ಕರ್ನಾಟಕ

karnataka

ಡಾರ್ಕ್​ ಕಾಮಿಡಿ 'ಡಾರ್ಲಿಂಗ್ಸ್​' ನಲ್ಲಿ ಆಲಿಯಾ ಮಿಂಚಿಂಗ್​.. ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

By

Published : Jul 5, 2022, 3:55 PM IST

ಡಾರ್ಲಿಂಗ್ಸ್ ಸಿನಿಮಾದಲ್ಲಿ ಆಲಿಯಾ
ಡಾರ್ಲಿಂಗ್ಸ್ ಸಿನಿಮಾದಲ್ಲಿ ಆಲಿಯಾ ()

ಆಲಿಯಾ ಭಟ್ ಮಂಗಳವಾರ ತಮ್ಮ ಚೊಚ್ಚಲ ನಿರ್ಮಾಣದ ಸಿನಿಮಾ ಡಾರ್ಲಿಂಗ್ಸ್‌ನ ಟೀಸರ್ ಅನ್ನು ಹಂಚಿಕೊಂಡಿದ್ದಾರೆ.

ಮುಂಬೈ (ಮಹಾರಾಷ್ಟ್ರ): ನಟಿ ಆಲಿಯಾ ಭಟ್ ಅವರು ಇದೇ ಮೊದಲ ಬಾರಿಗೆ ನಿರ್ಮಿಸಿರುವ ಸಿನಿಮಾ 'ಡಾರ್ಲಿಂಗ್ಸ್' ಇದೇ ಆಗಸ್ಟ್ 5 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ಸ್ಟ್ರೀಮರ್ ಮಂಗಳವಾರ ಪ್ರಕಟಿಸಿದೆ.

ಮುಂಬೈ-ಸೆಟ್ ಡಾರ್ಕ್ ಕಾಮಿಡಿ(ವಿಡಂಬನಾತ್ಮಕ ಹಾಸ್ಯ)ದಲ್ಲಿ ಭಟ್ ಅವರು ನಟರಾದ ಶೆಫಾಲಿ ಶಾ, ವಿಜಯ್ ವರ್ಮಾ ಮತ್ತು ರೋಷನ್ ಮ್ಯಾಥ್ಯೂ ಅವರೊಂದಿಗೆ ನಟಿಸಿದ್ದಾರೆ. ಭಟ್ ಅವರು ತಮ್ಮ ಬ್ಯಾನರ್ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಮೂಲಕ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್​ ಸಹಯೋಗದೊಂದಿಗೆ ಚಿತ್ರವನ್ನು ನಿರ್ಮಿಸಿದ್ದಾರೆ.

ಎಲ್ಲಾ ವಿಲಕ್ಷಣಗಳ ವಿರುದ್ಧ ಹೋರಾಡುವಾಗ ಅಸಾಧಾರಣ ಸಂದರ್ಭಗಳಲ್ಲಿ ಧೈರ್ಯ ಮತ್ತು ಪ್ರೀತಿಯನ್ನು ಹುಡುಕುವ, ನಗರದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ತಾಯಿ-ಮಗಳ ಜೀವನವನ್ನು ಚಲನಚಿತ್ರವು ಬಿಂಬಿಸುತ್ತದೆ.

ಫೆಬ್ರವರಿಯಲ್ಲಿ ತೆರೆಕಂಡ ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿವಾಡಿ ಚಿತ್ರದ ನಂತರ ಬಿಡುಗಡೆಯಾದ ಆಲಿಯಾ ಭಟ್ ಅವರ ಎರಡನೇ ಚಿತ್ರವಾಗಿದೆ. ಡಾರ್ಲಿಂಗ್ಸ್ ಚಿತ್ರ ವಿಶಾಲ್ ಭಾರದ್ವಾಜ್ ಅವರ ಸಂಗೀತ ಮತ್ತು ಹಿರಿಯ ಬರಹಗಾರ ಗುಲ್ಜಾರ್ ಅವರ ಸಾಹಿತ್ಯವನ್ನು ಒಳಗೊಂಡಿದೆ.

ಓದಿ: ಅಭಿಮಾನಿಗಳಿಗೆ ಉಡುಗೊರೆ ನೀಡಿ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಬಡ್ಡೀಸ್ ಹೀರೋ

ABOUT THE AUTHOR

...view details