ಕರ್ನಾಟಕ

karnataka

ಲಗೇಜ್ ನಾಪತ್ತೆ: ವಿಮಾನಯಾನ ಸಂಸ್ಥೆ ವಿರುದ್ಧ ರಾಣಾ ದಗ್ಗುಬಾಟಿ ಅಸಮಾಧಾನ

By

Published : Dec 4, 2022, 6:16 PM IST

Updated : Dec 4, 2022, 7:38 PM IST

ಖಾಸಗಿ ವಿಮಾನಯಾನ ಸಂಸ್ಥೆಯೊಂದರ ವಿರುದ್ಧ ರಾಣಾ ದಗ್ಗುಬಾಟಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Rana Daggubati tweet against private airlines
ವಿಮಾನಯಾನ ಸಂಸ್ಥೆಯೊಂದರ ವಿರುದ್ಧ ರಾಣಾ ದಗ್ಗುಬಾಟಿ ಅಸಮಧಾನ

ಖಾಸಗಿ ವಿಮಾನಯಾನ ಸಂಸ್ಥೆಯೊಂದರ ಸಿಬ್ಬಂದಿಯ ವರ್ತನೆಗೆ ನಟ ರಾಣಾ ದಗ್ಗುಬಾಟಿ ಅಸಹನೆ ವ್ಯಕ್ತಪಡಿಸಿದ್ದಾರೆ. ತಮ್ಮ ಲಗೇಜ್ ಪತ್ತೆಯಾಗದ ಹಿನ್ನೆಲೆ ಸಿಬ್ಬಂದಿ ವಿರುದ್ಧ ಟ್ವಿಟರ್​ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ತನಗೆ ಇಂತಹ ಕೆಟ್ಟ ಅನುಭವ ಆಗಿರಲಿಲ್ಲ ಎಂದ ರಾಣಾ.. ಕಂಪನಿಯ ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ. ಸಂಸ್ಥೆಯು ಇತ್ತೀಚೆಗೆ ಅವರು ಒದಗಿಸುವ ಸೌಲಭ್ಯಗಳು ಮತ್ತು ರಕ್ಷಣೆಯ ಬಗ್ಗೆ ಟ್ವೀಟ್ ಮಾಡಿದ್ದು, ರಾಣಾ ಈ ರೀತಿಯಾಗಿ ಮರುಟ್ವೀಟ್ ಮಾಡಿ ಟೀಕಿಸಿದ್ದಾರೆ.

ಇದನ್ನೂ ಓದಿ:ನಟಿ ಹನ್ಸಿಕಾ ಮೋಟ್ವಾನಿ ಮದುವೆ ಸಂಭ್ರಮ.. ಬಡ ಮಕ್ಕಳಿಗೆ ಆಹ್ವಾನ

ಈ ವಿಮಾನಗಳು ನಿಗದಿತ ಸಮಯಕ್ಕೆ ಟೇಕ್ ಆಫ್ ಅಥವಾ ಲ್ಯಾಂಡ್ ಆಗುವುದಿಲ್ಲ. ಅವರು ನಿಮ್ಮ ಸರಕುಗಳ ಬಗ್ಗೆ ಯಾವುದೇ ಪುರಾವೆಗಳನ್ನು ಇಟ್ಟುಕೊಳ್ಳುವುದಿಲ್ಲ ಎಂದು ರಾಣಾ ವಿಂಟರ್ ಸೇಲ್ ಆಫರ್ ಪೋಸ್ಟ್‌ ಅನ್ನು ಹಂಚಿಕೊಂಡು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅನೇಕ ನೆಟಿಜನ್‌ಗಳು ಮತ್ತು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ತಮ್ಮ ಹಿಂದಿನ ಅನುಭವಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ:ಕಾಶ್ಮೀರ್ ಫೈಲ್ಸ್: ನಡಾವ್ ಲಪಿಡ್ ಹೇಳಿಕೆ ಬೆಂಬಲಿಸಿದ ತೀರ್ಪುಗಾರರು

Last Updated : Dec 4, 2022, 7:38 PM IST

ABOUT THE AUTHOR

...view details