ಕರ್ನಾಟಕ

karnataka

'ಬರ್ಕಳಿ ಡೇಟು, ಹತ್ತಿ ಕೆಂಪ್ ಬಸ್ಸು': ಟಗರು ಪಲ್ಯ ರಿಲೀಸ್​ ಡೇಟ್​ ಅನೌನ್ಸ್

By ETV Bharat Karnataka Team

Published : Oct 12, 2023, 1:19 PM IST

Updated : Oct 12, 2023, 3:04 PM IST

Tagaru Palya Movie: ಬಹುಬೇಡಿಕೆ ನಟ ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಸಿನಿಮಾ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿದೆ.

Tagaru Palya Release date
ಟಗರು ಪಲ್ಯ ರಿಲೀಸ್​ ಡೇಟ್​

ಶೀರ್ಷಿಕೆ ಹಾಗೂ ಹಾಡುಗಳಿಂದ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ 'ಟಗರು ಪಲ್ಯ'. ಇಕ್ಕಟ್ ಚಿತ್ರ ಖ್ಯಾತಿಯ ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ 'ಟಗರು ಪಲ್ಯ' ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕ ಡಾಲಿ ಧನಂಜಯ್ ಇಂದು ಅನೌನ್ಸ್ ಮಾಡಿದ್ದಾರೆ.

ಡಾಲಿ ಧನಂಜಯ್​ ಟ್ವೀಟ್​:ಸದ್ಯ ಮೇಕಿಂಗ್​​ನಿಂದ ಗಮನ ಸೆಳೆಯುತ್ತಿರುವ ಟಗರು ಪಲ್ಯ ಸಿನಿಮಾ ಬಿಡುಗಡೆ ದಿನಾಂಕವನ್ನು ಡಾಲಿ ತಮ್ಮದೇ ಶೈಲಿಯಲ್ಲಿ ಅನೌನ್ಸ್ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​ನಲ್ಲಿ ಚಿತ್ರದ ಪೋಸ್ಟರ್ ಶೇರ್ ಮಾಡಿರುವ ಸ್ಯಾಂಡಲ್​ವುಡ್​ ಬಹುಬೇಡಿಕೆ ನಟ ಡಾಲಿ ಧನಂಜಯ್​, ''ನಮ್ಮೂರೆ ನಮಗೆಂದು ಚೆಂದ ಕನಾ, ಊರ್ ಕಡೀಕ್ ಒಂದ್ ಸಾರಿ ಹೋಗ್ ಬರಾನ, ಬರ್ಕಳಿ ಡೇಟು ಹತ್ತಿ ಕೆಂಪ್ ಬಸ್ಸು, ಅಕ್ಟೋಬರ್ 27 ರಿಂದ ಟ ಟ ಟ ಟ..ಟಗರುಪಲ್ಯ'' ಎಂದು ಬರೆದುಕೊಂಡಿದ್ದಾರೆ.

ಅಮೃತಾ ಪ್ರೇಮ್ ಚೊಚ್ಚಲ ಚಿತ್ರ: ಉಮೇಶ್ ಕೆ ಕೃಪ ನಿರ್ದೇಶನದ ಟಗರು ಪಲ್ಯ ಸಿನಿಮಾ ಮೂಲಕ ಕನ್ನಡಿಗರಿಗೆ ನಾಯಕ ನಟಿಯಾಗಿ ಅಮೃತಾ ಪ್ರೇಮ್ ಪರಿಚಿತರಾಗಲಿದ್ದಾರೆ. ಈಗಾಗಲೇ 'ಟಗರು ಪಲ್ಯ' ಲುಕ್​​ನಲ್ಲಿ ಪ್ರೇಕ್ಷಕರಿಂದ ಅಪಾರ ಪ್ರೀತಿ ಪಡೆದುಕೊಂಡಿರುವ ಅಮೃತಾ ಪ್ರೇಮ್ ಅವರಿಗೆ ಈ ಸಿನಿಮಾ ಒಳ್ಳೆ ಹೆಸರು ತಂದುಕೊಡುವ ಸೂಚನೆ ಸಿಗುತ್ತಿದೆ.

ಹಳ್ಳಿ ಹುಡುಗಿ ಪಾತ್ರದಲ್ಲಿ ಪ್ರೇಮ್​ ಪುತ್ರಿ: ಚಿತ್ರದಲ್ಲಿ ಅಮೃತಾ ಪ್ರೇಮ್ ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಸಾಕಷ್ಟು ತಯಾರಿ ಮಾಡಿಕೊಂಡು, ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಭಾಷೆ ಕಲಿತು ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರಂತೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಉಮೇಶ್ ಕೆ ಕೃಪ, ಹಳ್ಳಿ ಹುಡುಗಿ ಪಾತ್ರ ಅಂದ್ರೆ ಸುಲಭದ ವಿಷಯವಲ್ಲ. ಅದಕ್ಕೆ ಆದಷ್ಟು ಬೇಗ ಒಗ್ಗಿಕೊಂಡು, ಆ ನಯ ನಾಜೂಕನ್ನು ಬಹಳ ಬೇಗ ಅರ್ಥಮಾಡಿಕೊಂಡು ಅಮೃತ ಅವರು ನಟಿಸಿದ್ದಾರೆ. ಭಾಷೆ ಮೇಲೆ ಅವರಿಗೆ ಹಿಡಿತ ಇದೆ. ಮಂಡ್ಯ ಸ್ಲ್ಯಾಂಗ್​ನಲ್ಲಿ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಬಹಳ ಬೇಗ ಎಲ್ಲವನ್ನೂ ಕಲಿತುಕೊಂಡು ಅಭಿನಯ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಹೆಚ್ಚಿನ ಭಾರತೀಯರು ಥಿಯೇಟರ್​​ಗಳಲ್ಲೇ ಸಿನಿಮಾ ವೀಕ್ಷಿಸಲು ಬಯಸುತ್ತಾರೆ: ಅಧ್ಯಯನ

ನಾಗಭೂಷಣ್ ಹಾಗೂ ಅಮೃತ ಪ್ರೇಮ್ ಅಲ್ಲದೇ ನಟಿ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾಬಳಗ ಈ ಸಿನಿಮಾದಲ್ಲಿದೆ. ಉಮೇಶ್.ಕೆ. ಕೃಪ ನಿರ್ದೇಶನದ ಚೊಚ್ಚಲ ಚಿತ್ರವಿದು. ಟಗರು ಪಲ್ಯ ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್.ಕೆ ರಾವ್ ಕ್ಯಾಮರಾ ವರ್ಕ್ ಇದೆ. ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಅಡಿ ನಿರ್ಮಾಣಗೊಂಡಿರುವ ಮೂರನೇ ಸಿನಿಮಾ ಇದು. ಈ ಬಾರಿ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಸದ್ಯ ಹಾಡು ಹಾಗೂ ಮೇಕಿಂಗ್​​ನಿಂದ ಸದ್ದು ಮಾಡುತ್ತಿರೋ ಟಗರು ಪಲ್ಯ ಚಿತ್ರ ಅಕ್ಟೋಬರ್ 27ರಂದು ಪ್ರೇಕ್ಷಕರ ಎದುರು ಬರಲಿದೆ.

ಇದನ್ನೂ ಓದಿ:ಶ್ರೀಲೀಲಾ ನಗುವಿಗೆ ಮಾರುಹೋದ ಅಭಿಮಾನಿಗಳು: ಹೀಗಿದೆ ಚೆಲುವಿನ ಚಿತ್ತಾರ

Last Updated : Oct 12, 2023, 3:04 PM IST

ABOUT THE AUTHOR

...view details