ್ರ ಎಲ್ಲಾ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಸಾಧ್ಯ ಎಂಬ ನಮ್ಮ ದೃಢವಾದ ನಂಬಿಕೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ರಾಯಭಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆಗೆ ಸಹಕರಿಸಿದ ಉಕ್ರೇನ್‌ನ ಹಾಗೂ ಅಲ್ಲಿನ ಎಲ್ಲ ನೆರೆಯ ರಾಷ್ಟ್ರಗಳಿಗೆ ಭಾರತ ಧನ್ಯವಾದಗಳನ್ನು ಅರ್ಪಿಸಿತು.

ಇದನ್ನು ಓದಿ:ರಷ್ಯಾ - ಉಕ್ರೇನ್​ ಯುದ್ಧ: ಪ್ರಧಾನಿ ನೇತೃತ್ವದಲ್ಲಿ 3ನೇ ಬಾರಿಗೆ ಮಹತ್ವದ ಸಭೆ

ABOUT THE AUTHOR

...view details