ಕರ್ನಾಟಕ

karnataka

ಸರ್ಜರಿ ಗಾಯದ ಗುರುತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟಿ ಚವಿ ಮಿತ್ತಲ್​

By

Published : Dec 30, 2022, 10:55 AM IST

ಸ್ತನ ಕ್ಯಾನ್ಸರ್​ಗೆ ಗುರಿಯಾಗಿದ್ದ ನಟಿ - ಸರ್ಜರಿಯ ಗಾಯದ ಗುರುತನ್ನು ಮುಕ್ತವಾಗಿ ಹಂಚಿಕೊಂಡ ಬೆಡಗಿ - ನಿಮ್ಮಷ್ಟು ಸುಂದರ ಯಾರಿಲ್ಲ ಎಂದ ಅಭಿಮಾನಿಗಳು

ಸರ್ಜರಿಯ ಗಾಯದ ಗುರುತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟಿ ಚವಿ ಮಿತ್ತಲ್​
actress-chavi-mittal-shared-her-surgery-scars-with-her-fans

ಹೈದರಾಬಾದ್​: ಈ ವರ್ಷದ ಆರಂಭದಲ್ಲಿ ಸ್ತನ​ ಕ್ಯಾನ್ಸರ್​ಗೆ ಗುರಿಯಾಗಿದ್ದ ನಟಿ ಛವಿ ಮಿತ್ತಲ್ ತಮ್ಮ ರಜೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಸರ್ಜರಿಯ ಕಲೆಗಳನ್ನು ಮುಕ್ತವಾಗಿ ತೋರಿಸಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆಗೆ ದುಬೈಗೆ ತೆರಳಿರುವ ನಟಿ, ಬಿಳಿ ಸ್ವಿಮ್​ವೇರ್​ನಲ್ಲಿ ಫೋಟೋ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಅವರ ಬಲಭಾಗದಲ್ಲಿ ಶಸ್ತ್ರ ಚಿಕಿತ್ಸೆಯ ಗಾಯದ ಗುರುತುಗಳನ್ನು ಕಾಣ ಬಹುದಾಗಿದೆ. ಈ ಕುರಿತು ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಟಿ. 'ಈ ವರ್ಷ ನಾನು ಗಳಿಸಿದ್ದು, ಉತ್ತಮವಾದದ್ದು, ಗಟ್ಟಿತನದ್ದು' ಎಂದಿದ್ದಾರೆ.

ಇನ್ನು ನಟಿಯ ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, 'ನೀವು ಆಂತರಿಕ ಮತ್ತು ಬಹಿರಂಗವಾಗಿ ಸುಂದರವಾಗಿದ್ದೀರಾ. ಗಾಯದ ಗುರುತುಗಳನ್ನು ಯಾರು ನೋಡುತ್ತಾರೆ, ಒಂದು ವೇಳೆ ನೋಡಿದರೂ ಇದರ ಬಗ್ಗೆ ಕಾಳಜಿಯಾಕೆ ಅಲ್ವಾ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು 'ನಿಮ್ಮ ಗುರುತು ಮತ್ತು ಸಮರ್ಪಣೆಯ ಗಟ್ಟಿ ಶಕ್ತಿಯನ್ನು ಪ್ರೀತಿಸುವುದಾಗಿ' ತಿಳಿಸಿದ್ದಾರೆ.

ಕಳೆದ ಏಪ್ರಿಲ್​ನಲ್ಲಿ ಸ್ತನ ಕ್ಯಾನ್ಸರ್​ ಪತ್ತೆಯಾದ ಹಿನ್ನೆಲೆ ನಟಿ ಸರ್ಜರಿ ಮೊರೆ ಹೋಗಿದ್ದರು. ಇದಾದ ಬಳಿಕ ತಮ್ಮ ಚೇತರಿಕೆಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.

ಚವಿ 'ತುಮಾರಿ ದಿಶಾ' ಮತ್ತು 'ಎಕ್​ ಚುಟುಕಿ ಅಸ್ಮಾ' ಕಾರ್ಯಕ್ರಮದ ಯಶಸ್ಸನ್ನು ಹೊಂದಿದ್ದಾರೆ. ಅಲ್ಲದೇ ಸೋನು ಸೂದ್​ ಮತ್ತು ಇಶಾ ಕೊಪ್ಪಿಕರ್​ ನಟನೆಯ ಸಿನಿಮಾ 'ಎಕ್​ ವಿಹಾನ್​ ಐಸೆ ಬಿ' ಅಲ್ಲಿ ಕೂಡ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ: ಸೌತ್​ ಸಿನಿಮಾ ಬಗ್ಗೆ ರಶ್ಮಿಕಾ ಹೇಳಿಕೆ.. ಟ್ರೋಲಿಗರಿಗೆ ಮತ್ತೆ ಗುರಿಯಾದ ಮಂದಣ್ಣ

ABOUT THE AUTHOR

...view details