ETV Bharat / bharat

ರಷ್ಯಾ - ಉಕ್ರೇನ್​ ಯುದ್ಧ: ಪ್ರಧಾನಿ ನೇತೃತ್ವದಲ್ಲಿ 3ನೇ ಬಾರಿಗೆ ಮಹತ್ವದ ಸಭೆ

author img

By

Published : Feb 28, 2022, 10:50 PM IST

ಈ ನಡುವೆ ಯುದ್ಧ ಪೀಡಿತ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಎಲ್ಲ ಕೆಲಸಗಳನ್ನ ಮುಂದುವರೆಸಿದೆ. ಆಪರೇಷನ್ ಗಂಗಾ' ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಗತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಂದು ಮಹತ್ವದ ಸಭೆ ನಡೆಸಿದರು.

PM Modi chairs high-level meeting on Ukraine situation
PM Modi chairs high-level meeting on Ukraine situation

ನವದೆಹಲಿ: ಉಕ್ರೇನ್​ ಮೇಲೆ ಸಮರ ಸಾರಿರುವ ರಷ್ಯಾ ದಾಳಿ ಮುಂದುವರೆಸಿದೆ. ಈ ನಡುವೆ ಬೆಲಾರಸ್​ನಲ್ಲಿ ಎರಡೂ ರಾಷ್ಟ್ರಗಳ ನಡುವೆ ಮಾತುಕತೆ ಮುಂದುವರೆದಿದೆ. ಉಕ್ರೇನ್​ ಕದನ ವಿರಾಮ ಘೋಷಣೆ ಮಾಡುವಂತೆ ಪಟ್ಟು ಹಿಡಿದಿದೆ. ಆದರೆ ರಷ್ಯಾ ಇದಕ್ಕೆ ಇನ್ನೂ ಯಾವುದೇ ಆಶ್ವಾಸನೆ ಕೊಟ್ಟಿಲ್ಲ.

ಈ ನಡುವೆ ಯುದ್ಧ ಪೀಡಿತ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಎಲ್ಲ ಕೆಲಸಗಳನ್ನ ಮುಂದುವರೆಸಿದೆ. ಆಪರೇಷನ್ ಗಂಗಾ' ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಗತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಂದು ಮಹತ್ವದ ಸಭೆ ನಡೆಸಿದರು.

ಕಳೆದ 24 ಗಂಟೆಗಳಲ್ಲಿ ಮೋದಿ ನಡೆಸುತ್ತಿರುವ ಮೂರನೇ ಸಭೆ ಇದಾಗಿದೆ. ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನೇ ಪ್ರಧಾನಿಗಳೇ ವಹಿಸಿದ್ದು, ಆರಪರೇಷನ್​ ಗಂಗಾದ ಪರಿಶೀಲನೆ ನಡೆಸಿದರು. ಬುಡಾಪೆಸ್ಟ್ (ಹಂಗೇರಿ) ಮತ್ತು ಬುಕಾರೆಸ್ಟ್ (ರೊಮೇನಿಯಾ) ನಿಂದ ಆರು ವಿಮಾನಗಳ ಮೂಲಕ ಇದುವರೆಗೆ ಸುಮಾರು 1,400 ಭಾರತೀಯರನ್ನ ಭಾರತಕ್ಕೆ ಕರೆ ತರಲಾಗಿದೆ. ಈ ವಿಚಾರವನ್ನು ಪ್ರಧಾನಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಈಗ ಬಳಕೆ ಮಾಡಿರುವ ಮಾರ್ಗಗಳನ್ನು ಹೊರತುಪಡಿಸಿ, ಇನ್ನೂ ಬೇರೆ ಬೇರೆ ಮಾರ್ಗಗಳ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ರೊಮೇನಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಯಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಸಚಿವರಾದ ಎಸ್. ಜೈಶಂಕರ್, ಹರ್ದೀಪ್ ಸಿಂಗ್ ಪುರಿ, ಜನರಲ್ (ನಿವೃತ್ತ) ವಿ.ಕೆ. ಸಿಂಗ್, ಕಿರಣ್ ರಿಜಿಜು, ಪಿಯೂಷ್ ಗೋಯಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಇದನ್ನು ಓದಿ:ಪದ್ಮವಿಭೂಷಣ ಜಗದ್ಗುರುಗಳ ಉತ್ತರಾಧಿಕಾರಿಯಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.