ಕರ್ನಾಟಕ

karnataka

ಸ್ಕಾಟ್ಲೆಂಡ್​​ ಪ್ರವಾಸದಲ್ಲಿ ಮಲೈಕಾ ಅರೋರಾ - ಅರ್ಜುನ್ ಕಪೂರ್

By

Published : Apr 19, 2023, 12:28 PM IST

ಮಲೈಕಾ ಅರೋರಾ ಅವರು ಗೆಳೆಯ ಅರ್ಜುನ್ ಕಪೂರ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

Malaika Arora arjun kapoor
ಮಲೈಕಾ ಅರೋರಾ ಅರ್ಜುನ್ ಕಪೂರ್

ನಟ ಅರ್ಜುನ್ ಕಪೂರ್ ಮತ್ತು ನಟಿ ಮಲೈಕಾ ಅರೋರಾ ಬಾಲಿವುಡ್​ನ ಲವ್​ ಬರ್ಡ್ಸ್​​ಗಳಾಗಿ ಗುರುತಿಸಿಕೊಂಡಿದ್ದಾರೆ. ಈ ಬಾಲಿವುಡ್​​ ಜೋಡಿ ತಾವು ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಮಂಗಳವಾರದಂದು ನಟಿ ಮಲೈಕಾ ಅರೋರಾ ತಮ್ಮ ಇನ್​ಸ್ಟಾ ಪೇಜ್​ನಲ್ಲಿ ಗೆಳೆಯ ಅರ್ಜುನ್ ಕಪೂರ್​ ಜೊತೆಗಿನ ಒಂದೆರಡು ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಚಳಿಗಾಲದ ಉಡುಗೆ ತೊಟ್ಟು ಒಟ್ಟಿಗೆ ಸೆಲ್ಫಿಗೆ ಪೋಸ್ ನೀಡಿರುವುದನ್ನು ಕಾಣಬಹುದು.

ಮಲೈಕಾ ಹಂಚಿಕೊಂಡಿರುವ ಪೋಸ್ಟ್‌ಗೆ ವಿಶೇಷವಾಗಿ ಶೀರ್ಷಿಕೆ ನೀಡಿದ್ದಾರೆ. ''ಬೆಚ್ಚಗಿನ ಮತ್ತು ಸ್ನೇಹಶೀಲ. ನಿಮ್ಮ ಸುತ್ತಲೂ ನಾನು ಹೀಗೆಯೇ ಭಾವಿಸುತ್ತೇನೆ ಅರ್ಜುನ್​​ ಕಪೂರ್​" ಎಂದು ಬರೆದುಕೊಂಡಿದ್ದಾರೆ. ಮಲೈಕಾರ ಈ ಪೋಸ್ಟ್​ಗೆ ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಸ್ನೇಹಿತರು ಪ್ರತಿಕ್ರಿಯಿಸಿದ್ದಾರೆ. ಸುಸ್ಸಾನೆ ಖಾನ್ "ಲವ್ ಯೂ ಬೋತ್​​" ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ದಂಪತಿಗಳ ಮೇಲೆ ತಮ್ಮ ಪ್ರೀತಿಯ ಮಳೆಯನ್ನೇ ಹರಿಸಿದರು. ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, "ಇದು ರಬ್ ನೆ ಬನಾ ದಿ ಜೋಡಿಯ ಪರಿಪೂರ್ಣ ಉದಾಹರಣೆಯಾಗಿದೆ" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ಸುಂದರ ಜೋಡಿ" ಎಂದು ಕಮೆಂಟ್ ಮಾಡಿದ್ದಾರೆ.

ನಟ ಅರ್ಜುನ್ ಕಪೂರ್​ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿನಲ್ಲಿ ಸಾಲ್ಸ್‌ಬರ್ಗ್‌ನ (Salsburgh, ಸ್ಕಾಟ್ಲೆಂಡ್​) ಸುಂದರವಾದ ಹಿಮಭರಿತ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕೆಲವು ಸಮಯದಿಂದ ಡೇಟಿಂಗ್​ನಲ್ಲಿದ್ದಾರೆ. ಆದರೆ, ಅವರ ನಡುವಿನ 12 ವರ್ಷಗಳ ವಯಸ್ಸಿನ ಅಂತರದಿಂದಾಗಿ ಸಾಕಷ್ಟು ಟ್ರೋಲ್​​, ಟೀಕೆ ಎದುರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈಗಲೂ ಇವರ ಸಂಬಂಧದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಎಲ್ಲ ಟ್ರೋಲಿಂಗ್‌ಗಳ ನಂತರವೂ, ಮಲೈಕಾ ಮತ್ತು ಅರ್ಜುನ್ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಪ್ರೀತಿ ವ್ಯಕ್ತಪಡಿಸುವುದರಿಂದ ಹಿಂದೆ ಸರಿದಿಲ್ಲ. ಸಿನಿಮಾ ಈವೆಂಟ್​ಗಳಲ್ಲಿ ಮ್ಯಾಚಿಂಗ್​​ ಡ್ರೆಸ್​ ತೊಟ್ಟು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಪಾಪರಾಜಿಗಳ ಕ್ಯಾಮರಾ ಎದುರು ಪ್ರೇಮಿಗಳಂತೆ ನಿಲ್ಲುತ್ತಾರೆ.

ಇದನ್ನೂ ಓದಿ:'ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು'?: ಚೇತನ್​​​ ವೀಸಾ ರದ್ಧತಿ ಬಗ್ಗೆ ನಟ ಕಿಶೋರ್ ಹೇಳಿದ್ದಿಷ್ಟು!

ಸಿನಿಮಾ ವಿಚಾರ ಗಮನಿಸುವುದಾದರೆ, ಅರ್ಜುನ್ ಇತ್ತೀಚೆಗೆ ನಿರ್ದೇಶಕ ಆಸ್ಮಾನ್ ಭಾರದ್ವಾಜ್ ಅವರ ಕಾಮಿಡಿ ಚಿತ್ರ 'ಕುಟ್ಟೆ'ಯಲ್ಲಿ ಕಾಣಿಸಿಕೊಂಡರು. ಟಬು, ರಾಧಿಕಾ ಮದನ್ ಮತ್ತು ಕೊಂಕಣ ಸೇನ್ ಶರ್ಮಾ ಕೂಡಾ ಇದರಲ್ಲಿ ಬಣ್ಣ ಹಚ್ಚಿದ್ದಾರೆ. ಮುಂದೆ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ದಿ ಲೇಡಿ ಕಿಲ್ಲರ್'ನಲ್ಲಿ ಭೂಮಿ ಪೆಡ್ನೇಕರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಭೂಮಿ ಪೆಡ್ನೇಕರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಹೆಸರಿಡದ ರೊಮ್ಯಾಂಟಿಕ್ ಕಾಮಿಡಿ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲೈಕಾ ಅವರು ಇತ್ತೀಚೆಗೆ ಗುರು ರಾಂಧವಾ ಅವರೊಂದಿಗೆ 'ತೇರಾ ಕಿ ಖಯಾಲ್' ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸುಂದರ ಫೋಟೋಗಳಲ್ಲಿ ಶಾರುಖ್​ ಖಾನ್​ ಕುಟುಂಬ: 'ಪಠಾಣ್​ ಫ್ಯಾಮಿಲಿ' ಎಂದ ಫ್ಯಾನ್ಸ್

ABOUT THE AUTHOR

...view details