ಕರ್ನಾಟಕ

karnataka

ಸಲ್ಮಾನ್ ಖಾನ್ ತೋಟದ ಮನೆಗೆ ವ್ಯಕ್ತಿಗಳಿಬ್ಬರಿಂದ ಅಕ್ರಮವಾಗಿ ನುಗ್ಗಲು ಯತ್ನ: ಆರೋಪಿಗಳನ್ನು ಬಂಧಿಸಿದ ಪೊಲೀಸರು

By ETV Bharat Karnataka Team

Published : Jan 8, 2024, 7:39 PM IST

Updated : Jan 8, 2024, 7:46 PM IST

ಪನ್ವೇಲ್‌ನಲ್ಲಿರುವ ನಟ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್‌ಗೆ ವ್ಯಕ್ತಿಗಳಿಬ್ಬರು ಅಕ್ರಮವಾಗಿ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Salman Khan  Arpita Farm House  ಸಲ್ಮಾನ್ ಖಾನ್ ತೋಟದ ಮನೆ  ಅಕ್ರಮವಾಗಿ ನುಗ್ಗಲು ಯತ್ನ  ಆರೋಪಿಗಳ ಬಂಧನ
ಸಲ್ಮಾನ್ ಖಾನ್ ತೋಟದ ಮನೆಗೆ ವ್ಯಕ್ತಿಗಳಿಬ್ಬರಿಂದ ಅಕ್ರಮವಾಗಿ ನುಗ್ಗಲು ಯತ್ನ: ಆರೋಪಿಗಳ ಬಂಧಿಸಿ ಪೊಲೀಸರು

ಮುಂಬೈ (ಮಹಾರಾಷ್ಟ್ರ):ನಟ ಸಲ್ಮಾನ್ ಖಾನ್ ಅವರ ಪನ್ವೇಲ್​ನಲ್ಲಿರುವ ಫಾರ್ಮ್ ಹೌಸ್​ಗೆ ಇಬ್ಬರು ಅಕ್ರಮವಾಗಿ ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪನ್ವೇಲ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪಂಜಾಬ್ ಮೂಲದ ಅಜೇಶ್ ಕುಮಾರ್ ಓಂ ಪ್ರಕಾಶ್ ಗೀಲಾ ಮತ್ತು ಗುರು ಸೇವಕ್ ಸಿಂಗ್ ತೇಜ ಸಿಂಗ್ ಸಿಖ್ ಬಂಧಿತ ಆರೋಪಿಗಳು.

ಎರಡು ನಕಲಿ ಆಧಾರ್ ಕಾರ್ಡ್​ಗಳು ಪತ್ತೆ:ನಿನ್ನೆ ಭಾನುವಾರ (ಜನವರಿ 6) ಸಂಜೆ 4 ಗಂಟೆ ಸುಮಾರಿಗೆ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್‌ನ ಮುಖ್ಯ ಗೇಟ್‌ನ ಎಡಭಾಗದ ಕಾಂಪೌಂಡ್‌ನಿಂದ ಅನುಮತಿ ಪಡೆಯದೆ ಇಬ್ಬರು ವ್ಯಕ್ತಿಗಳು ಫಾರ್ಮ್ ಹೌಸ್‌ಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಯ ಗಮನಕ್ಕೆ ಇಬ್ಬರನ್ನೂ ಹಿಡುದು ತಕ್ಷಣವೇ ಪೊಲೀಸರಿಗೆ ಒಪ್ಪಿಸಿದ್ದಾರೆ. ನಾವಿಬ್ಬರೂ ಸಲ್ಮಾನ್ ಖಾನ್ ಅಭಿಮಾನಿಗಳು ಎಂದು ಹೇಳಿದ್ದರು. ಅಷ್ಟರಲ್ಲಿ ಇಬ್ಬರನ್ನೂ ತಪಾಸಣೆಗೊಳಪಡಿಸಿದ ಪೊಲೀಸರಿಗೆ ಎರಡು ನಕಲಿ ಆಧಾರ್ ಕಾರ್ಡ್​ಗಳು ಸಿಕ್ಕಿವೆ.

ತಂತಿಗಳನ್ನು ಮುರಿದು ಗೇಟ್ ಪ್ರವೇಶಿಸಲು ಯತ್ನ: ಈ ಇಬ್ಬರು ಆರೋಪಿಗಳು ತೋಟದ ಮನೆಯ ತಂತಿಗಳನ್ನು ಮುರಿದು ಗೇಟ್ ಪ್ರವೇಶಿಸಲು ಯತ್ನಿಸಿದ್ದರು. ಈ ವೇಳೆ ಫಾರ್ಮ್‌ಹೌಸ್‌ನ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ಆಗ ಇವರಿಬ್ಬರು ಯುವಕರು ತಮ್ಮ ನೈಜ ಚಹರೆ ಮರೆಮಾಚುವ ನೆಪದಲ್ಲಿ ಸುಳ್ಳು ಹೆಸರು ಹೇಳಿದ್ದರು. ಆದರೆ, ಅವರ ನಿಜವಾದ ಹೆಸರು ಬೇರೆ ಇವೆ, ಅಜೇಶ್ ಕುಮಾರ್ ಓಂ ಪ್ರಕಾಶ್ ಗೀಲಾ ಮತ್ತು ಗುರು ಸೇವಕ್ ಸಿಂಗ್ ತೇಜ ಸಿಂಗ್ ಸಿಖ್. ಇವರಿಬ್ಬರು ಪಂಜಾಬ್​ ಮೂಲದವರು. ಅಲ್ಲದೆ, ಆರೋಪಿಗಳ ಮಾತಿನ ಬಗ್ಗೆ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದಿದ್ದರಿಂದ ಪೊಲೀಸರಿಗೆ ಕರೆ ಮಾಡಿ, ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೆಚ್ಚಿನ ತನಿಖೆ ಆರಂಭ:ಪನ್ವೇಲ್ ಪೊಲೀಸರು ಈ ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆ ನಂತರ ಯುವಕರಿಬ್ಬರೂ ತಮ್ಮ ನಿಜವಾದ ಹೆಸರು ತಿಳಿಸಿದ್ದಾರೆ. ಬಳಿಕ ಅವರ ಮೊಬೈಲ್ ಫೋನ್​ಗಳನ್ನೂ ಪರಿಶೀಲಿಸಿದಾಗ ಇಬ್ಬರೂ ತಮ್ಮ ಭಾವಚಿತ್ರ ಬಳಸಿರುವ ನಕಲಿ ಹೆಸರಿನ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವುದು ಕೂಡಾ ಬೆಳಕಿಗೆ ಬಂದಿದೆ. ಈ ಕುರಿತು ಪನ್ವೇಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯ ಪೊಲೀಸ್ ನಿರೀಕ್ಷಕ ಅನಿಲ್ ಪಾಟೀಲ್ ಮತ್ತು ತಂಡವು ಹೆಚ್ಚಿನ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:ಓಂ 2 ಬರುತ್ತೆ ಅಂದ್ರೆ ನಾನು ಎಷ್ಟು ವರ್ಷ ಬೇಕಾದರೂ ಕಾಯುತ್ತಿನಿ: ಶಿವರಾಜ್ ಕುಮಾರ್

Last Updated : Jan 8, 2024, 7:46 PM IST

ABOUT THE AUTHOR

...view details