ಕರ್ನಾಟಕ

karnataka

ಜೈಲಿನಿಂದ ಬಿಡುಗಡೆಯಾದವರಿಗೆ ಅದ್ಧೂರಿ ಸ್ವಾಗತ - ಭಾರಿ ಚರ್ಚೆ

By

Published : Aug 19, 2021, 8:37 PM IST

ಜೈಲಿನಿಂದ ಬಿಡುಗಡೆಯಾದವರಿಗೆ ಅದ್ಧೂರಿ ಸ್ವಾಗತ ಮಾಡಲಾಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ‌.

grand Welcome to the persons who released from the prison
ಜೈಲಿನಿಂದ ಬಿಡುಗಡೆಯಾದವ್ರಿಗೆ ಅದ್ಧೂರಿ ಸ್ವಾಗತ

ಬಾಗಲಕೋಟೆ: ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಗಳಿಗೆ ಹೊವಿನ ಹಾರ ಹಾಕಿ, ತೆರದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ‌. ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಜೈಲಿನಿಂದ ಬಿಡುಗಡೆ ಆದ ವ್ಯಕ್ಯಿಗಳಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಜೈಲಿನಿಂದ ಬಿಡುಗಡೆಯಾದವ್ರಿಗೆ ಅದ್ಧೂರಿ ಸ್ವಾಗತ

ತಮದಡ್ಡಿ ಗ್ರಾಮದಲ್ಲಿ ಪುನರ್ವಸತಿ ಕೇಂದ್ರ ಮಾಡಲು ಸರ್ಕಾರ ನಿರ್ಧಾರ ಮಾಡಿತ್ತು. ಈ ಸಂದರ್ಭದಲ್ಲಿ ಹಳಿಂಗಳಿ ಗ್ರಾಮದ ಮುಖಂಡರು ತೀವ್ರವಾಗಿ ವಿರೋಧಿಸಿ, ಪ್ರತಿಭಟನೆ ಮಾಡುವ ಮೂಲಕ ಹೋರಾಟ ಕಾವನ್ನು ತೀವ್ರಗೊಳಿಸಿದ್ದರು. ಕೃಷ್ಣಾ ನದಿ ಪ್ರವಾಹ ಬಾಧಿತ ಗ್ರಾಮಗಳ ಪುನರ್ವಸತಿ ಕೇಂದ್ರ ನಿರ್ಮಾಣದ ಸ್ಥಳದ ವಿಚಾರವಾಗಿ ಪ್ರತಿಭಟನೆ ನಡೆಸಲಾಗಿತ್ತು.

ಈ ಹಿನ್ನೆಲೆ ಹಳಿಂಗಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ರು. ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು. ಅಗಸ್ಟ್ 4 ರಂದು ಪ್ರತಿಭಟನೆ ವೇಳೆ ಹಳಿಂಗಳಿ ಗ್ರಾಮದ ಮುಖಂಡರನ್ನು ಹೋರಾಟ ಮಾಡಿದ ಹಿನ್ನೆಲೆ ಬಂಧನ ಮಾಡಲಾಗಿತ್ತು. ಇದೀಗ ಅವರೆಲ್ಲ ಜೈಲಿನಿಂದ ಬಿಡುಗಡೆಗೊಂಡಿದ್ದು, ಹಳಿಂಗಳಿ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ನೀಡಲಾಗಿದೆ.

ಇದನ್ನೂ ಓದಿ:ಜಪಾನ್​ನ ಈಜು ಸ್ಪರ್ಧೆಗೆ ತೆರಳಲಿದ್ದಾರೆ ಶಿವಮೊಗ್ಗದ ಈಜುಪಟುಗಳು

ಸ್ಥಳೀಯ ಶಾಸಕರು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿ, ಬಂಧನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸುಮಾರು 15 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ ಆದ ಪರಿಣಾಮ ಹೂ ಹಾರ ಹಾಕಿ, ಪುಷ್ಪವನ್ನು ಎಸೆಯುವ ಮೂಲಕ ಸ್ವಾಗತಿಸಲಾಯಿತು. ಇದು ರಾಜಕೀಯವಾಗಿ ತಿರುಗೇಟು ನೀಡುವ ತಂತ್ರ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ.

ABOUT THE AUTHOR

...view details