ETV Bharat / entertainment

ನಟಿ ಹನ್ಸಿಕಾ ಮೋಟ್ವಾನಿ ಮದುವೆ ಸಂಭ್ರಮ.. ಬಡ ಮಕ್ಕಳಿಗೆ ಆಹ್ವಾನ

author img

By

Published : Dec 4, 2022, 4:42 PM IST

Updated : Dec 4, 2022, 4:52 PM IST

ಜೈಪುರದ ಅರಮನೆಯಲ್ಲಿಂದು ನಡೆಯುವ ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಕಥುರಿಯಾ ಮದುವೆಗೆ ಸಾಕ್ಷಿಯಾಗಲು ಬಡ ಮಕ್ಕಳಿಗೆ ಆಹ್ವಾನ ನೀಡಲಾಗಿದೆ.

Actress Hansika Motwani wedding celebration
ನಟಿ ಹನ್ಸಿಕಾ ಮೋಟ್ವಾನಿ ಮದುವೆ ಸಂಭ್ರಮ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಅವರು ಗೆಳೆಯ, ಉದ್ಯಮಿ ಸೊಹೈಲ್ ಕಥುರಿಯಾ ಅವರೊಂದಿಗೆ ಇಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜೈಪುರದ 450 ವರ್ಷಗಳಷ್ಟು ಹಳೆಯ ಪುರಾತನ ಮಂಡೋಟಾ ಅರಮನೆಯಲ್ಲಿ ಮದುವೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ಮೆಹಂದಿ, ಸಂಗೀತ, ಹಳದಿ ಸೇರಿದಂತೆ ಬಗೆ ಬಗೆಯ ಶಾಸ್ತ್ರಗಳು ನಡೆದಿವೆ. ಶಾಸ್ತ್ರಗಳ ಫೋಟೋ, ವಿಡಿಯೋಗಳನ್ನು ನಟಿ ಹನ್ಸಿಕಾ ಹಂಚಿಕೊಂಡಿದ್ದಾರೆ. ಪ್ರೀ ವೆಡ್ಡಿಂಗ್​ ಪಾರ್ಟಿಯಲ್ಲಿ ಹನ್ಸಿಕಾ ಸಖತ್​ ಸ್ಟೆಪ್ ಹಾಕಿದ್ದು, ವಿಡಿಯೋ ವೈರಲ್​ ಆಗಿದೆ.

ಜೈಪುರದ ಅರಮನೆಯಲ್ಲಿಂದು ಇವರ ಮದುವೆ ಅದ್ಧೂರಿಯಾಗಿ ಜರುಗುತ್ತಿದೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲು ಕೆಲವು ಅತಿಥಿಗಳನ್ನು ಆಹ್ವಾನಿಸಲಾಗಿದೆ. ಆದರೆ ಅವರು ಸಿನಿಮಾ, ರಾಜಕೀಯ, ವ್ಯಾಪಾರ ಕ್ಷೇತ್ರಗಳ ಸೆಲೆಬ್ರಿಟಿಗಳಲ್ಲ. ಬದಲಾಗಿ ಬಡ ಮಕ್ಕಳು.

ನಟಿ ಹನ್ಸಿಕಾ ಅವರು ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತಾರೆ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಅವರು ಬಡ ಮಕ್ಕಳಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಾರೆ. ಅದರಂತೆ, ತಮ್ಮ ಮದುವೆಗೆ ಎನ್‌ಜಿಒಗಳಿಗೆ ಸೇರಿದ ಅನೇಕ ಮಕ್ಕಳಿಗೆ ಆಹ್ವಾನವನ್ನು ಕಳುಹಿಸಿದ್ದಾರೆ. ಈ ಅದ್ಧೂರಿ ಮದುವೆಗೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಹನ್ಸಿಕಾಗೆ ಧನ್ಯವಾದ ಅರ್ಪಿಸುವ ವಿಡಿಯೋವನ್ನು ಮಕ್ಕಳು ರಚಿಸಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಟಿಯ ಹೃದಯ ವೈಶಾಲ್ಯತೆಯನ್ನು ಶ್ಲಾಘಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಮದುವೆ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಇಂದು ಊಟವನ್ನು ಕಳುಹಿಸಲಿದ್ದಾರೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ನಟಿ ಹನ್ಸಿಕಾ.. ಸಡಗರದ ವಿಡಿಯೋ ನೋಡಿ!

ವಿವಾಹ ಪೂರ್ವ ಪಾರ್ಟಿಯ ಅಂಗವಾಗಿ ಶನಿವಾರ ಹನ್ಸಿಕಾ - ಸೊಹೈಲ್ ಡ್ಯಾನ್ಸ್ ಮಾಡಿದ್ದಾರೆ. ಬಾಲಿವುಡ್ ಹಾಡುಗಳಿಗೆ ಈ ಜೋಡಿ ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋಗಳು ಈಗ ಟ್ರೆಂಡಿಂಗ್​ನಲ್ಲಿವೆ.

ಇದನ್ನೂ ಓದಿ: ಹನ್ಸಿಕಾ - ಸೊಹೈಲ್ ಮದುವೆ ಸಂಭ್ರಮ.. ಸಂಗೀತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ

Last Updated : Dec 4, 2022, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.