ಕರ್ನಾಟಕ

karnataka

ಹುಟ್ಟುಹಬ್ಬಕ್ಕೆ ವಿಷ್ ಮಾಡಿ ಅವಳಿ ಮಕ್ಕಳ ಪೋಟೋ ಶೇರ್ ಮಾಡಿದ ನಟಿ ಪ್ರೀತಿ ಜಿಂಟಾ

By

Published : Nov 11, 2022, 4:21 PM IST

ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ಅವಳಿ ಮಕ್ಕಳ ಹುಟ್ಟುಹಬ್ಬಕ್ಕೆ ವಿಷ್ ಮಾಡಿ ಇನ್​ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ.

Actress Preity Zinta shared a photo of her twins
ಅವಳಿ ಮಕ್ಕಳ ಪೋಟೋ ಶೇರ್ ಮಾಡಿದ ನಟಿ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ಅವಳಿ ಮಕ್ಕಳ ಹುಟ್ಟುಹಬ್ಬಕ್ಕೆ ವಿಷ್ ಮಾಡಿ, ಇನ್​ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ. ಕಳೆದ ವರ್ಷ ಪತಿ ಜೀನ್ ಗುಡೆನಾಫ್ ಜೊತೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿದ್ದರು. ಇದೀಗ ತಮ್ಮ ಮುದ್ದಾದ ಎರಡು ಮಕ್ಕಳ ಪೋಟೋವನ್ನು ಶೇರ್ ಮಾಡಿದ್ದಾರೆ.

"ನಾನು ಜೀವನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೆ ತಾಯಿ ಪಾತ್ರ ಅದೆಲ್ಲದಕ್ಕಿಂತಲೂ ಹೆಚ್ಚು. ನಿಮ್ಮಿಬ್ಬರ ಉಪಸ್ಥಿತಿಯಿಂದಾಗಿ ನಾನು ಕೃತಜ್ಞಳಾಗಿದ್ದೇನೆ. ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ ಮತ್ತು ಹಾರೈಸುತ್ತೇನೆ. ನನ್ನ ಪ್ರೀತಿಯ ಜೈ ಮತ್ತು ಗಿಯಾಗೆ ಹುಟ್ಟುಹಬ್ಬದ ಶುಭಾಶಯಗಳು. ನಾನು ನಿಮ್ಮನ್ನೂ ಎಂದಿಗೂ ಪ್ರೀತಿಸುತ್ತೇನೆ." ಎಂದು ಪೋಸ್ಟ್ ಕ್ಯಾಪ್ಶನ್ ಹಾಕಿಕೊಂಡಿದ್ದಾರೆ.

ಪ್ರೀತಿ ಜಿಂಟಾ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದು, ಪುಟಾಣಿಗಳಿಗೆ ವಿಷ್ ಮಾಡಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್​​​ ಮದುವೆ ಮಾಡಿಸಲಿರುವ ನಿರ್ದೇಶಕ ಸೂರಜ್ ಬರ್ಜತ್ಯ

ABOUT THE AUTHOR

...view details