ಕರ್ನಾಟಕ

karnataka

ವಿನಯ್‌ ರಾಜ್‌ಕುಮಾರ್‌ ಅಭಿನಯದ 'ಪೆಪೆ' ಮುಂದಿನ ವರ್ಷ ತೆರೆಗೆ

By

Published : Nov 21, 2022, 11:51 AM IST

ಸಿನಿ ರಸಿಕರ ಕುತೂಹಲಕ್ಕೆ ಕಾರಣವಾಗಿರುವ ನಟ ವಿನಯ್ ರಾಜ್​ಕುಮಾರ್ ಅಭಿನಯದ ಪೆಪೆ ಸಿನಿಮಾ ಮುಂದಿನ ವರ್ಷ ತೆರೆ ಮೇಲೆ ಬರಲಿದೆ.

Vinay Rajkumar starrer Pepe will hit the screens next year
ವಿನಯ್ ರಾಜ್​ಕುಮಾರ್ ಅಭಿನಯದ ಪೆಪೆ ಸಿನಿಮಾ ಮುಂದಿನ ವರ್ಷ ತೆರೆ ಮೇಲೆ

ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವವರು ರಾಜ್​ ಕುಟುಂಬದ ಕುಡಿ ನಟ ವಿನಯ್ ರಾಜ್​ಕುಮಾರ್. 2018ರಲ್ಲಿ ಇವರ ನಟನೆಯ ಅನಂತು v/s ನುಸ್ರುತ್ ಸಿನಿಮಾ ತೆರೆಕಂಡ ಮೇಲೆ ಯಾವ ಚಿತ್ರವೂ ಬಿಡುಗಡೆ ಆಗಿರಲಿಲ್ಲ. ಇದೀಗ ಗ್ರಾಮಾಯಣ, ಅದೊಂದಿತ್ತು ಕಾಲ ಅಂತಾ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡ್ತಿದ್ದಾರೆ. ಈ ಮಧ್ಯೆ ವಿನಯ್ ರಾಜ್​ಕುಮಾರ್ ನಟನೆಯ ಪೆಪೆ ಚಿತ್ರದ ಶೂಟಿಂಗ್‌ ಕೂಡಾ ಕಂಪ್ಲೀಟ್ ಮಾಡಲಾಗಿದೆ.

ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಪೆಪೆ’ಯ ಕ್ಲೈಮಾಕ್ಸ್‌ ಶೂಟಿಂಗ್‌ ಸಕಲೇಶಪುರದಲ್ಲಿ ನಡೆದಿದೆ. ಸಾಹಸ ನಿರ್ದೇಶಕ ರವಿವರ್ಮಾ ಕಂಪೋಸ್ ಮಾಡಿದ ಫೈಟಿಂಗ್ ಸೀನ್ ಸೆರೆ ಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಶುಭಂ ಹೇಳಲಾಗಿದೆ.

ಆರಂಭದಿಂದಲೂ ಒಂದೇ ರೀತಿಯ ಸಿನಿಮಾಗಳ ಮೊರೆ ಹೋಗದೇ ಪ್ರತಿ ಸಿನಿಮಾದಲ್ಲೂ ವಿಭಿನ್ನತೆ ಕಾಪಾಡಿಕೊಂಡು ಬರುತ್ತಿರುವ ವಿನಯ್ ರಾಜ್​ಕುಮಾರ್, ಈ ಚಿತ್ರದಲ್ಲಿ ಗ್ಯಾಂಗ್ ಲೀಡರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೆದಿನಿ ಕೆಳಮನಿ, ಯಶ್ ಶೆಟ್ಟಿ, ಕಾಜಲ್ ಕುಂದರ್, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್, ಬಾಲಾ ರಾಜ್ವಾಡಿ ಒಳಗೊಂಡ ತಾರಾ ಬಳಗವಿದೆ.

ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಕೊಡಗು, ಸಕಲೇಶಪುರದಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಉದಯ್ ಮತ್ತು ಶ್ರೀರಾಮ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಶಿವ ರಾಜ್​ಕುಮಾರ್ ನಟನೆಯ 125ನೇ ಚಿತ್ರ ವೇದ ಟೀಸರ್ ಔಟ್

ABOUT THE AUTHOR

...view details