ಕರ್ನಾಟಕ

karnataka

ಶಿವಣ್ಣನ ವೇದ ಸಿನಿಮಾ ಒಟಿಟಿಗೆ ಎಂಟ್ರಿಯಾಗಲು ಮುಹೂರ್ತ ಫಿಕ್ಸ್

By

Published : Feb 7, 2023, 7:52 PM IST

ಶಿವ ರಾಜ್​ಕುಮಾರ್ ನಟನೆಯ ಸೂಪರ್​ ಹಿಟ್ ಸಿನಿಮಾ ವೇದ ಶೀಘ್ರದಲ್ಲೇ ಒಟಿಟಿಗೆ ಎಂಟ್ರಿ ಕೊಡಲಿದೆ.

Veda movie entry to OTT
ಒಟಿಟಿಗೆ ಎಂಟ್ರಿ ಕೊಡಲಿದೆ ವೇದ ಸಿನಿಮಾ

2022ನೇ ಸಾಲಿನ ಕೊನೆಯಲ್ಲಿ ಪ್ರೇಕ್ಷಕರ ಮುಂದೆ ಬಂದ ಸಿನಿಮಾ ವೇದ. ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡು ಅಪ್ಪ ಎಂದರೆ ಹೀಗೇ ಇರಬೇಕು ಎಂಬ ಪಾತ್ರದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಸೂಪರ್ ಹಿಟ್ ಚಿತ್ರ ವೇದ. ಸೆಂಚುರಿ ಸ್ಟಾರ್ ಸಿನಿಮಾ ಕೆರಿಯರ್​ನಲ್ಲಿ 125ನೇ ಚಿತ್ರವಾಗಿ ವೇದ ಸಿನಿಮಾ ಅಂದುಕೊಂಡಂತೆ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಈ ವೇದ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ದಿನಾಂಕ ಫಿಕ್ಸ್ ಆಗಿದೆ.

ಶೀಘ್ರದಲ್ಲೇ ಒಟಿಟಿಗೆ ಎಂಟ್ರಿ ಕೊಡಲಿದೆ ವೇದ ಸಿನಿಮಾ

ಶಿವಣ್ಣ ಕೆರಿಯರ್​ನ ವಿಶೇಷ ಸಿನಿಮಾಗಳಲ್ಲೊಂದಾದ ಈ ವೇದ ಚಿತ್ರವನ್ನು ಗೀತಾ ಶಿವ ರಾಜ್​​​ಕುಮಾರ್ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಹೊರಹೊಮ್ಮಿದ್ದಾರೆ. ನಿರ್ದೇಶಕ ಎ. ಹರ್ಷ ಹಾಗೂ ಶಿವ ರಾಜ್​ಕುಮಾರ್ ಕಾಂಬಿನೇಶನ್​ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ ಅಂದುಕೊಂಡಂತೆ ದೊಡ್ಮನೆ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ದೊಡ್ಮನೆ ಅಭಿಮಾನಿಗಳಲ್ಲಿ, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ವೇದ ಚಿತ್ರ ಕಳೆದ ವರ್ಷ ಡಿಸೆಂಬರ್ 23ರಂದು ತೆರೆಕಂಡಿತ್ತು. ತೆರೆ ಮೇಲೆ ಮೋಡಿ ಮಾಡುವಲ್ಲಿ ಚಿತ್ರತಂಡ ಯಶಸ್ವಿ ಆಗಿತ್ತು. ಚಿತ್ರ ಮಂದಿರದಲ್ಲಿ ದೊಡ್ಮನೆ ಅಭಿಮಾನಿ ಬಳಗ ಹಾಗೂ ಪ್ರೇಕ್ಷಕ ಪ್ರಭುಗಳ ಮನಗೆದ್ದ ಈ ಚಿತ್ರ ಇದೀಗ ಒಟಿಟಿಯಲ್ಲಿ ಪ್ರೇಕ್ಷಕರ ಮನಗೆಲ್ಲಲು ರೆಡಿ ಆಗಿದೆ. ಫೆಬ್ರವರಿ 10ರಂದು ಝೀ5ನಲ್ಲಿ ಬಿಡುಗಡೆಯಾಗುತ್ತಿದೆ ಈ ವೇದ ಸಿನಿಮಾ.

ಹೆಣ್ಣು ಮಕ್ಕಳ ಮೇಲೆ ಆಗುವ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆಯೇ ವೇದ. ಈಗಾಗಲೇ ಈ ರೀತಿಯ ಕಥೆಗಳು ಸಾಕಷ್ಟು ಸಿನಿಮಾಗಳಲ್ಲಿ ಬಂದಿವೆ. ಆದರೆ, ನಿರ್ದೇಶಕ ಎ ಹರ್ಷ ಅವರು ಈ ಕಥೆಯನ್ನ 1960 ಹಾಗೂ 1980ರ ಕಾಲ ಘಟ್ಟಕ್ಕೆ ತಕ್ಕಂತೆ ಹೆಣೆದಿರೋದು ಚಿತ್ರದ ವಿಶೇಷತೆ. ಮಹಿಳೆಯರು ಅನ್ಯಾಯ ಆದ ಕ್ಷಣವೇ ಆ ಅನ್ಯಾಯದ ವಿರುದ್ಧ ಸಿಡಿದು ನಿಲ್ಲಬೇಕು ಎಂಬುದು ವೇದ ಎಂದರೆ ಕರನಾಡ ಚಕ್ರವರ್ತಿಯ ಸಿದ್ಧಾಂತವಾಗಿತ್ತು.

ಇದನ್ನೂ ಓದಿ:ಆರ್​ ಚಂದ್ರು ನಿರ್ದೇಶಕನಾಗಲಿಲ್ಲ ಅಂದಿದ್ರೆ ಏನಾಗುತ್ತಿದ್ದರು?.. ಅವರೇ ಹೇಳಿಕೊಂಡಿದ್ದು ಹೀಗೆ!

ಅಪ್ಪನ ಪಾತ್ರದಲ್ಲಿ ಶಿವ ರಾಜ್​ಕುಮಾರ್ ಕಣ್ಣಿನಿಂದಲೇ ಭಯ ಹುಟ್ಟಿಸಿದರೆ, ಅದಿತಿ ಸಾಗರ್ ನಟನೆ ಜೊತೆಗೆ ಆ್ಯಕ್ಷನ್​ನಿಂದ ಗಮನ ಸೆಳೆದಿದ್ದರು. ಇದರ ಜೊತೆಗೆ ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ ಫೈಟಿಂಗ್ ಸನ್ನಿವೇಶಗಳಲ್ಲಿ ಅದ್ಭುತವಾಗಿ ನಟಿಸಿದರು. ಹೆಣ್ಣು ಮಕ್ಕಳು ಎಂದರೆ ಹೀಗೆ ಇರಬೇಕು ಎಂಬ ಮಟ್ಟಿಗೆ ಅಭಿನಯಿಸಿದರು. ಉಳಿದಂತೆ ಉಮಾಶ್ರೀ, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ 'ವೇದ' ಚಿತ್ರದಲ್ಲಿದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ‌ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಇಷ್ಟೆಲ್ಲ ಕಂಟೆಂಟ್ ಇರುವ ವೇದ ಸಿನಿಮಾವನ್ನು ಫೆಬ್ರವರಿ 10ರಿಂದ ಝೀ5ನಲ್ಲಿ ಪ್ರಸಾರವಾಗಲಿದ್ದು, ಫ್ಯಾಮಿಲಿ ಸಮೇತ ಮನೆಯಲ್ಲಿ ಕುಳಿತು ನೋಡ ಬಹುದಾಗಿದೆ.

ಇದನ್ನೂ ಓದಿ:ತನ್ನ ತೂಕ ಹೆಚ್ಚಳಕ್ಕೆ ಕಾರಣ ಬಹಿರಂಗಪಡಿಸಿದ ನಟಿ ರಕ್ಷಿತಾ ಪ್ರೇಮ್​!

ABOUT THE AUTHOR

...view details