ETV Bharat / entertainment

'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾ ಸಕ್ಸಸ್​​: ದೇವಸ್ಥಾನಗಳಿಗೆ ಭೇಟಿ ನೀಡಿದ ಪಟೌಡಿ ಕುಡಿ ಸಾರಾ ಅಲಿ ಖಾನ್

author img

By

Published : Jun 25, 2023, 1:26 PM IST

ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಹಿಟ್ ಆದ ಹಿನ್ನೆಲೆಯಲ್ಲಿ ನಾಯಕ ನಟಿ ಸಾರಾ ಅಲಿ ಖಾನ್ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

Sara Ali Khan visits temples
ದೇವಸ್ಥಾನಗಳಿಗೆ ಸಾರಾ ಅಲಿ ಖಾನ್ ಭೇಟಿ

ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ಯಶಸ್ಸು ಕಂಡ ಹಿನ್ನೆಲೆಯಲ್ಲಿ ನಟ ಸೈಫ್​ ಅಲಿ ಖಾನ್​ ಪುತ್ರಿ, ಬಾಲಿವುಡ್​ ಬೆಡಗಿ ಸಾರಾ ಅಲಿ ಖಾನ್ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಹ ಟೆಂಪಲ್​ ರನ್​ ನಡೆಸಿದ್ದರು. ಇದೀಗ ಉಜ್ಜಯಿನಿಯ ಕಾಲಭೈರವ ಮತ್ತು ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನ, ಖಜ್​​​ರಾನ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದರು.

ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಜೂನ್​ 2ರಂದು ತೆರೆಕಂಡಿದೆ. ವಿಕ್ಕಿ ಕೌಶಲ್ ಜೊತೆ ಸ್ಕ್ರೀನ್​ ಶೇರ್ ಮಾಡಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಸುಮಾರು 40 ಕೋಟಿ ಬಜೆಟ್​ನ ಈ ಸಿನಿಮಾ 75 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ಇಂದೋರ್​ನಲ್ಲೇ ಸಿನಿಮಾ ಶೂಟ್ ಆದ ಹಿನ್ನೆಲೆಯಲ್ಲಿ ನಟಿ ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಮೊದಲು ಪ್ರಸಿದ್ಧ ಖಜ್​​​ರಾನ ಗಣೇಶ ದೇವಸ್ಥಾನಕ್ಕೆ ತೆರಳಿದ ಸಾರಾ ಅಲಿ ಖಾನ್​​ ನಂತರ ಉಜ್ಜಯಿನಿಯ ಕಾಲ ಭೈರವ ಮತ್ತು ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಗಳಿಗೆ ಭೇಟಿ ನೀಡಿದರು.

Sara Ali Khan visits temples
ದೇವಸ್ಥಾನಗಳಿಗೆ ಸಾರಾ ಅಲಿ ಖಾನ್ ಭೇಟಿ

ಗುಲಾಬಿ-ಕೆಂಪು ಸೀರೆಯನ್ನು ಧರಿಸಿ ಉಜ್ಜಯಿನಿಯ ಕಾಲ ಭೈರವ ಮತ್ತು ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯಗಳಿಗೆ ತೆರಳಿದರು. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಭಕ್ತರೊಂದಿಗೆ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಮತ್ತೊಂದು ಚಿತ್ರದಲ್ಲಿ ದೇವಸ್ಥಾನದ ಬಳಿ ನಟಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಫೋಟೋವನ್ನು ಹಂಚಿಕೊಂಡ ಅವರು ಶಾಂತಿಯುತ ದಿನ ಎಂದು ಬರೆದುಕೊಂಡಿದ್ದಾರೆ. ಇಂದೋರ್‌ನ ಪ್ರಸಿದ್ಧ ಖಜರಾನ ಗಣೇಶ ದೇವಸ್ಥಾನಕ್ಕೂ ತೆರಳಿದ್ದರು. ಈ ಸಂದರ್ಭದಲ್ಲಿ ನಟಿ ಬೇಬಿ ಪಿಂಕ್ ಸೂಟ್ ಧರಿಸಿದ್ದರು. ಈ ಫೋಟೋಗಳನ್ನು ಸಹ ನಟಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ದೇವಸ್ಥಾನದಿಂದ ತಮ್ಮ ಸರಣಿ ಫೋಟೋಗಳನ್ನು ಹಂಚಿಕೊಂಡು, "ಸೌಮ್ಯಾ ಇಂದೋರ್‌ಗೆ ಹಿಂದಿರುಗಿದ್ದಾರೆ, ಕೃತಜ್ಞತಾ ಭಾವ" ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಮಧ್ಯಪ್ರದೇಶದ ರಾಜಧಾನಿಯಲ್ಲಿ ಚಿತ್ರೀಕರಿಸಲಾದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾದಲ್ಲಿ ಸಾರಾ ಪಾತ್ರದ ಹೆಸರು ಸೌಮ್ಯಾ. ಜೂನ್ 2ರಂದು ತೆರೆಕಂಡ ಈ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಜರಾ ಹಟ್ಕೆ ಜರಾ ಬಚ್ಕೆ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 75 ಕೋಟಿ ರೂ. ಸಂಪಾದಿಸುವಲ್ಲಿ ಯಶಸ್ವಿ ಆಗಿದೆ.

Sara Ali Khan visits temples
ದೇವಸ್ಥಾನಗಳಿಗೆ ಸಾರಾ ಅಲಿ ಖಾನ್ ಭೇಟಿ

ಇದನ್ನೂ ಓದಿ: Adipurush: ವೀಕೆಂಡ್​ನಲ್ಲೂ ಸದ್ದು ಮಾಡದ 'ಆದಿಪುರುಷ್​​': ಶನಿವಾರ ಗಳಿಸಿದ್ದು ಕೇವಲ 5 ಕೋಟಿ ರೂ.!

ನಟಿ ಸಾರಾ ಅಲಿ ಖಾನ್ ದೇವಸ್ಥಾನಗಳಿಗೆ ಭೇಟಿ ಕೊಡುವುದು ಹೊಸ ವಿಚಾರವೇನಲ್ಲ. ಖಾನ್​ ಕುಟುಂಬದವರಾದ ಹಿನ್ನೆಲೆ ದೇವಸ್ಥಾನಗಳಿಗೆ ಹೋಗುವ ವಿಚಾರಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಈ ಹಿಂದೆ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಅವರು, ನೆಗೆಟಿವ್​ ಕಾಮೆಂಟ್‌ಗಳು ನನ್ನ ನಂಬಿಕೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ: Ramya Photos: ಕೆಂಗುಲಾಬಿಗಳೊಂದಿಗೆ ಮೋಹಕತಾರೆ ರಮ್ಯಾ- ನಟಿಯ ಲೇಟೆಸ್ಟ್‌ ಫೋಟೋಗಳನ್ನು ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.