ETV Bharat / entertainment

Jawan: ಎಸ್​ಆರ್​ಕೆ ಸಿನಿಮಾ ಸದ್ದು - ಖ್ಯಾತ ಥಿಯೇಟರ್​ನಲ್ಲಿ ಮುಂಜಾನೆ 6 ಗಂಟೆಗೆ ಜವಾನ್​ ಪ್ರದರ್ಶನ!

author img

By ETV Bharat Karnataka Team

Published : Aug 29, 2023, 1:07 PM IST

Jawan early morning show: ಗೈಟಿ ಗ್ಯಾಲಾಕ್ಸಿಯಲ್ಲಿ ಬೆಳಗ್ಗೆ 6 ಗಂಟೆಗೆ ಜವಾನ್​ ಸಿನಿಮಾ ಪ್ರದರ್ಶನಗೊಳ್ಳಲಿದೆ.

Jawan
ಜವಾನ್

ವಿವಾದಗಳ ನಡುವೆ ಈ ವರ್ಷಾರಂಭದಲ್ಲಿ ತೆರೆಕಂಡ ಬಾಲಿವುಡ್​ ಕಿಂಗ್​ ಖಾನ್​​ ಶಾರುಖ್​ ಅವರ ಪಠಾಣ್​ ಸಿನಿಮಾ 1,000 ಕೋಟಿ ರೂ. ಕ್ಲಬ್​ ಸೇರುವ ಮೂಲಕ ದಾಖಲೆ ಮೇಲೆ ದಾಖಲೆ ಬರೆದಿತ್ತು. ಇದೇ ವರ್ಷದಲ್ಲಿ ತೆರೆಕಾಣುತ್ತಿರುವ ಎಸ್​ಆರ್​ಕೆ ಮುಖ್ಯಭೂಮಿಕೆಯ ಮತ್ತೊಂದು ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾ 'ಜವಾನ್'. ಸೂಪರ್​ ಸ್ಟಾರ್​ ಅಭಿನಯದ ಜವಾನ್​​ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗುತ್ತಿದೆ. ಅಭಿಮಾನಿಗಳು ಸಿನಿಮಾ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ.

2023ರ ಜನವರಿ ಕೊನೆಯಲ್ಲಿ ತೆರೆಕಂಡ ಪಠಾಣ್​ ಸಿನಿಮಾ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ಹಲವು ದಾಖಲೆ ಮುರಿದು, ಅತಿ ಹೆಚ್ಚು ಸಂಗ್ರಹ ಮಾಡಿರುವ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹಾಗಾಗಿ ಸೂಪರ್​ ಸ್ಟಾರ್​ನ ಮುಂದಿನ ಸಿನಿಮಾ ಕ್ರೇಜ್​ ದೊಡ್ಡ ಮಟ್ಟದಲ್ಲೇ ಇದೆ.

ಶಾರುಖ್​ ಖಾನ್​ ಜೊತೆ ನಯನತಾರಾ, ವಿಜಯ್​ ಸೇತುಪತಿ ಸೇರಿದಂತೆ ಸ್ಟಾರ್​ ನಟರು ಬಣ್ಣ ಹಚ್ಚಿದ್ದಾರೆ. ಬಿಗ್​ ಸ್ಟಾರ್ ಕಾಸ್ಟ್ ಮಾತ್ರವಲ್ಲದೇ ವಿಶಿಷ್ಟ ಪ್ರದರ್ಶನ ವಿಚಾರವಾಗಿಯೂ ಜನರ ಗಮನ ಸೆಳೆದಿದೆ. ಹೌದು, ಮುಂಬೈನ ಖ್ಯಾತ ಚಿತ್ರಮಂದಿರ ಗೈಟಿ ಗ್ಯಾಲಾಕ್ಸಿಯಲ್ಲಿ ಬೆಳಗ್ಗೆ 6 ಗಂಟೆಗೆ ಜವಾನ್​ ಸಿನಿಮಾವನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಇದು ಎಸ್​ಆರ್​ಕೆ ಕಟ್ಟಾ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಶಾರುಖ್​ ಖಾನ್​​ ಯೂನಿವರ್ಸ್ ಫ್ಯಾನ್​ ಕ್ಲಬ್ (ಶಾರುಖ್​ ಖಾನ್​ ಅವರ ದೊಡ್ಡ ಅಭಿಮಾನಿ ಬಳಗ ಎಂದು ಗುರುತಿಸಿಕೊಂಡಿದೆ)​ ಪ್ರಕಾರ, ಹೆಚ್ಚು ಬೇಡಿಕೆ ಇರುವ ಥಿಯೇಟರ್​ನಲ್ಲಿ ಈ ವಿಶೇಷ ಪ್ರದರ್ಶನ ಆಯೋಜನೆಗೊಳ್ಳಲಿದೆ.

ಶಾರುಖ್​ ಖಾನ್​ ದಂಪತಿಯ ರೆಡ್​ ಚಿಲ್ಲೀಸ್​​ ಎಂಟರ್​ಟೈನ್​ಮೆಂಟ್​ ಬ್ಯಾನರ್​ ಅಡಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶಿಸಿದ್ದಾರೆ. ಅಟ್ಲೀ ಅವರ ಚೊಚ್ಚಲ ಬಾಲಿವುಡ್​ ಸಿನಿಮಾ. ಹಿಂದಿ, ತಮಿಳು, ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಶಾರುಖ್​ ಪತ್ನಿ ಗೌರಿ ಖಾನ್​ ಮತ್ತು ಗೌರವ್​ ವರ್ಮಾ ನಿರ್ಮಾಣ ಮಾಡಿರುವ ಜವಾನ್​ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: ದೊಡ್ಡ ಮಟ್ಟದಲ್ಲಿ ಅನಾವರಣಗೊಳ್ಳಲಿದೆ ಬಹುನಿರೀಕ್ಷಿತ 'ಜವಾನ್'​ ಟ್ರೇಲರ್​: ಎಲ್ಲಿ? ಯಾವಾಗ?

ಸಿನಿಮಾ ಸೆಪ್ಟೆಂಬರ್​ 7 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರತಂಡ ಪ್ರಚಾರ ಆರಂಭಿಸಿದೆ. ದುಬೈನ ಖ್ಯಾತ ಬುರ್ಜ್ ಖಲೀಫಾದಲ್ಲಿ ಜವಾನ್​ ಟ್ರೇಲರ್​​ ಅನಾವರಣಗೊಳಿಸಲು ಚಿತ್ರತಂಡ ಸಿದ್ಧವಾಗಿದೆ. ಆಗಸ್ಟ್ 31 ರಂದು ಯುಎಉನಲ್ಲಿ ನಡೆಯುವ ಟ್ರೇಲರ್​ ಲಾಂಚ್​​ ಈವೆಂಟ್​ನಲ್ಲಿ ಕಿಂಗ್​ ಖಾನ್​ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: RCB ಜೆರ್ಸಿ ಸೀನ್​ ಕಟ್​ ಮಾಡಿ: ಜೈಲರ್​ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್​​ ಆದೇಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.