ಕರ್ನಾಟಕ

karnataka

ಎಲ್ರೂ ಚೆನ್ನಾಗಿರೋಣ ಎಂಬುದೇ ನನ್ನ ಆಸೆ: ಫ್ಯಾನ್ಸ್ ವಾರ್​ಗೆ ಶಿವ ರಾಜ್​ಕುಮಾರ್ ಪ್ರತಿಕ್ರಿಯೆ

By

Published : Jan 5, 2023, 4:34 PM IST

ವೇದ ಸಿನಿಮಾ ಯಶಸ್ವಿ - ಮುಂದುವರಿದ ವೇದ ಪ್ರಚಾರ ಕಾರ್ಯ - ದಾವಣಗೆರೆಯಲ್ಲಿಂದು ವೇದ ಪ್ರಮೋಷನ್ ಜೋರು.

Actor Shiva rajkumar
ನಟ ಶಿವ ರಾಜ್​ಕುಮಾರ್

ವೇದ ಪ್ರಚಾರ ವೇಳೆ ಶಿವಣ್ಣ, ಗೀತಾ ಅವರು ಮಾತನಾಡಿರುವುದು.

ದಾವಣಗೆರೆ: ಕಳೆದ ಶುಕ್ರವಾರ ತೆರೆ ಕಂಡಿರುವ ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್ ಅವರ ವೇದ ಸಿನಿಮಾ ಸನಿ ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​ ಅವರ 125ನೇ ಚಿತ್ರ ಥಿಯೇಟರ್​ಗಳಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದ ತಂಡ ಸಿನಿಮಾ ಪ್ರಚಾರ ಕಾರ್ಯ ಮುಂದುವರಿಸಿದೆ. ದಾವಣಗೆರೆಯಲ್ಲಿ ಶಿವಣ್ಣ ಆ್ಯಂಡ್​ ಟೀಮ್​​ ತಮ್ಮ ವೇದ ಸಿನಿಮಾವನ್ನು ಅದ್ಧೂರಿಯಾಗಿ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ಫ್ಯಾನ್ಸ್ ವಾರ್ ಕುರಿತು ಶಿವಣ್ಣ ತಮ್ಮದೇ ಆದ ರೀತಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.

ಫ್ಯಾನ್ಸ್ ವಾರ್​ಗೆ ಶಿವ ರಾಜ್​ಕುಮಾರ್ ರಿಯಾಕ್ಷನ್: ಎಲ್ರೂ ಚೆನ್ನಾಗಿರೋಣ ಎಂಬುದೇ ನನ್ನ ಆಸೆ. ನಾನು ಯಾರ ಬಗ್ಗೆಯೂ ಮಾತನಾಡಿದವನಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ತಿರುವ ಫ್ಯಾನ್ಸ್ ವಾರ್ ಕುರಿತು ದೊಡ್ಮನೆಯ ನಟ ಶಿವ ರಾಜ್​ಕುಮಾರ್ ಬೇಸರ ವ್ಯಕ್ತಪಡಿಸಿದರು. ಈಗಾಗಲೇ ನಾನು ಅಭಿಮಾನಿಗಳು ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ಟಾಕ್ ವಾರ್ ನಡೆಸುತ್ತಿರುವುದರ ಬಗ್ಗೆ ಸಾಕಷ್ಟು ಬಾರಿ ಪ್ರತಿಕ್ರಿಯೆ ನೀಡಿದ್ದೇನೆ. ಫ್ಯಾನ್ಸ್ ವಾರ್ ಬೇಡ ಅಂತ‌ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇನೆ. ಎಲ್ಲರೂ ಚೆನ್ನಾಗಿರೋಣ ಎಂಬುದೇ‌ ನನ್ನ ಆಸೆ. ನಾನು ಅವರ ಬಗ್ಗೆ ಇವರ ಬಗ್ಗೆ ಅಂತಾ ಮಾತನಾಡಲ್ಲ. ಯಾರ ವಿರುದ್ಧವೂ ಮಾತನಾಡಿಲ್ಲ, ಅದು ನನ್ನ ಸ್ವಭಾವ, ಎಲ್ಲರ ಬಗ್ಗೆಯೂ ಪ್ರೀತಿ ಇದೆ. ನನ್ನ ಹೃದಯ ತೆರದು ನೋಡಿದ್ರೆ ಕೇವಲ ಪ್ರೀತಿಯೇ ಸಿಗುತ್ತೆ ಎಂದು ಭಾವುಕರಾಗಿ ನುಡಿದರು.

ಮಹಿಳಾ ಪ್ರಧಾನ ಚಿತ್ರ ವೇದ:ವೇದ ಸಿನಿಮಾ ಪ್ರಮೋಷನ್‌ಗಾಗಿ ಮಡದಿ, ನಿರ್ಮಾಪಕಿ ಗೀತಾ ಶಿವ ರಾಜ್​ಕುಮಾರ್ ಅವರ ಜೊತೆ ಆಗಮಿಸಿದ ನಟ ಶಿವ ರಾಜ್​ಕುಮಾರ್ ಬೆಣ್ಣೆ ನಗರಿ ದಾವಣಗೆರೆ ನಗರದ ನಿಟ್ಟುವಳ್ಳಿ ಬಳಿ ಇರುವ ದುರ್ಗಾಂಭಿಕ ದೇವಿ ದೇವಾಲಯಕ್ಕೆ‌ ಭೇಟಿ ನೀಡಿ ಬಳಿಕ ಮೆರವಣಿಗೆಯಲ್ಲಿ ಪಾಲ್ಗೊಂಡರು. ಶಿವಣ್ಣನನ್ನು ನೋಡಲು ಅವರ ಅಭಿಮಾನಿಗಳು ತಂಡೋಪ ತಂಡವಾಗಿ ಬಂದು ಸೇರಿದ್ದರು.‌ ಬಳಿಕ ವೇದ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ನಟ ಶಿವ ರಾಜ್​ಕುಮಾರ್, ವೇದ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಯುವಕರು ಸ್ವೀಕರಿಸಿರುವುದು ಹೆಮ್ಮೆ ಪಡುವ ವಿಷಯ. ಇದು ಕುಟುಂಬ ಸಮೇತ ನೋಡುವ ಸಿನಿಮಾ ಎಂದರು. ಇನ್ನೂ ಎರಡು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ನಾನು ಅಪ್ಪು ಒಂದು ಸಿನಿಮಾ‌ ಮಾಡಬೇಕು ಅಂದುಕೊಂಡಿದ್ದೆವು. ಅದ್ರೆ ಅದು ಸಾಧ್ಯವಾಗಲಿಲ್ಲ ಎಂದು ಇದೇ ವೇಳೆ ಶಿವಣ್ಣ ತಿಳಿಸಿದರು.

ಇದನ್ನೂ ಓದಿ:ಶಿವಣ್ಣನ ನೋಡಲು ಬಳ್ಳಾರಿಯಲ್ಲಿ ಜನಜಾತ್ರೆ- ವಿಡಿಯೋ

ಗೀತಾ ಪ್ರೋಡಕ್ಷನ್ಸ್​ ಮೊದಲ ಸಿನಿಮಾ:ಗೀತಾ ಪ್ರೋಡಕ್ಷನ್ ಅಡಿಯ ಮೊದಲ ಚಿತ್ರವಾಗಿ 'ವೇದ'ವನ್ನು ನಿರ್ಮಾಣ ಮಾಡಿದ್ದು ಬಹಳ ಸಂತೋಷ ಕೊಟ್ಟಿದೆ ಎಂದು ನಟ ಶಿವ ರಾಜ್​ಕುಮಾರ್ ಅವರ ಪತ್ನಿ, ಈ ಚಿತ್ರದ ನಿರ್ಮಾಪಕಿ ಗೀತಾ ಶಿವ ರಾಜ್​ಕುಮಾರ್ ಇದೇ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಇನ್ನು, ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ಸಿಗ್ತಿದೆ. ಚಿತ್ರದಲ್ಲಿ ಮಹಿಳಾ ಪರ ಒಂದು ಸಂದೇಶ ನೀಡಲಾಗಿದ್ದು, ರಾಜ್ಯಾದ್ಯಂತ ನಮ್ಮ ಸಿನಿಮಾಗೆ ಉತ್ತಮ ಪ್ರತಿಕ್ರಿಯೆಯ ಮಹಾಪೂರವೇ ಹರಿದು ಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ವೇದ ಸಿನಿಮಾ ಪ್ರಚಾರ: ಕೋಟೆನಾಡಿಗೆ ಆಗಮಿಸಿದ ಕರುನಾಡ ಚಕ್ರವರ್ತಿ

ABOUT THE AUTHOR

...view details