ಕರ್ನಾಟಕ

karnataka

ಕೃಷ್ಣನಂತೆ ಶೃಂಗಾರಗೊಂಡ ಭಾರತಿ ಸಿಂಗ್ ಪುತ್ರ ಲಕ್ಷ್.. ಮಗುವಿನ ಮುದ್ದಾದ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ

By

Published : Aug 19, 2022, 12:09 PM IST

ಬಾಲಿವುಡ್ ಹಾಸ್ಯನಟಿ ಭಾರತಿ ಸಿಂಗ್ ಗುರುವಾರದಂದು ಇನ್​ಸ್ಟಾಗ್ರಾಮ್​ನಲ್ಲಿ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಗನಿಗೆ ಕೃಷ್ಣನಂತೆ ತಲೆಯಲ್ಲಿ ನವಿಲುಗರಿ ಇಟ್ಟಿದ್ದಾರೆ. ಜೊತೆಗೆ 'ಎಲ್ಲದ್ದಕ್ಕೂ ಧನ್ಯವಾದ ದೇವರೇ, ಶುಭ ಕೃಷ್ಣ ಜನ್ಮಾಷ್ಟಮಿ' ಎಂದು ಬರೆದಿದ್ದಾರೆ.

Bollywood Comedian  Bharti Singh dresses up son Laksh as Krishna
ಕೃಷ್ಣನಂತೆ ಶೃಂಗಾರಗೊಂಡ ಭಾರತಿ ಸಿಂಗ್ ಪುತ್ರ ಲಕ್ಷ್

ದೇಶದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಹಬ್ಬ ಆಚರಣೆಯ ಸಂಭ್ರಮ ಮನೆ ಮಾಡಿದೆ. ಮನೆ, ಮಂದಿರಗಳಲ್ಲಿ ಕೃಷ್ಣನಿಗೆ ವಿಷೇಶ ಪೂಜೆ ಸಲ್ಲಿಸಲಾಗುತ್ತಿದೆ. ಮನೆಗಳಲ್ಲಿ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಫೋಟೋ ಶೂಟ್ ಮಾಡಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅದರಂತೆ ಬಾಲಿವುಡ್ ಹಾಸ್ಯನಟಿ ಭಾರತಿ ಸಿಂಗ್ ಪುತ್ರ ಲಕ್ಷ್ ಗೆ ಕೃಷ್ಣನ ವೇಷ ಹಾಕಿಸಿದ್ದಾರೆ.

ಭಾರತಿ ಸಿಂಗ್ ಗುರುವಾರದಂದು ಇನ್​ಸ್ಟಾಗ್ರಾಮ್​ನಲ್ಲಿ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಗನಿಗೆ ಕೃಷ್ಣನಂತೆ ತಲೆಯಲ್ಲಿ ನವಿಲುಗರಿ ಇಟ್ಟಿದ್ದಾರೆ. ಜೊತೆಗೆ 'ಎಲ್ಲದ್ದಕ್ಕೂ ಧನ್ಯವಾದ ದೇವರೇ, ಶುಭ ಕೃಷ್ಣ ಜನ್ಮಾಷ್ಟಮಿ' ಎಂದು ಬರೆದಿದ್ದಾರೆ. ವಿಡಿಯೋದಲ್ಲಿ, ಭಾರತಿ ಸಿಂಗ್ ಪತಿ ಹರ್ಷ್​ ಲಿಂಬಾಚಿಯಾ ಅವರೊಂದಿಗೆ ಮಗು ಲಕ್ಷ್ ಆಟವಾಡುತ್ತಿರುವುದನ್ನು ಗಮನಿಸಬಹುದು. ನವಿಲುಗರಿ ಧರಿಸಿರುವ ಲಕ್ಷ್ ತುಂಬಾನೆ ಮುದ್ದಾಗಿ ಕಾಣುತ್ತಿದ್ದಾನೆ.

ಬಾಲಿವುಡ್​ ಚಿತ್ರರಂಗದ ಭಾರತಿ ಸಿಂಗ್ ಹರ್ಷ್​ ಲಿಂಬಾಚಿಯಾ ದಂಪತಿ ಏಪ್ರಿಲ್ 3ರಂದು ಲಕ್ಷ್ ಅವರನ್ನು ಸ್ವಾಗತಿಸಿದ್ದಾರೆ. ಜುಲೈನಲ್ಲಿ ಮಗುವಿನ ಫೋಟೋ ಶೇರ್ ಮಾಡಿದ್ದ ದಂಪತಿ ಈಗ ಮತ್ತೊಮ್ಮೆ ಮುದ್ದಾದ ಮಗುವಿನ ವಿಡಿಯೋ ಶೇರ್ ಮಾಡಿ ಅಭಿಮಾನಿಗಳ ಮೊಗದಲ್ಲಿ ಸಂತಸ ತರಿಸಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನ..ಅಮಿತಾಭ್ ಬಚ್ಚನ್ ಭೇಟಿಯಾದ ನಿತಿನ್ ಗಡ್ಕರಿ

ABOUT THE AUTHOR

...view details