ಕರ್ನಾಟಕ

karnataka

ಹಿಂದೂ ಹೃದಯ ಸಾಮ್ರಾಟ ಶಿವಾಜಿಗೆ ನಮಿಸಿದ ಪಾತ್ರಧಾರಿ ಅಕ್ಷಯ್​ ಕುಮಾರ್

By

Published : Dec 6, 2022, 1:30 PM IST

Updated : Dec 6, 2022, 1:46 PM IST

"ವೇದತ್ ಮರಾತೆ ವೀರ್ ದೌಡ್ಲೆ ಸಾತ್" ಸಿನಿಮಾ ಶೂಟಿಂಗ್​​ ಶುರುವಾಗಿದ್ದು, ನಟ ಅಕ್ಷಯ್​ ಕುಮಾರ್ ಫೋಟೋ, ವಿಡಿಯೋ ಶೇರ್ ಮಾಡಿದ್ದಾರೆ.

Vedat Marathe Veer Daudle Saat shooting begins
ವೇದತ್ ಮರಾತೆ ವೀರ್ ದೌಡ್ಲೆ ಸಾತ್ ಸಿನಿಮಾ ಶೂಟಿಂಗ್ ಶುರು

ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ "ವೇದತ್ ಮರಾತೆ ವೀರ್ ದೌಡ್ಲೆ ಸಾತ್" (Vedat Marathe Veer Daudle Saat) ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರಕ್ಕೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಜೀವ ತುಂಬುತ್ತಿದ್ದಾರೆ. ಮೊದಲ ಶೆಡ್ಯೂಲ್​​ನ ಶೂಟಿಂಗ್​​ ಮುಂಬೈನಲ್ಲಿ ನಡೆಯುತ್ತಿದೆ. ಚಿತ್ರೀಕರಣ ಸೋಮವಾರ ಪ್ರಾರಂಭವಾಗಿದೆ.

ಶಿವಾಜಿ ಪಾತ್ರಧಾರಿ ಅಕ್ಷಯ್​ ಕುಮಾರ್

ಈ ಕುರಿತು ಅಕ್ಷಯ್ ಕುಮಾರ್​ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅವರು ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪಾತ್ರದಲ್ಲಿ ನಟಿಸಲು ನನಗೆ ಗೌರವವಿದೆ ಎಂದು ಈ ಫೋಟೋಗೆ ಹಿಂದಿಯಲ್ಲಿ ಶೀರ್ಷಿಕೆ ಬರೆದಿದ್ದಾರೆ. ಮತ್ತೊಂದು ಪೋಸ್ಟ್​ನಲ್ಲಿ ಶೂಟಿಂಗ್​ ವಿಡಿಯೋ ಶೇರ್ ಮಾಡಿದ್ದು, ಜೈ ಶಿವಾಜಿ ಎಂದು ಬೆರೆದಿದ್ದಾರೆ.

ಶಿವಾಜಿ ಪಾತ್ರಧಾರಿ ಅಕ್ಷಯ್​ ಕುಮಾರ್

ಚಿತ್ರದ ಪಾತ್ರವರ್ಗದಲ್ಲಿ ಜಯ್ ದುಧಾನೆ, ಉತ್ಕರ್ಷ ಶಿಂಧೆ, ವಿಶಾಲ್ ನಿಕಮ್, ವಿರಾಟ್ ಮಡ್ಕೆ, ಹಾರ್ದಿಕ್ ಜೋಶಿ, ಸತ್ಯ, ಅಕ್ಷಯ್, ನವಾಬ್ ಖಾನ್ ಮತ್ತು ಪ್ರವೀಣ್ ತಾರ್ಡೆ ಇದ್ದಾರೆ. ಚಿತ್ರ ಮರಾಠಿ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2023 ರ ದೀಪಾವಳಿ ವೇಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಛತ್ರಪತಿ ಶಿವಾಜಿ ಮಹಾರಾಜರ ಪಾತ್ರಕ್ಕೆ ಜೀವ ತುಂಬಲಿದ್ದಾರೆ ನಟ ಅಕ್ಷಯ್​ ಕುಮಾರ್​

Last Updated : Dec 6, 2022, 1:46 PM IST

ABOUT THE AUTHOR

...view details