ಕರ್ನಾಟಕ

karnataka

ಸಿನಿಮಾ ಸ್ಟೈಲಲ್ಲಿ IT ಅಧಿಕಾರಿಗಳಂತೆ ಬಂದು ಈರುಳ್ಳಿ ವ್ಯಾಪಾರಿ ಕಿಡ್ನ್ಯಾಪ್‌: ಕೆಲವೇ ಗಂಟೆಗಳಲ್ಲಿ ಬಿಟ್ಟು ಪರಾರಿ

By

Published : Oct 11, 2021, 2:27 PM IST

Onion dealer kidnapped as IT officer in cinema style; Leave in a few hours

ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದ ಗ್ಯಾಂಗ್‌ವೊಂದು ಈರುಳ್ಳಿ ವ್ಯಾಪಾರಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟು ಕೆಲವೇ ಗಂಟೆಗಳನ್ನು ವ್ಯಾಪಾರಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಗರದಲ್ಲಿ ಕಿಡ್ನ್ಯಾಪ್ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲೂ ಮಕ್ಕಳನ್ನು ಅಪಹರಿಸುವ ಗ್ಯಾಂಗ್ ಹೆಚ್ಚಾಗಿದೆ‌‌. ಆದ್ರೀಗ ಸಿನಿಮಾ ಸ್ಟೈಲಲ್ಲಿ ಈರುಳ್ಳಿ ವ್ಯಾಪಾರಿಯನ್ನು ಅಪಹರಿಸಿ ನಂತರ ಬಿಟ್ಟಿರುವ ಘಟನೆ ಮಹಾಲಕ್ಷ್ಮಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಿವಾಸ್‌ ಅಪಹರಣವಾಗಿರುವ ಈರುಳ್ಳಿ ವ್ಯಾಪಾರಿಯಾಗಿದ್ದು, ತಾವು IT ಅಧಿಕಾರಿಗಳೆಂದು ಬೆದರಿಸಿ ಆತನನ್ನು ಅಪಹರಿಸಿದ್ದಾರೆ. ಒಂದೂವರೆ ಕೋಟಿ ರೂ ತೆರಿಗೆ ವಂಚನೆ ಮಾಡಿದ್ದಿ ಎಂದು ಬೆದರಿಕೆ ಹಾಕಿರುವುದಲ್ಲದೆ, ಇದನ್ನು ಸೆಟಲ್ ಮಾಡಲು 50 ಲಕ್ಷ ರೂ. ಹಣ ನೀಡಬೇಕೆಂದು ಆರೋಪಿಗಳ ಗ್ಯಾಂಗ್ ಬೇಡಿಕೆ ಇಟ್ಟಿದೆ. ನಂತರ 20 ಲಕ್ಷ ರೂ.ನೀಡುವಂತೆ ಒತ್ತಾಯಿಸಿದೆ. ಇದಾದ ಬಳಿಕ ನಾಳೆ 5 ಲಕ್ಷ ನೀಡಬೇಕೆಂದು ಎಚ್ಚರಿ ನೀಡಿದೆ. ಕೊನೆಗೆ ವ್ಯಾಪಾರಿ ಶ್ರೀನಿವಾಸ್​ನನ್ನ ಹೆಬ್ಬಾಳದ ಮೇಖ್ರಿ ಸರ್ಕಲ್​ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ABOUT THE AUTHOR

...view details