ಶಾರುಖ್ ಖಾನ್, ನಟಿ ದೀಪಿಕಾ ಪಡುಕೋಣೆ, ನಟ ಜಾನ್ ಅಬ್ರಹಾಂ ಅಭಿನಯದ ಪಠಾಣ್ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಜೊತೆಗೆ ಥಿಯೇಟರ್ನ ಹೊರಗೂ ಪ್ರತಿಭಟನೆಯ ಧೂಳೆದ್ದಿದೆ. ನಾಲ್ಕು ವರ್ಷಗಳ ಬಳಿಕ ಆ್ಯಕ್ಷನ್ ಅವತಾರದಲ್ಲಿ ಬಾಲಿವುಡ್ ಕಿಂಗ್ ಖಾನ್ ಅಬ್ಬರಿಸಿದ್ದು ಅಭಿಮಾನಿಗಳು ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ನಿರೀಕ್ಷೆಯಂತೆ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವಲ್ಲಿ ಪಠಾಣ್ ಯಶಸ್ವಿ ಆಗಿದೆ.
55 ಕೋಟಿ ರೂಪಾಯಿ ಕಲೆಕ್ಷನ್:ನಿನ್ನೆ ಸುಮಾರು 100 ದೇಶಗಳಲ್ಲಿ ಬಿಡುಗಡೆ ಕಂಡಿರುವ ಪಠಾಣ್ ಸಿನಿಮಾ 55 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಚಿತ್ರ ತಯಾರಕರು ಘೋಷಿಸಿದ್ದಾರೆ. ಸಿನಿಮಾ ಪ್ರೊಡಕ್ಷನ್ ಹೌಸ್ ಯಶ್ ರಾಜ್ ಫಿಲ್ಮ್ಸ್ (YRF) ಪ್ರಕಾರ, ಚಿತ್ರದ ಮೊದಲ ದಿನದ ಸಂಗ್ರಹವು 55 ಕೋಟಿ ರೂಪಾಯಿಗಳಷ್ಟಿದೆ. ಇದು ಹಿಂದಿ ಚಿತ್ರವೊಂದಕ್ಕೆ ಅತಿ ಹೆಚ್ಚು ಗಳಿಕೆ ಆಗಿದೆ. ಚೇತರಿಕೆ ಮಾರ್ಗದಲ್ಲಿದ್ದ ಬಾಲಿವುಡ್ಗೆ ಪಠಾಣ್ ಯಶಸ್ಸು ಆನೆಬಲ ಬಂದಂತಾಗಿದೆ. ಅಲ್ಲದೇ ಮೊದಲ ದಿನದ ಕಲೆಕ್ಷನ್ ಕೆಜಿಎಫ್ ದಾಖಲೆಯುನ್ನೂ ಪುಡಿ ಮಾಡಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ನಾಲ್ಕು ವರ್ಷಗಳ ನಂತರ ಶಾರುಖ್ ಸಿನಿರಂಗಕ್ಕೆ ಮರಳಿರುವುದನ್ನು ಸೂಚಿಸಿದೆ. ಅವರ ಹಿಂದಿನ ಚಿತ್ರ ಝೀರೋ 2018ರಲ್ಲಿ ತೆರೆ ಕಂಡಿತ್ತು. ರಜಾ ದಿನವಲ್ಲದಿದ್ದರೂ ಪಠಾಣ್ ಈ ಮಟ್ಟಿಗೆ ಕಲೆಕ್ಷನ್ ಮಾಡಿರುವುದು ದೊಡ್ಡ ದಾಖಲೆ ಎಂದು ಯಶ್ ರಾಜ್ ಫಿಲ್ಮ್ಸ್ ಹೇಳಿದೆ.
ಇದನ್ನೂ ಓದಿ:ಮರಾಠಿ ಸಿನಿಮಾಗಳ ಮೇಲೆ ಪಠಾಣ್ ಪರಿಣಾಮ: ಚಿತ್ರಮಂದಿರಗಳ ಮಾಲೀಕರಿಗೆ ಎಂಎನ್ಎಸ್ ಎಚ್ಚರಿಕೆ!!