UNHRC: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ

author img

By

Published : Oct 15, 2021, 1:41 AM IST

India re-elected to UNHRC for 6th term with overwhelming majority

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 2022-24ರ ಅವಧಿಗೆ ಭಾರತವು ಬಹುಮತದೊಂದಿಗೆ ಆಯ್ಕೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ನಿಯೋಗವು ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಯುಎನ್​ಹೆಚ್‌ಆರ್‌ಸಿಗೆ ಮತ್ತೊಮ್ಮೆ ಅಂದರೆ 6ನೇ ಅವಧಿಗೆ ಆಯ್ಕೆಯಾದಂತಾಗಿದೆ.

ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್​ಹೆಚ್‌ಆರ್‌ಸಿ) 2022-24ರ ಅವಧಿಗೆ ಭಾರತವು ಬಹುಮತದೊಂದಿಗೆ ಆಯ್ಕೆಯಾಗಿದೆ. ವಿಶ್ವದಲ್ಲಿ ಸಮ್ಮಾನ, ಸಂವಾದ ಮತ್ತು ಸಹಯೋಗದೊಂದಿಗೆ ಮಾನವ ಹಕ್ಕುಗಳ ರಕ್ಷಣೆಗೆ ಹಾಗೂ ಪ್ರೋತ್ಸಾಹಕ್ಕೆ ಶ್ರಮಿಸುತ್ತೇವೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ನಿಯೋಗವು ತಿಳಿಸಿದೆ.

ಯುಎನ್​ಹೆಚ್‌ಆರ್‌ಸಿ 2022-24ರ ಅವಧಿ (6ನೇ ಅವಧಿ)ಗೆ ಭಾರತವು ಮತ್ತೊಮ್ಮೆ ಬಹುಮತದೊಂದಿಗೆ ಆಯ್ಕೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ನಿಯೋಗವು ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ತಮ್ಮ ಮೇಲೆ ವಿಶ್ವಾಸ ಉಳಿಸಿಕೊಂಡಿದ್ದಕ್ಕೆ ವಿಶ್ವಸಂಸ್ಥೆಯ ಇತರ ಸದಸ್ಯರಿಗೆ ಭಾರತವು ಕೃತಜ್ಞತೆ ವ್ಯಕ್ತಪಡಿಸಿದೆ.

  • India🇮🇳 gets re-elected to the @UN_HRC (2022-24) for a 6th term with overwhelming majority.

    Heartfelt gratitude to the @UN membership for reposing its faith in 🇮🇳.

    We will continue to work for promotion and protection of Human Rights through #Samman #Samvad #Sahyog pic.twitter.com/ltqktWcat1

    — India at UN, NY (@IndiaUNNewYork) October 14, 2021 " class="align-text-top noRightClick twitterSection" data=" ">

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ರಹಸ್ಯ ಮತದಾನದ ಮೂಲಕ 18 ದೇಶಗಳನ್ನು ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆ ಮಾಡಿದೆ. ಅರ್ಜೆಂಟೀನಾ, ಬೆನಿನ್, ಕ್ಯಾಮರೂನ್, ಎರಿಟ್ರಿಯಾ, ಫಿನ್ಲ್ಯಾಂಡ್, ಅಮೆರಿಕ, ಜಾಂಬಿಯಾ, ಹೊಂಡುರಾಸ್, ಭಾರತ, ಕಜಕಿಸ್ತಾನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಲೇಷಿಯಾ, ಮಾಂಟೆನೆಗ್ರೊ, ಪರುಗ್ವೆ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೊಮಾಲಿಯಾ ದೇಶಗಳು ಆಯ್ಕೆಯಾಗಿವೆ.

ಮಾನವ ಹಕ್ಕುಗಳ ಮಂಡಳಿಯು ಜಗತ್ತಿನಾದ್ಯಂತ ಎಲ್ಲಾ ಮಾನವ ಹಕ್ಕುಗಳ ಪ್ರಚಾರ ಮತ್ತು ರಕ್ಷಣೆಯ ಜವಾಬ್ದಾರಿ ಹೊಂದಿರುವ ವಿಶ್ವಸಂಸ್ಥೆಯ ವ್ಯವಸ್ಥೆಯೊಳಗಿನ ಒಂದು ಅಂತರ ಸರ್ಕಾರಿ ಸಂಸ್ಥೆಯಾಗಿದೆ. ಮಂಡಳಿಯು ಅಗತ್ಯ ಎಲ್ಲಾ ವಿಷಯಾಧಾರಿತ ಮಾನವ ಹಕ್ಕುಗಳ ಸಮಸ್ಯೆಗಳು ಮತ್ತು ಸನ್ನಿವೇಶಗಳ ಬಗ್ಗೆ ಚರ್ಚೆ ನಡೆಸುತ್ತದೆ. ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸಭೆ ನಡೆಯುತ್ತದೆ.

ಈ ಹಿಂದೆ 2018ರಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ ಮಾನವ ಹಕ್ಕುಗಳ ಮಂಡಳಿಯನ್ನು ತೊರೆದ ಅಮೆರಿಕವು ಮೂರುವರೆ ವರ್ಷಗಳ ಬಳಿಕ ಮರು ಆಯ್ಕೆಯಾಗಿದೆ.

ಇದನ್ನೂ ಓದಿ: ಬೇಜವಾಬ್ದಾರಿ ಹೇಳಿಕೆಗೂ ಮೊದಲು ನೀವು ಕೂತಿದ್ದ ಕುರ್ಚಿಯ ಘನತೆ ಬಗ್ಗೆ ಯೋಚಿಸಬೇಕಿತ್ತು: ಸಿಎಂಗೆ ಸಿದ್ದು ಟಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.