ಕರ್ನಾಟಕ

karnataka

'ಕಿಚ್ಚ 46' ಬಗ್ಗೆ ಸಿಕ್ತು ಬಿಗ್​ ಅಪ್​ಡೇಟ್​.. ಸುದೀಪ್​ ಮುಂದಿನ ಸಿನಿಮಾದ ಟೀಸರ್​ಗೆ ಮುಹೂರ್ತ ಫಿಕ್ಸ್​!

By

Published : Jun 27, 2023, 7:31 PM IST

Updated : Jun 27, 2023, 8:03 PM IST

ನಟ ಕಿಚ್ಚ ಸುದೀಪ್ ಅವರ​ ಮುಂದಿನ ಚಿತ್ರದ ಟೀಸರ್​ ಜುಲೈ 2 ರಂದು ಬಿಡುಗಡೆಯಾಗಲಿದೆ.

kiccha
'ಕಿಚ್ಚ 46'

'ಕಿಚ್ಚ 46' ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿರೋ ವಿಚಾರ. ಕಳೆದ ಸುಮಾರು ಏಳೆಂಟು ತಿಂಗಳಿಂದ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಅಂತೆ - ಕಂತೆಗಳು ಕೇಳಿಬರುತ್ತಲೇ ಇವೆ. ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ಶೀಘ್ರದಲ್ಲೇ ಘೋಷಿಸುವುದಾಗಿ ನಟ ಸುದೀಪ್​ ಹೇಳಿದ್ದರು. ಇದೀಗ ಕಿಚ್ಚನ 46ನೇ ಸಿನಿಮಾ ಚಿತ್ರತಂಡ ಹೊಸ ಅಪ್​ಡೇಟ್​ವೊಂದನ್ನು ನೀಡಿದೆ.

'ಕಿಚ್ಚ 46' ಮೇಲೆ ಹೆಚ್ಚಿದ ನಿರೀಕ್ಷೆ: ಬಹು ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನಟ ಸುದೀಪ್​​ ಇಡೀ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯತೆ ಸಂಪಾದಿಸಿದ್ದಾರೆ. ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತ ಬಂದಿರುವ ಇವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಹೀಗಾಗಿ ಇವರು ಅಭಿನಯ ಚಕ್ರವರ್ತಿ ಎಂದೇ ಖ್ಯಾತನಾಮರು.

ಈ ಕಾರಣಕ್ಕಾಗಿಯೇ ಅವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲ ಕೊಂಚ ಹೆಚ್ಚೇ ಅಲ್ವೇ?. ಮುಂಬರುವ ಅವರ ಸಿನಿಮಾ ಯಾವುದು? ಯಾವ ರೀತಿಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಯಾವ ನಿರ್ಮಾಣ ಸಂಸ್ಥೆಯಡಿ ಕಿಚ್ಚನ ಸಿನಿಮಾ ನಿರ್ಮಾಣವಾಗಲಿದೆ? ನಟಿ ಯಾರಾಗಬಹುದು? ಕಥೆ ಹೇಗಿರಬಹುದು? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿರುವುದು ಸಹಜ.

ಇವುಗಳಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಕಿಚ್ಚನ 46ನೇ ಸಿನಿಮಾದ ಚಿತ್ರತಂಡ ಹೊಸ ಅಪ್​ಡೇಟ್​ ನೀಡಿದೆ. ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್​ ಮೂರು ಸಿನಿಮಾಗಳಿಗೆ ಗ್ರೇನ್​ ಸಿಗ್ನಲ್​ ನೀಡಿದ್ದಾರೆ. ಆ ಪೈಕಿ 'ದಿ ವಿ ಕ್ರಿಯೇಷನ್ಸ್​'ನ ಕಲೈಪುಲಿ ಎಸ್​.ತನು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಇದೇ ಚಿತ್ರತಂಡ ಸುದೀಪ್​ 46ನೇ ಚಿತ್ರದ ಟೀಸರ್​ ಜುಲೈ 2 ರಂದು ರಿಲೀಸ್​ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಇದನ್ನೂ ಓದಿ:ಟಾಕಿ ಕಾಲದಲ್ಲಿ ಮೂಕಿ 'ಮಹಾಗುರು': 36 ವರ್ಷಗಳ‌ ಬಳಿಕ ಕನ್ನಡದಲ್ಲಿ ಬರ್ತಿದೆ ಮೂಕಿಚಿತ್ರ

ಕಲೈಪುಲಿ ಎಸ್​. ತನು ಟ್ವೀಟ್​:ನಿರ್ಮಾಪಕ ಕಲೈಪುಲಿ ಎಸ್​. ತನು ಟ್ವೀಟ್​ ಮಾಡಿದ್ದು, "ನಿಮ್ಮ ಕ್ಯಾಲೆಂಡರ್​ನಲ್ಲಿ ದಿನಾಂಕವನ್ನು ಗುರುತಿಸಿ. #Kicchcha46 ಟೀಸರ್​ ಜುಲೈ 2 ರಂದು ನಿಮ್ಮ ಮುಂದೆ ಬರಲಿದೆ." ಎಂದು ಬರೆದಿದ್ದಾರೆ. ಇವರು ಕಿಚ್ಚ 46ರ ಅಪ್​ಡೇಟ್​ ನೀಡಲು ಒಂದು ಸಣ್ಣ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ನಿರೂಪ್​ ಭಂಡಾರಿ ಚೆಸ್​ ಆಡುತ್ತಾ ಡೇಟ್​ ಗೊತ್ತಾಯ್ತ? ಎಂದು ಕೇಳುವ ಮೂಲಕ ವಿಡಿಯೋ ಪ್ರಾರಂಭವಾಗುತ್ತೆ. ಡಾರ್ಲಿಂಗ್​ ಕೃಷ್ಣ, ನವೀನ್​ ಶಂಕರ್​, ಸಪ್ತಮಿ ಗೌಡ, ವಾಸುಕಿ ವೈಭವ್​, ಅಮೃತಾ ಅಯ್ಯಂಗಾರ್​, ಅನೂಪ್​ ಭಂಡಾರಿ, ವಿನಯ್​ ರಾಜ್​ಕುಮಾರ್​, ಡಾಲಿ ಧನಂಜಯ್​ ಎಲ್ಲಾ ನಟರು ಕೂಡ ಡೇಟ್​ ಗೊತ್ತಾಯ್ತಾ? ಅಂತಾನೇ ಪ್ರಶ್ನೆ ಮಾಡ್ತಾರೆ. ಕೊನೆಯದಾಗಿ ಕಿಚ್ಚ 46 ಟೀಸರ್​ ಜುಲೈ 2 ರಂದು ಬಿಡುಗಡೆಯಾಗಲಿದೆ ಎಂದು ತೋರಿಸುವ ಮೂಲಕ ವಿಡಿಯೋ ಕೊನೆಗೊಳ್ಳುತ್ತದೆ.

ಸುದೀಪ್​ ಕೂಡ ಇದೇ ದೃಶ್ಯವನ್ನು ಹಂಚಿಕೊಂಡು, ವಿಡಿಯೋದಲ್ಲಿ ಕಾಣಿಸಿಕೊಂಡ ಎಲ್ಲಾ ಸಹನಟರು ಮತ್ತು ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ. ಅಂತೂ ಇಂತೂ ಇಷ್ಟು ದಿನ ಸುದೀಪ್​ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳ ಮುಖದಲ್ಲಿ ಸಂತಸದ ಹೊನಲು ಹರಿದಿದೆ. ಜುಲೈ 2ರವರೆಗಿನ ಕಾಯುವಿಕೆ ಇಂದಿನಿಂದ ಶುರುವಾಗಿದೆ.

ಇದನ್ನೂ ಓದಿ:Sudeep nephew Sanchith: ಸ್ಯಾಂಡಲ್​ವುಡ್​ಗೆ 'ಜೂನಿಯರ್​ ಕಿಚ್ಚ' ಎಂಟ್ರಿ; ಸಂಚಿತ್​ ಚೊಚ್ಚಲ ಸಿನಿಮಾಗೆ ಸ್ಟಾರ್​ ನಟರ ಬೆಂಬಲ

Last Updated : Jun 27, 2023, 8:03 PM IST

ABOUT THE AUTHOR

...view details