ಕರ್ನಾಟಕ

karnataka

Project K: ಪ್ರಭಾಸ್​, ದೀಪಿಕಾ, ಬಿಗ್​ ಬಿ ಜೊತೆ ನಟಿಸಲಿರುವ ಕಮಲ್ ಹಾಸನ್

By

Published : Jun 25, 2023, 3:17 PM IST

ಬಹುಬೇಡಿಕೆಯ ನಟರನ್ನೊಳಗೊಂಡ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಕಮಲ್ ಹಾಸನ್ ಕೂಡ ನಟಿಸಲಿದ್ದಾರೆ.

Kamal Haasan joins Project K team
ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಕಮಲ್ ಹಾಸನ್

ಹಿರಿಯ ನಟ ಕಮಲ್ ಹಾಸನ್ ಅವರು ನಾಗ್ ಅಶ್ವಿನ್ ಅವರ ಬಹುಭಾಷಾ ವೈಜ್ಞಾನಿಕ ಸಿನಿಮಾ 'ಪ್ರಾಜೆಕ್ಟ್ ಕೆ' (Project K)ಗೆ ಆಯ್ಕೆಯಾಗಿದ್ದಾರೆ ಎಂದು ಚಿತ್ರ ತಯಾರಕರು ಇಂದು ಘೋಷಿಸಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಬಿಗ್​ ಬಜೆಟ್ ಚಲನಚಿತ್ರವನ್ನು ವೈಜಯಂತಿ ಮೂವಿಸ್ ಸಂಸ್ಥಾಪಕ ಸಿ ಅಶ್ವನಿ ದತ್ ನಿರ್ಮಿಸಿಸುತ್ತಿದ್ದಾರೆ. ಬಿಗ್​ ಬಿ ಅಮಿತಾಭ್​ ಬಚ್ಚನ್ ಸಹ ಪ್ರಮುಖ ಪಾತ್ರ ವಹಿಸಲಿರುವ ಈ ಸಿನಿಮಾದಲ್ಲಿ ​​ಕಮಲ್ ಹಾಸನ್ ಕೂಡ ಮುಖ್ಯ ರೋಲ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರೊಡಕ್ಷನ್ ಹೌಸ್ ವೈಜಯಂತಿ ಮೂವಿಸ್ ತನ್ನ ಅಧಿಕೃತ ಟ್ವಿಟರ್ ಪೇಜ್​ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. "ಶ್ರೇಷ್ಠ ನಟ ಕಮಲ್​ ಹಾಸನ್​​ ಅವರಿಗೆ ಸ್ವಾಗತ. ನಮ್ಮ ಪ್ರಯಾಣ ಈಗ ಯೂನಿವರ್ಸಲ್ ಆಗುತ್ತಿದೆ #ProjectK" ಎಂದು ಟ್ವೀಟ್​​ ಮಾಡಿದೆ. ಕಮಲ್ ಹಾಸನ್ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿ, ವಿಡಿಯೋವೊಂದನ್ನು ಶೇರ್ ಮಾಡಿದೆ.

ಈ ವಿಡಿಯೋ ಕಮಲ್​ ಹಾಸನ್​​ ಅವರ ಚಲನಚಿತ್ರಗಳ ಶಾಟ್‌ಗಳನ್ನು ಒಳಗೊಂಡಿದೆ. ಪ್ರೊಜೆಕ್ಟ್​​ ಕೆ ಚಿತ್ರದಿಂದ ಕಮಲ್ ಅವರ ನೋಟವನ್ನು ಚಿತ್ರ ತಯಾರಕರು ಇನ್ನೂ ಬಹಿರಂಗಪಡಿಸದಿದ್ದರೂ, ಅವರ ಪಾತ್ರ ಪ್ರಭಾವಶಾಲಿ ಆಗಿರಲಿದೆ ಎಂಬುದನ್ನು ವಿಡಿಯೋ ಸೂಚಿಸಿದೆ.

ಚಿತ್ರ ನಿರ್ಮಾಪಕರು ಹಿರಿಯ ನಟ ಕಮಲ್ ಹಾಸನ್ ಪಾತ್ರದ ಬಗ್ಗೆ ವಿವರಗಳನ್ನು ಮುಚ್ಚಿಟ್ಟಿದ್ದರೂ, ಪ್ರಭಾಸ್ ಪ್ರತಿಸ್ಪರ್ಧಿಯಾಗಿ ನಟಿಸಲು ಸೂಪರ್‌ ಸ್ಟಾರ್ ಮುಂದಾಗಿದ್ದಾರೆ ಎಂಬ ಊಹಾಪೋಹಗಳು ಹರಡಿವೆ. ನೆಗೆಟಿವ್ ಶೇಡ್ ಇರುವ ಪಾತ್ರವನ್ನು ಕಮಲ್​ ಹಾಸನ್​​ ನಿರ್ವಹಿಸಿ 15 ವರ್ಷಗಳಾದ ಕಾರಣ ಅಭಿಮಾನಿಗಳಿಗೆ ಇದು ಕುತೂಹಲಕರ ಸಂಗತಿಯಾಗಿದೆ. ನಟ ಕೊನೆಯದಾಗಿ 2008 ರಲ್ಲಿ ಬಿಡುಗಡೆಯಾದ ದಶಾವತಾರಂನಲ್ಲಿ ವಿಲನ್​​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಆಗಸ್ಟ್‌ನಲ್ಲಿ ತಮ್ಮ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:Ramya Photos: ಕೆಂಗುಲಾಬಿಗಳೊಂದಿಗೆ ಮೋಹಕತಾರೆ ರಮ್ಯಾ ನಟಿಯ ಲೇಟೆಸ್ಟ್‌ ಫೋಟೋಗಳನ್ನು ನೋಡಿ

ಕಮಲ್ ಹಾಸನ್ 'ಪ್ರಾಜೆಕ್ಟ್ ಕೆ'ಗೆ ಎಂಟ್ರಿ ಕೊಟ್ಟಿರುವ ಬಗ್ಗೆ ನಾಯಕ ನಟ ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದಾರೆ. "ಇದು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿರುವ ಕ್ಷಣ" ಎಂದು ಪ್ರಭಾಸ್​ ತಿಳಿಸಿದರು. ಕಮಲ್ ಹಾಸನ್ ಸರ್ ಜೊತೆ ನಟಿಸುತ್ತಿರುವುದು ಪದಗಳಿಗೆ ಮೀರಿದ ಗೌರವ. ಅಂತಹ ಮೇರು ನಟರೊಂದಿಗೆ ಕಲಿಯುವ ಮತ್ತು ಬೆಳೆಯುವ ಅವಕಾಶ ಸಿಕ್ಕಿತು. ನನ್ನ ಕನಸು ನನಸಾಯಿತು" ಎಂದು ತಿಳಿಸಿದ್ದಾರೆ. ಅಮಿತಾಭ್​ ಬಚ್ಚನ್​ ಸಹ ಸೋಶಿಯಲ್​ ಮೀಡಿಯಾದಲ್ಲಿ, 'ಸುಸ್ವಾಗತ ಕಮಲ್. ಮತ್ತೆ ನಿಮ್ಮೊಂದಿಗೆ ಕೆಲಸ ಮಾಡುವುದು ಅದ್ಭುತ ಕ್ಷಣ' ಎಂದು ಬರೆದಿದ್ದಾರೆ.

ಇದನ್ನೂ ಓದಿ:'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾ ಸಕ್ಸಸ್​​: ದೇವಸ್ಥಾನಗಳಿಗೆ ಭೇಟಿ ನೀಡಿದ ಪಟೌಡಿ ಕುಡಿ ಸಾರಾ ಅಲಿ ಖಾನ್

ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಅಮಿತಾಭ್​​ ಬಚ್ಚನ್ ಮತ್ತು ದಿಶಾ ಪಟಾಣಿ ಕೂಡ ನಟಿಸಿದ್ದಾರೆ. ಚಿತ್ರವು 2024 ರ ಜನವರಿ 12 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details