ಕರ್ನಾಟಕ

karnataka

ತೆಲಂಗಾಣದಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಪತಿಗೆ ಸರ್​ಪ್ರೈಸ್​ ನೀಡಿದ ಹರಿಪ್ರಿಯಾ

By

Published : Mar 27, 2023, 1:47 PM IST

ತೆಲಂಗಾಣದಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ವಸಿಷ್ಠ ಸಿಂಹನಿಗೆ ಹರಿಪ್ರಿಯಾ ಸೆಟ್​ಗೆ ವಿಸಿಟ್ ಮಾಡುವ ಮೂಲಕ ಸರ್​ಪ್ರೈಸ್ ​ಕೊಟ್ಟಿದ್ದಾರೆ.​

suprise
ಪತಿಗೆ ಸರ್​ಪ್ರೈಸ್​ ನೀಡಿದ ಹರಿಪ್ರಿಯಾ

ಸ್ಯಾಂಡಲ್​ವುಡ್​ ತಾರಾಜೋಡಿ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಜನವರಿ 26 ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾಗಿ ಎರಡು ತಿಂಗಳ ಬಳಿಕ ಹೊಸ ಫೋಟೋವೊಂದನ್ನು ದಂಪತಿ ಶೇರ್​ ಮಾಡಿಕೊಂಡಿದ್ದಾರೆ. ಸಿನಿಮಾ ವಿಚಾರವಾಗಿ ಬ್ಯುಸಿಯಾಗಿರುವ ವಸಿಷ್ಠ ಸಿಂಹ ಶೂಟಿಂಗ್​ಗಾಗಿ ತೆಲಂಗಾಣಕ್ಕೆ ತೆರಳಿದ್ದಾರೆ. ಅಲ್ಲಿಗೆ ಪತ್ನಿ ಹರಿಪ್ರಿಯಾ ಸರ್​ಪ್ರೈಸ್​ ವಿಸಿಟ್​ ಕೊಟ್ಟಿದ್ದಾರೆ. ಜೊತೆಗೆ ವಸಿಷ್ಠ ಮತ್ತು ಅವರ ಸಿಬ್ಬಂದಿಗೆ ವಿಶೇಷ ಅಡುಗೆ ತಯಾರಿಸಿ ಉಣಬಡಿಸಿದ್ದಾರೆ. ಈ ಬಗ್ಗೆ ನಟ ಫೋಟೋಗಳನ್ನು ಶೇರ್​ ಮಾಡಿ, ಸಂತಸ ಹಂಚಿಕೊಂಡು ಪತ್ನಿಗೆ ಧನ್ಯವಾದ ಅರ್ಪಿಸಿದ್ದಾರೆ.

"ಎರಡು ತಿಂಗಳುಗಳು ಕಳೆದವು. ನಿಜ, ಸಮಯ ಬೇಗನೆ ಸಾಗುತ್ತಿದೆ. ಅದು ನಮಗೆ ತಿಳಿಯುತ್ತಿಲ್ಲವಷ್ಟೇ. ನಮ್ಮ ಮದುವೆಯ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಮತ್ತು ಮದುವೆಯ ನಂತರದ ನಮ್ಮ ಜೀವನವು ಉತ್ತಮ ಪ್ರಯಾಣವಾಗಿದೆ. ಇದು ನನಗೆ ಸಂತೋಷವನ್ನು ತಂದುಕೊಟ್ಟ ಕ್ಷಣವಾದ ಕಾರಣ ಈ ಫೋಟೋಗಳನ್ನು ಪೋಸ್ಟ್​ ಮಾಡಿದೆ. ನಾನು ತೆಲಂಗಾಣದಲ್ಲಿ ಶೂಟಿಂಗ್​ ಮಾಡುತ್ತಿದ್ದಾಗ ನೀವು ಸೆಟ್​ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ನನಗೆ ಮತ್ತು ನನ್ನ ಸಿಬ್ಬಂದಿಗೆ ಅಡುಗೆ ಮಾಡಿಕೊಟ್ಟಿರಿ. ಮನೆಯಿಂದ ತುಂಬಾ ದಿನ ದೂರವಿದ್ದ ಕಾರಣ ಮನೆಯ ಫುಡ್​ಗಾಗಿ ಹಂಬಲಿಸುತ್ತಿದ್ದೆ. ಅಷ್ಟೇ ಅಲ್ಲ, ನಿಮ್ಮನ್ನು ನೋಡಲು ಕೂಡ ಕಾಯುತ್ತಿದ್ದೆ. ಆದರೆ ಈ ಮೂಲಕ ನೀವು ಮನೆಯನ್ನೇ ಇಲ್ಲಿಗೆ ತಂದಂಗಾಯ್ತು" ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹರಿಪ್ರಿಯಾ 'ಮಿಸ್​ ಯು' ಎಂದು ಬರೆದು ಹಾರ್ಟ್​ ಎಮೋಜಿ ಕಳುಹಿಸಿದ್ದಾರೆ. ಇದಕ್ಕೆ ವಸಿಷ್ಠ ಸಿಂಹ, 'ಮಿಸ್​ ಯು ಟೂ ಲವ್'​ ಎಂದು ರಿಪ್ಲೈ ಮಾಡಿದ್ದಾರೆ. ಜೊತೆಗೆ ಸಿಂಹಪ್ರಿಯಾ ಅಭಿಮಾನಿಗಳು, 'ಜೋಡಿ ಸದಾ ರಾಮ ಸೀತೆಯ ಹಾಗೆ ಚೆಂದ ಚೆಂದ, ಯಾವಾಗಲೂ ಹೀಗೆಯೇ ಜೊತೆಯಾಗಿರಿ' ಎಂದೆಲ್ಲಾ ಬಗೆ ಬಗೆಯ ಕಮೆಂಟ್​ಗಳನ್ನು​ ಮಾಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ ಲೈಫ್​ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್​ ಶೆಟ್ಟಿ ಅತ್ಯುತ್ತಮ ನಟ

ಹರಿಪ್ರಿಯಾ ಯೂಟ್ಯೂಬ್​ ಚಾನೆಲ್​: ಹರಿಪ್ರಿಯಾ ಒಂದು ವಾರದ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಬಿಗ್​ ಅಪ್​ಡೇಟ್​ ನೀಡಿದ್ದರು. ಹೆಸರೇನು ಮೇಡಮ್​, ಯಾವಾಗ ಅನೌನ್ಸ್​ ಮಾಡ್ತೀರಾ?, ನಿಜಾನಾ, ಗುಡ್​ ನ್ಯೂಸ್​ ಎಂಬ ಮೆಸೇಜ್​ಗಳಿರುವ ಸ್ಕ್ರೀನ್​ ಶಾಟ್​ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದರು. ಜೊತೆಗೆ, "ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಅನೌನ್ಸ್​ ಮಾಡುವ ಮುನ್ನ ನೀವು ಊಹೆ ಮಾಡಿ" ಎಂದು ಕ್ಯಾಪ್ಶನ್​ ಹಾಕಿಕೊಂಡಿದ್ದರು.

ಆದರೆ ಇದಕ್ಕೆ ನೆಟ್ಟಿಗರು, ಪ್ರಶ್ನೆಗಳ ಸುರಿಮಳೆಗೈದಿದ್ದರು. "ನೀವು ಪ್ರೆಗ್ನೆಂಟಾ?, ಮರಿ ಸಿಂಹ ಅಥವಾ ಸಿಂಹಿಣಿ ಬರುತ್ತಿದ್ದಾರಾ?, ನಿಮ್ಮ ಮುಂದಿನ ಸಿನಿಮಾ ಬಗ್ಗೆ ಗುಡ್​ ನ್ಯೂಸ್​ ಹೇಳ್ತಿದ್ದೀರಾ?" ಎಂದೆಲ್ಲಾ ಬಗೆಬಗೆಯ ಕಮೆಂಟ್​ಗಳನ್ನು ಮಾಡಿದ್ದರು. ಆದರೆ ಇದೆಲ್ಲಾ ಊಹೆಗಳು ತಪ್ಪು ಎನ್ನುವಂತೆ ಹರಿಪ್ರಿಯಾ ಗುಟ್ಟು​ ರಿವೀಲ್​ ಮಾಡಿ, ಹೊಸ ಯೂಟ್ಯೂಬ್ ಚಾನೆಲ್‌​ ಪ್ರಾರಂಭಿಸುತ್ತಿರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ:ಸುಂದರ ಫೋಟೋ ಹಂಚಿಕೊಂಡ ಶಾರುಖ್ ಪತ್ನಿ: 'ಪರ್ಫೆಕ್ಟ್ ಫ್ಯಾಮಿಲಿ' ಎಂದ ಫ್ಯಾನ್ಸ್

ABOUT THE AUTHOR

...view details