ETV Bharat / entertainment

ಸಲ್ಮಾನ್ ಖಾನ್​​​ ಮದುವೆ ಮಾಡಿಸಲಿರುವ ನಿರ್ದೇಶಕ ಸೂರಜ್ ಬರ್ಜತ್ಯ

author img

By

Published : Nov 11, 2022, 2:50 PM IST

ಸೂರಜ್ ಬರ್ಜಾತ್ಯಾ ನಿರ್ದೇಶನದ ಉಂಚೈ ಚಿತ್ರದ ಮೊದಲ ಪ್ರದರ್ಶನ ಮುಂಬೈನಲ್ಲಿ ನಡೆದಿದ್ದು, ಸಲ್ಮಾನ್ ಖಾನ್ ಭಾಗಿಯಾಗಿದ್ದರು. ಈ ವೇಳೆ ಸಲ್ಮಾನ್, ಸೂರಜ್ ತೆರೆಯ ಮೇಲೆ ಪ್ರೇಮ್​ಗೆ ಮದುವೆ ಮಾಡಿಸಲಿದ್ದಾರೆ ಎಂದು ತಮಾಷೆಯಾಗಿ ಹೇಳಿದರು

Salman Khan
ಸಲ್ಮಾನ್ ಖಾನ್

ಸೂರಜ್ ಬರ್ಜತ್ಯ ನಿರ್ದೇಶನದ ಉಂಚೈ ಚಿತ್ರದ ಮೊದಲ ಪ್ರದರ್ಶನ ಮುಂಬೈನಲ್ಲಿ ನಡೆಯಿತು. ಸೂರಜ್ ಆಪ್ತ ಗೆಳೆಯ ಸಲ್ಮಾನ್ ಖಾನ್ ಈ ಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

ಮೈನೆ ಪ್ಯಾರ್ ಕಿಯಾ ಮತ್ತು ಹಮ್ ಸಾಥ್ ಸಾಥ್ ಹೇ ಮುಂತಾದ ಚಿತ್ರಗಳಲ್ಲಿ ಸಲ್ಮಾನ್ ಮತ್ತು ಸೂರಜ್ ಜೊತೆಯಾಗಿ ಕೆಲಸ ಮಾಡಿದ್ದಾರೆ. ಸಲ್ಮಾನ್ ನಿರ್ವಹಿಸಿದ ಅಪ್ರತಿಮ ಪಾತ್ರ ಪ್ರೇಮ್ ಮರಳುವಿಕೆಯನ್ನು ಮುಂದಿನ ಸಿನಿಮಾಕ್ಕೆ ಖಚಿತಪಡಿಸಿದರು.

ಈ ವೇಳೆ ಸಲ್ಮಾನ್, ಪ್ರೇಮ್ ಮರಳಿ ಬರುತ್ತಾನೆ. ಜೊತೆಗೆ ಸೂರಜ್ ತೆರೆಯ ಮೇಲೆ ಪ್ರೇಮ್​ಗೆ ಮದುವೆ ಮಾಡಿಸಲಿದ್ದಾರೆ ಎಂದು ತಮಾಷೆಯಾಗಿ ಹೇಳಿದರು. ಜೊತೆಗೆ ಸೂರಜ್ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಬಾಕ್ಸರ್ ನಿಖಾತ್ ರೊಮ್ಯಾಂಟಿಕ್ ಡ್ಯಾನ್ಸ್ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.