ಕರ್ನಾಟಕ

karnataka

23 ಕೋಟಿ ತಲುಪಿದ ಜಾಗತಿಕ ಕೋವಿಡ್‌ ಪ್ರಕರಣಗಳ ಸಂಖ್ಯೆ; ಅಮೆರಿಕದಲ್ಲಿ 7 ಲಕ್ಷಕ್ಕಿಂತಲೂ ಹೆಚ್ಚು ಸಾವು

By

Published : Oct 15, 2021, 1:29 PM IST

CSSE ವರದಿ ಪ್ರಕಾರ, ಯುಎಸ್ 4,47,66,965 ಪ್ರಕರಣಗಳು ಮತ್ತು 7,21,562 ಸಾವುಗಳನ್ನು ಹೊಂದಿರುವ ವಿಶ್ವದ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. 3,40,20,730 ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು
ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು

ವಾಷಿಂಗ್ಟನ್ (ಯುಎಸ್): ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು 239.5 ಮಿಲಿಯನ್ ತಲುಪಿವೆ. ಸಾವುಗಳ ಸಂಖ್ಯೆ 4.88 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ. 6.57 ಬಿಲಿಯನ್‌ಗಿಂತ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಶುಕ್ರವಾರ ಬೆಳಿಗ್ಗೆ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಯೂನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (CSSE) ಪ್ರಸ್ತುತ ಜಾಗತಿಕ ಕೋವಿಡ್ ಪ್ರಕರಣಗಳು, ಸಾವಿನ ಸಂಖ್ಯೆ ಮತ್ತು ನೀಡಲಾದ ಲಸಿಕೆ ಡೋಸ್‌ಗಳ ಸಂಖ್ಯೆ ಕ್ರಮವಾಗಿ 23,95,73,207, 48,81,197 ಮತ್ತು 6,57,59,70,837 ಎಂದು ಬಹಿರಂಗಪಡಿಸಿದೆ.

CSSE ಪ್ರಕಾರ, ಯುಎಸ್ 4,47,66,965 ಪ್ರಕರಣಗಳು ಮತ್ತು 7,21,562 ಸಾವುಗಳನ್ನು ಹೊಂದಿರುವ ವಿಶ್ವದ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. 3,40,20,730 ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಬ್ರೆಜಿಲ್ (2,16,12,237), ಯುಕೆ (83,56,596), ರಷ್ಯಾ (77,73,388), ಟರ್ಕಿ (75,70,902), ಫ್ರಾನ್ಸ್ (71,74,580), ಇರಾನ್ (57,54,047), ಅರ್ಜೆಂಟೀನಾ (52,70,003), ಸ್ಪೇನ್, ಕೊಲಂಬಿಯಾ (49,77,043), ಇಟಲಿ (47,09,753), ಜರ್ಮನಿ (43,55,169), ಇಂಡೋನೇಷ್ಯಾ (42,32,099) ಮತ್ತು ಮೆಕ್ಸಿಕೋ (37,38,749) ಎಂದು CSSE ಅಂಕಿಅಂಶಗಳು ತೋರಿಸಿವೆ.

1,00,000 ಕ್ಕಿಂತ ಹೆಚ್ಚು ಸಾವಿನ ಸಂಖ್ಯೆ ಹೊಂದಿರುವ ರಾಷ್ಟ್ರಗಳು ಬ್ರೆಜಿಲ್ (6,02,099), ಭಾರತ (4,51,435), ಮೆಕ್ಸಿಕೋ (2,83,193), ರಷ್ಯಾ (2,16,403), ಪೆರು (1,99,746), ಇಂಡೋನೇಷ್ಯಾ (1,42,848), ಯುಕೆ (1,38,647), ಇಟಲಿ (1,31,461), ಕೊಲಂಬಿಯಾ (1,26,759), ಇರಾನ್ (1,23,498), ಫ್ರಾನ್ಸ್ (1,18,111) ಮತ್ತು ಅರ್ಜೆಂಟೀನಾ (1,15,633).

ಇದನ್ನೂ ಓದಿ:UNHRC: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ

ABOUT THE AUTHOR

...view details