ಕರ್ನಾಟಕ

karnataka

'ದಿ ಆರ್ಚೀಸ್' ಬಿಡುಗಡೆಗೆ ಮುಹೂರ್ತ ಫಿಕ್ಸ್​​; ತೆರೆ ಹಂಚಿಕೊಂಡ ಬಾಲಿವುಡ್ ಸ್ಟಾರ್​ ಕಿಡ್ಸ್​!

By ETV Bharat Karnataka Team

Published : Aug 29, 2023, 3:47 PM IST

The Archies gets release date: 'ದಿ ಆರ್ಚೀಸ್'​ ಡಿಸೆಂಬರ್​ 7 ರಿಂದ ಓಟಿಟಿ ಪ್ಲಾಟ್​ಫಾರ್ಮ್​ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮಿಂಗ್​ ಆಗಲಿದೆ.

The Archies
'ದಿ ಆರ್ಚೀಸ್'

ಬಣ್ಣದ ಲೋಕ ಅಂದ್ರೆ ಹೀಗೇನೆ, ಯಾರೂ ಕೂಡ ಸ್ಟಾರ್​ ಆಗಬಹುದು. ಈ ಸಿನಿಮಾ ಎಂಬ ಗ್ಲ್ಯಾಮರ್​ ಪ್ರಪಂಚಕ್ಕೆ ಸಾಕಷ್ಟು ಮಂದಿ ನಟ, ನಟಿಯರು ಬರುತ್ತಾರೆ. ಅವರಲ್ಲಿ ಕೆಲವರು ಮಾತ್ರ ಜನರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಸ್ಟಾರ್​ ಕಿಡ್ಸ್​ ಹೀಗಲ್ಲ. ಅವರು ಹುಟ್ಟುವಾಗಲೇ ಅವರಿಗೆ ಅಭಿಮಾನಿಗಳು ಕೂಡ ಹುಟ್ಟಿಕೊಂಡು ಬಿಡುತ್ತಾರೆ. ಸಿನಿಮಾ, ಡ್ಯಾನ್ಸ್​, ಫೈಟಿಂಗ್​, ಮೇಕಪ್​ ಏನೂ ಬೇಕಾಗಿಲ್ಲ. ಕ್ರೇಜ್​ ಅನ್ನೋದು ತಾನಾಗಿಯೇ ಅವರನ್ನು ಹಿಂಬಾಲಿಸಿಕೊಂಡು ಬರುತ್ತದೆ.

ಈಗಾಗಲೇ ಭಾರತೀಯ ಚಿತ್ರರಂಗದ ಸ್ಟಾರ್​ ಮಕ್ಕಳು ಮತ್ತು ಮೊಮ್ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುವ ಮೂಲಕ ಭವಿಷ್ಯದ ಸೆಲೆಬ್ರಿಟಿಗಳಾಗುವ ಸೂಚನೆ ಕೊಟ್ಟಿದ್ದಾರೆ. ಇದೀಗ ಬಾಲಿವುಡ್​ ನಟ ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​, ಬೋನಿ ಕಪೂರ್​ ಅವರ ಮಗಳು ಖುಷಿ ಕಪೂರ್​ ಮತ್ತು ಬಿಗ್​ ಬಿ ಅಮಿತಾಭ್​ ಬಚ್ಚನ್​ ಅವರ ಮೊಮ್ಮಗ ಅಗಸ್ತ್ಯ ನಂದಾ ಜೊತೆಯಾಗಿ ಒಂದೇ ಪ್ರಾಜೆಕ್ಟ್​ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಮುಂಬರುವ ವೆಬ್​ಸಿರೀಸ್​ ದಿ ಆರ್ಚೀಸ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ದಿ ಆರ್ಚೀಸ್' ಬಿಡುಗಡೆಗೆ ಮುಹೂರ್ತ ಫಿಕ್ಸ್​: ದಿ ಆರ್ಚೀಸ್​ನ ತಯಾರಕರು ಮಂಗಳವಾರ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಸುಹಾನಾ ಖಾನ್​, ಖುಷಿ ಕಪೂರ್​ ಮತ್ತು ಅಗಸ್ತ್ಯಾ ನಂದ ಜೊತೆಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ.​ ಮುಂಬೈನ ವೆಸ್ಟರ್ನ್​ ಎಕ್ಸ್​ಪ್ರೆಸ್​ ಹೈವೇಯಲ್ಲಿ ಲೈವ್​ ಬಿಲ್​ಬೋರ್ಡ್​ನೊಂದಿಗೆ ಬಿಡುಗಡೆ ದಿನಾಂಕವನ್ನು ತಯಾರಕರು ಘೋಷಿಸಿದ್ದಾರೆ. ದಿ ಆರ್ಚೀಸ್​ ಡಿಸೆಂಬರ್​ 7 ರಿಂದ ಓಟಿಟಿ ಪ್ಲಾಟ್​ಫಾರ್ಮ್​ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿದೆ.

ಇದನ್ನೂ ಓದಿ:Jawan: ಎಸ್​ಆರ್​ಕೆ ಸಿನಿಮಾ ಸದ್ದು - ಖ್ಯಾತ ಥಿಯೇಟರ್​ನಲ್ಲಿ ಮುಂಜಾನೆ 6 ಗಂಟೆಗೆ ಜವಾನ್​ ಪ್ರದರ್ಶನ!

ಇನ್​ಸ್ಟಾಗ್ರಾಮ್​ನಲ್ಲಿ ಸುಹಾನಾ ಖಾನ್​ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಡಿಸೆಂಬರ್​ 7 ರಂದು ಆರ್ಚೀಸ್​ ಆಗಮಿಸಲು ಸಿದ್ಧರಾಗಿದ್ದಾರೆ. #100DaysToGo." ಎಂದು ಕ್ಯಾಪ್ಶನ್​ ನೀಡಿದ್ದಾರೆ. ಇನ್ನೂ ಈ ವೆಬ್​ಸಿರೀಸ್ ಆರ್ಚಿ, ಬೆಟ್ಟಿ, ಡಿಲ್ಟನ್, ಈಥರ್, ಜಗ್‌ಹೆಡ್, ರೆಗ್ಗೀ ಮತ್ತು ವೆರೋನಿಕಾ ಎಂಬ ಏಳು ಪಾತ್ರಗಳ ಗ್ಯಾಂಗ್​ ಕಥೆಯನ್ನು ಹೇಳುತ್ತದೆ. ದಿ ಆರ್ಚೀಸ್ ಭಾರತದ ಆಂಗ್ಲೋ ಇಂಡಿಯನ್ ಕಥೆಯನ್ನು ಆಧರಿಸಿದೆ. ಚಿತ್ರವು ಸ್ನೇಹ, ಪ್ರೀತಿ, ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ.

ಜೋಯಾ ಅಖ್ತರ್​ ಅವರ ಚಿತ್ರ ಇದಾಗಿದ್ದು, ಟೈಗರ್​ ಬೇಬಿ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ನಿರ್ಮಾಪಕ ಬೋನಿ ಕಪೂರ್ ಮತ್ತು ಶ್ರೀದೇವಿ ಪುತ್ರಿ ಖುಷಿ ಕಪೂರ್, ಅಮಿತಾ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಾಂಗ್ ರೈನಾ ವೆಬ್​ಸಿರೀಸ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೋಯಾ ಅಖ್ತರ್​ ಅವರು ಇತ್ತೀಚೆಗೆ ದಿ ವರ್ಚೀಸ್​ ಟೀಸರ್​ ಅನ್ನು ಅನಾವರಣಗೊಳಿಸಿದ್ದರು.

ಇದನ್ನೂ ಓದಿ:'ಇದು ನಿಜಕ್ಕೂ ಕ್ರೇಜಿ ಅಲ್ವಾ!'.. ಮದುವೆಯಾಗಿ 9 ವರ್ಷ ಆಯ್ತು; ಈಗ ಫೋಟೋ ಶೇರ್​ ಮಾಡ್ತಾರಂತೆ ರಾಣಿ ಮುಖರ್ಜಿ

ABOUT THE AUTHOR

...view details