ಕರ್ನಾಟಕ

karnataka

Sonam Kapoor: ರಾಣಾ ದುಗ್ಗುಬಾಟಿ ಕಾಮೆಂಟ್‌ಗೆ 'ಸಣ್ಣ ಬುದ್ಧಿಯ ಜನ' ಎಂದ ಸೋನಂ ಕಪೂರ್​​!

By

Published : Aug 16, 2023, 2:54 PM IST

Rana Daggubati comment: ನಟ ರಾಣಾ ದುಗ್ಗುಬಾಟಿ ಮಾತಿನಿಂದ ನಟಿ ಸೋನಂ ಕಪೂರ್​ ಟ್ರೋಲ್​ಗೆ ಗುರಿಯಾಗಿದ್ದರು.

Rana Daggubati comment on Sonam kapoor in king of kotha set
Rana Daggubati comment on Sonam kapoor in king of kotha set

ಬೆಂಗಳೂರು: ಸಿನಿಮಾ ಚಿತ್ರೀಕರಣದ ಸೆಟ್​ನಲ್ಲಿ ಸೋನಂ ಕಪೂರ್ ಅವರು ದುಲ್ಕರ್​ ಸಲ್ಮಾನ್​ ಅವರ ಸಮಯವನ್ನು ಹೇಗೆ ವ್ಯರ್ಥ ಮಾಡಿದರು ಎಂಬ ಕುರಿತು ರಾಣಾ ದುಗ್ಗುಬಾಟಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಸೋನಂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿಯಾಗಿದ್ದರು. ಈ ಬೆಳವಣಿಗೆಯ ನಂತರದಲ್ಲಿ ದುಗ್ಗುಬಾಟಿ ಮೈಕ್ರೋಬ್ಲಾಗಿಂಗ್​ ಎಕ್ಸ್​ನಲ್ಲಿ ಕ್ಷಮೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸೋನಂ, ಎಲೀನರ್ ರೂಸ್ವೆಲ್ಟ್ ಹೇಳಿಕೆ ಹಾಕಿ ತಿರುಗೇಟು ನೀಡಿದ್ದಾರೆ.

ಘಟನೆಯ ವಿವರ:ಸೋನಾಂ ಕಪೂರ್​ ಅವರು ದುಲ್ಕರ್​ ಸಲ್ಮಾನ್​ ಜೊತೆಗೆ 'ಕಿಂಗ್​ ಆಫ್​ ಕೊಥಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದುಲ್ಕರ್​ ಮತ್ತು ರಾಣಾ ಉತ್ತಮ ಸ್ನೇಹಿತರು. ಇತ್ತೀಚೆಗೆ 'ಬಾಹುಬಲಿ' ನಟರಾದ ದಗ್ಗುಬಾಟಿ ಈ ಸಿನಿಮಾ ಸೆಟ್​ಗೆ ಭೇಟಿ ನೀಡಿದ್ದಾರೆ. ಈ ವೇಳೆ ಹೆಸರು ಉಲ್ಲೇಖಿಸದೇ ಬಾಲಿವುಡ್​ನ ನಟಿಯೊಬ್ಬರು ಫೋನ್​ನಲ್ಲಿ ಮಾತನಾಡುತ್ತಾ ಸಹನಟ ದುಲ್ಕರ್​ ಸೇರಿದಂತೆ ಚಿತ್ರತಂಡದ ಸಮಯ ವ್ಯರ್ಥ ಮಾಡಿದ್ದರ ಕುರಿತು ತಿಳಿಸಿದ್ದರು. ಅಭಿಮಾನಿಗಳಿಗೆ ಇದು ಸೋನಂ ಕಪೂರ್​ ಕುರಿತೇ ಹೇಳುತ್ತಿರುವುದಾಗಿ ಗೊತ್ತಾಯಿತು. ಹೀಗಾಗಿ ಅನೇಕರು ಸೋನಂ ಅವರನ್ನು ಟ್ರೋಲ್​ ಮಾಡಿದ್ದರು.

ಘಟನೆಯ ನಂತರ ದದ್ದುಬಾಟಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದರು. ಇದಕ್ಕೆ ಪ್ರತಿಯಾಗಿ ಸೋನಂ ಕಪೂರ್​ ಅವರು ಎಲೀನರ್​ ರೊಸ್ವಲ್ಟ್​ ಅವರ ಹೇಳಿಕೆಯಾದ "ಸಣ್ಣ ಬುದ್ಧಿಯವರು ಜನರ ಬಗ್ಗೆ ಮಾತನಾಡುತ್ತಾರೆ, ಸಾಮಾನ್ಯ ಬುದ್ಧಿಯವರು ಘಟನೆಗಳ ಬಗ್ಗೆ ಮಾತನಾಡುತ್ತಾರೆ, ಅದ್ಭುತ ಬುದ್ಧಿವರು ತಮ್ಮ ಆಲೋಚನೆಗಳ ಕುರಿತು ಮಾತನಾಡುತ್ತಾರೆ" ಎಂಬ ವಾಕ್ಯವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಕಿ ಟಾಂಗ್‌ ಕೊಟ್ಟಿದ್ದಾರೆ. ಇದಕ್ಕೆ, "ವಿಶೇಷವಾಗಿ ಜನರ ಬಗ್ಗೆ ಮಾತನಾಡುವಾಗ" ಎಂಬ ಅಡಿಬರಹ ಬರೆದಿದ್ದಾರೆ.

ಸೋನಂ ಸಾಮಾಜಿಕ ಜಾಲತಾಣದ ಪೋಸ್ಟ್​

ದುಲ್ಕರ್​ ಸಲ್ಮಾನ್​ ಅವರ ಮುಂದಿನ ಚಿತ್ರ 'ಕಿಂಗ್​​ ಆಫ್​ ಕೊಥಾ' ಚಿತ್ರೀಕರಣ ಹೈದರಾಬಾದ್​ನಲ್ಲಿ ನಡೆದಿತ್ತು. ಚಿತ್ರದ ಸೆಟ್​ನಲ್ಲಿ ದುಲ್ಕರ್​ ಅವರ ಸಹನೆ ಮತ್ತು ನಮ್ರತೆಯ ಬಗ್ಗೆ ಹೊಗಳಿದ್ದರು. ಈ ಕುರಿತು ವಿಡಿಯೋದಲ್ಲಿ ಮಾತನಾಡಿದ್ದ ದಗ್ಗುಬಾಟಿ, "ಬಾಲಿವುಡ್​​ನ ಹೆಸರಾಂತ ನಟಿಯೊಬ್ಬರು ಚಿತ್ರೀಕರಣದ ಸೆಟ್​ನಲ್ಲಿ ತಮ್ಮ ಪತಿಯ ಜೊತೆಗೆ ಲಂಡನ್​ ಶಾಪಿಂಗ್​ ಪ್ಲಾನ್​ ಬಗ್ಗೆ ಮಾತನಾಡುತ್ತಾ ಕುಳಿತಿದ್ದರು. ಅವರಿಗಾಗಿ ಇಡೀ ಚಿತ್ರತಂಡವೇ ಕಾದು ಕುಳಿತಿದೆ ಎಂಬ ಪರಿವು ಅವರಿಗೆ ಇರಲಿಲ್ಲ. ಸಮಯ ವ್ಯರ್ಥ ಮಾಡುತ್ತಿದ್ದರು" ಎಂದು ತಿಳಿಸಿದ್ದರು.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ, ಸೋನಂ ಅವರ ವೃತ್ತಿಪರತೆಯ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ದಗ್ಗುಬಾಟಿ ವಿವರಣೆಯೊಂದಿಗೆ ದುಲ್ಕರ್​ ಮತ್ತು ಸೋನಾಂ ಕಪೂರ್​ ಬಳಿ ಕ್ಷಮೆ ಯಾಚಿಸಿದ್ದರು.

"ನನ್ನ ಹೇಳಿಕೆಯ ಬಳಿಕ ಸೋನಂ ಎದುರಿಸುತ್ತಿರುವ ಟೀಕೆಗಳಿಗೆ ನಾನು ನಿಜಕ್ಕೂ ಚಿಂತಿತನಾಗಿದ್ದೇನೆ. ಇದು ಸಂಪೂರ್ಣವಾಗಿ ಸುಳ್ಳು. ನಾನು ತಮಾಷೆಗೆ ಹೀಗೆ ಹೇಳಿದ್ದೆ. ನಾವು ಸ್ನೇಹಿತರ ಸುತ್ತ ಹೀಗೆ ತಮಾಷೆ ಮಾಡುತ್ತೇವೆ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆ ಇರಲಿ. ದುಲ್ಕರ್​ ಮತ್ತು ಸೋನಂ ಅವರಲ್ಲಿ ಕ್ಷಮೆ ಕೇಳುತ್ತೇನೆ. ಈ ವಿಚಾರವನ್ನು ಇಲ್ಲಿಗೆ ಮುಗಿಸೋಣ" ಎಂದು ಬರೆದಿದ್ದರು.

ಇದನ್ನೂ ಓದಿ: ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ದುಲ್ಕರ್​ ಸಲ್ಮಾನ್​ ಅಬ್ಬರ - 'ಕಿಂಗ್​ ಆಫ್​ ಕೋಥಾ' ಯಶಸ್ಸಿಗೆ ಶಾರುಖ್ ಶುಭ ಹಾರೈಕೆ

ABOUT THE AUTHOR

...view details