ಕರ್ನಾಟಕ

karnataka

'ಎಮರ್ಜೆನ್ಸಿ' ರಿಲೀಸ್​ ಡೇಟ್ ಮುಂದೂಡಿಕೆ; 'ಕ್ಷಮೆಯಿರಲಿ' ಎಂದ ನಟಿ ಕಂಗನಾ ರಣಾವತ್​

By ETV Bharat Karnataka Team

Published : Oct 16, 2023, 7:49 PM IST

ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ 'ಎಮರ್ಜೆನ್ಸಿ' ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

'Not just a film, it's test of my worth', says Kangana Ranaut as she pushes Emergency release to 2024
'ಎಮರ್ಜೆನ್ಸಿ' ರಿಲೀಸ್​ ಡೇಟ್ ಮುಂದೂಡಿಕೆ; 'ಕ್ಷಮೆಯಿರಲಿ' ಎಂದ ನಟಿ ಕಂಗನಾ ರಣಾವತ್​

ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಅವರ ಮುಂಬರುವ ಸಿನಿಮಾ 'ಎಮರ್ಜೆನ್ಸಿ'. ಈ ಚಿತ್ರ ಕಂಗನಾ ವೃತ್ತಿ ಜೀವನದ ದೊಡ್ಡ ಪರೀಕ್ಷೆ ಅಂದ್ರೆ ತಪ್ಪಾಗಲ್ಲ. ಅವರು ಕೇವಲ ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಹೊರ ಹೊಮ್ಮಲಿದ್ದಾರೆ. ಈ ಸಿನಿಮಾವನ್ನು ಇದೇ ವರ್ಷ ನವೆಂಬರ್​ 24ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ರಿಲೀಸ್​ ಡೇಟ್​ ಮುಂದೂಡಲಾಗಿದೆ ಎಂದು ಕಂಗನಾ ರಣಾವತ್​ ತಿಳಿಸಿದ್ದಾರೆ.

ಎಕ್ಸ್​ ವೇದಿಕೆಯಲ್ಲಿ 'ಎಮರ್ಜೆನ್ಸಿ' ಬಗ್ಗೆ ಅಪ್​ಡೇಟ್​ ನೀಡಿರುವ ಅವರು, "ಆತ್ಮೀಯ ಸ್ನೇಹಿತರೇ, ಅತಿ ಮುಖ್ಯವಾದ ವಿಚಾರವನ್ನು ಘೋಷಣೆ ಮಾಡಲಿದ್ದೇನೆ. 'ಎಮರ್ಜೆನ್ಸಿ' ಸಿನಿಮಾವು ಕಲಾವಿದಳಾಗಿ ನನ್ನ ಸಂಪೂರ್ಣ ಜೀವನದ ಕಲಿಕೆ ಮತ್ತು ಗಳಿಕೆಯ ಪರಾಕಾಷ್ಠೆಯಾಗಿದೆ. 'ಎಮರ್ಜೆನ್ಸಿ' ಎನ್ನುವುದು ನನಗೆ ಕೇವಲ ಚಿತ್ರವಲ್ಲ. ಇದು ವೈಯಕ್ತಿಕವಾಗಿ ನನ್ನ ಯೋಗ್ಯತೆ ಮತ್ತು ಪಾತ್ರದ ಪರೀಕ್ಷೆಯಾಗಿದೆ. ಇಲ್ಲಿಯವರೆಗೆ ಚಿತ್ರದ ಅಪ್​ಡೇಟ್ಸ್​ ಮತ್ತು ಟೀಸರ್​ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ನಮಗೆ ಉತ್ತೇಜನ ನೀಡಿದೆ" ಎಂದು ಹೇಳಿದ್ದಾರೆ.

ಅಲ್ಲದೇ, "ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ. ನಾನೆಲ್ಲೇ ಹೋದರು ಜನರು ನನ್ನಲ್ಲಿ 'ಎಮರ್ಜೆನ್ಸಿ' ಬಿಡುಗಡೆ ಯಾವಾಗ ಎಂದೇ ಕೇಳುತ್ತಾರೆ. ನಾವು ಈಗಾಗಲೇ 2023ರ ನವೆಂಬರ್​ 24 ಸಿನಿಮಾ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದೆವು. ಆದರೆ, ನನ್ನ ನಟನೆಯ ಕೆಲವು ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗುತ್ತಿದೆ. ಹೀಗಾಗಿ ಈಗಾಗಲೇ ನಿರ್ಧರಿಸಲಾದ ದಿನಾಂಕವನ್ನು ಮುಂದೂಡಲಿದ್ದೇವೆ. ಮುಂದಿನ ವರ್ಷಕ್ಕೆ (2024) ಚಿತ್ರವನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದೇವೆ. ಆದಷ್ಟು ಶೀಘ್ರದಲ್ಲೇ ಮುಂದಿನ ದಿನಾಂಕವನ್ನು ತಿಳಿಸುತ್ತೇವೆ. ಚಿತ್ರಕ್ಕಾಗಿ ನಿಮ್ಮ ನಿರೀಕ್ಷೆ, ಕುತೂಹಲ ಉತ್ಸಾಹ ಬಹಳಷ್ಟಿದೆ ಎಂಬುದು ನನಗೆ ಅರ್ಥವಾಗುತ್ತದೆ. ದಯವಿಟ್ಟು ಕ್ಷಮೆಯಿರಲಿ" ಎಂದಿದ್ದಾರೆ.

ಇದನ್ನೂ ಓದಿ:ಬಹು ನಿರೀಕ್ಷಿತ 'ಟೈಗರ್ 3' ಟ್ರೇಲರ್​ ರಿಲೀಸ್​: ಸಲ್ಮಾನ್​ ಖಾನ್​ - ಇಮ್ರಾನ್ ಹಶ್ಮಿ ಮುಖಾಮುಖಿ

ಕಥೆ ಏನು?: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕುರಿತಾದ ಕಥೆ ಇದಾಗಿದೆ. ಸಂಪೂರ್ಣ ಸಿನಿಮಾ ಅವರ ಸುತ್ತ ಸುತ್ತುತ್ತದೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್​ ನಟಿಸಿದ್ದಾರೆ. ಈಗಾಗಲೇ ಅವರು ಸಿನಿಮಾದ ಶೂಟಿಂಗ್​ ಕೂಡ ಪೂರ್ಣಗೊಳಿಸಿದ್ದಾರೆ.

ಸಿನಿಮಾಗೆ ಬಣ್ಣ ಹಚ್ಚಿದವರು: 2021ರಲ್ಲಿ ನಟಿ ಕಂಗನಾ ರಣಾವತ್​ ಅವರು ಈ 'ಎಮರ್ಜೆನ್ಸಿ' ಸಿನಿಮಾವನ್ನು ಘೋಷಿಸಿದರು. ಅವರ ಹಿಂದಿನ ಚಿತ್ರ ಧಾಕಡ್​​ ಕಥೆ ಬರೆದ ಬರಹಗಾರ ರಿತೇಶ್​ ಶಾ ಅವರೇ ಈ ಚಿತ್ರದ ಕಥೆಯನ್ನೂ ಬರೆದಿದ್ದಾರೆ. ಧಾಕಡ್​​ ಸಿನಿಮಾ ಯಸಶ್ಸು ಕಂಡಿಲ್ಲ. ಇದೀಗ ಯಶಸ್ಸಿನ ಗುರಿಯೊಂದಿಗೆ ಎಮರ್ಜೆನ್ಸಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ಕಂಗನಾ ರಣಾವತ್ ಜೊತೆಗೆ ಅನುಪಮ್​ ಖೇರ್, ಮಿಲಿಂದ್​ ಸೋಮನ್, ಮಹಿಮಾ ಚೌಧರಿ, ಸತೀಶ್​ ಕೌಶಿಕ್​, ಶ್ರೇಯಸ್​ ತಲ್ಪಾಡೆ ಅವರು ಪ್ರಮುಖ ರಾಜಕೀಯ ಮುಖಂಡರ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇದನ್ನೂ ಓದಿ:ಪೃಥ್ವಿರಾಜ್​ ಸುಕುಮಾರನ್​ ಹುಟ್ಟುಹಬ್ಬ: ಫಸ್ಟ್​ ಲುಕ್​ ಪೋಸ್ಟರ್​ನೊಂದಿಗೆ ಶುಭಕೋರಿದ 'ಸಲಾರ್​' ಚಿತ್ರತಂಡ

ABOUT THE AUTHOR

...view details