ETV Bharat / city

ಜಪಾನ್​ನ ಈಜು ಸ್ಪರ್ಧೆಗೆ ತೆರಳಲಿದ್ದಾರೆ ಶಿವಮೊಗ್ಗದ ಈಜುಪಟುಗಳು

author img

By

Published : Aug 19, 2021, 6:24 PM IST

ಜಪಾನ್​ನಲ್ಲಿ ಮುಂದಿನ ಮಾರ್ಚ್​​​ನಲ್ಲಿ ಈಜು ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗೆ ಶಿವಮೊಗ್ಗದ ದೀಪಕ್, ರೇಖಾ, ಡಾ. ವಿದ್ಯಾ ರಮೇಶ್ ಹಾಗೂ ಸಂಗಮೇಶ್ ಎಂಬುವವರು ಆಯ್ಕೆಯಾಗಿದ್ದಾರೆ‌.

Shimoga swimmers going to participate Japan's swimming competition
ಜಪಾನ್​ನ ಈಜು ಸ್ಪರ್ಧೆಗೆ ತೆರಳಲಿದ್ದಾರೆ ಮಲೆನಾಡು ಶಿವಮೊಗ್ಗದ ಈಜುಪಟುಗಳು

ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆಯ ಈಜುಗಾರರು ಮುಂದಿನ ವರ್ಷ ಜಪಾನ್​ನಲ್ಲಿ ನಡೆಯುವ ಈಜು ಸ್ಪರ್ಧೆಗೆ ತೆರಳಲಿದ್ದಾರೆ. ಹೌದು, ಶಿವಮೊಗ್ಗದ ದೀಪಕ್, ರೇಖಾ, ಡಾ. ವಿದ್ಯಾ ರಮೇಶ್ ಹಾಗೂ ಸಂಗಮೇಶ್ ಎಂಬುವವರು ಜಪಾನ್​ನಲ್ಲಿ ನಡೆಯುವ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ‌.

ಜಪಾನ್​ನ ಈಜು ಸ್ಪರ್ಧೆಗೆ ತೆರಳಲಿದ್ದಾರೆ ಮಲೆನಾಡು ಶಿವಮೊಗ್ಗದ ಈಜುಪಟುಗಳು

ಸ್ಪರ್ಧೆಗೆ ತಯಾರಿ ಜೋರು:

ಜಪಾನ್ ಈಜು ಸ್ಪರ್ಧೆಯು ಅಂತಾರಾಷ್ಟ್ರೀಯ ಮಟ್ಟದಾಗಿದೆ. ಈ ಈಜು ಸ್ಪರ್ಧೆಯು ಒಲಿಪಿಂಕ್ ಮಾದರಿಯಲ್ಲಿರಲಿದ್ದು, 5 ವರ್ಷಕ್ಕೊಮ್ಮೆ ನಡೆಯುವ ಸ್ಪರ್ಧೆ ಆಗಿರುತ್ತದೆ. ಸ್ಪರ್ಧೆಗೆ ಶಿವಮೊಗ್ಗ ಜಲ್ಲೆಯಿಂದ ನಾಲ್ಕು‌ ಜನ ಆಯ್ಕೆಯಾಗಿದ್ದಾರೆ. ಇದರಲ್ಲಿ ದೀಪಕ್ ಹಾಗೂ ರೇಖಾ ದಂಪತಿ, ಸಂಗಮೇಶ್ ಸ್ವಿಮ್ಮರ್ ಕೋಚ್ ಆಗಿದ್ದು, ವಿದ್ಯಾ ರಮೇಶ್ ಎಂಬುವವರು ವೈದ್ಯರಾಗಿದ್ದಾರೆ. ಹೀಗೆ ನಾಲ್ಕು ಜನರು ವಿವಿಧ ಕ್ಷೇತ್ರದಲ್ಲಿ ತೂಡಗಿಸಿ‌ಕೊಂಡಿದ್ದು, ಇದೀಗ ನಾಲ್ವರು ಒಟ್ಟಿಗೆ ಅಭ್ಯಾಸ ಮಾಡುತ್ತಾರೆ.

ಬೆಳಗ್ಗೆ ಎರಡೂವರೆ ಗಂಟೆ, ಸಂಜೆ ಎರಡೂವರೆ ಗಂಟೆ ಅಭ್ಯಾಸ ನಡೆಸುತ್ತಾರೆ. ಸದ್ಯ ಇನ್ನಷ್ಟು ಅಭ್ಯಾಸ ಹೆಚ್ಚು ಮಾಡುವ ಉದ್ದೇಶವನ್ನು ಈ ಈಜುಪಟುಗಳು ಹೊಂದಿದ್ದಾರೆ. ಈ ಪಟುಗಳು ಬೇರೆ ಬೇರೆ ವೃತ್ತಿಯಲ್ಲಿದ್ದರೂ ಸಹ ಈಜು ಕಲಿಯಲು ಬಂದಾಗ ಸ್ನೇಹಿತರಾದವರು.

ಮುಂದಿನ ಮಾರ್ಚ್​​​ನಲ್ಲಿ ನಡೆಯುತ್ತೆ ಈಜು ಸ್ಪರ್ಧೆ:

ಜಪಾನ್​ನಲ್ಲಿ ಮುಂದಿನ ಮಾರ್ಚ್​​​ನಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಇವರು ಫ್ರೀ ಸ್ಟೈಲ್, ಬ್ರೆಸ್ಟ್ ಸ್ಟ್ರೋಕ್ ಹಾಗೂ ಬಟರ್ ಫ್ಲೈ ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಈ ಸ್ಪರ್ಧೆಯು 30 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಇರುವುದರಿಂದ ಈ ಸ್ಪರ್ಧೆಗೆ ಸುಮಾರು 2 ಲಕ್ಷದಷ್ಟು ಜನರು ಭಾಗಿಯಾಗುವ ಸಾಧ್ಯತೆಗಳಿವೆ. ಇಂತಹ ಕಠಿಣ ಸವಾಲನ್ನು ಎದುರಿಸಲು ಶಿವಮೊಗ್ಗದ ಈ ಈಜು‌ಪಟುಗಳು ಕಷ್ಟಪಟ್ಟು ತರಬೇತಿ ಪಡೆಯುತ್ತಿದ್ದಾರೆ. ನಾಲ್ವರ ತಂಡದಲ್ಲಿ ಸ್ವಿಮ್ಮರ್ - ಕೋಚರ್ ಸಂಗಮೇಶ್ ಇರುವುದರಿಂದ ಉಳಿದ ಸ್ವಿಮ್ಮರ್ಸ್​​ಗಳು ಸ್ವಲ್ಪ ಕಷ್ಟಪಟ್ಟೇ ತಯಾರಿ ನಡೆಸುತ್ತಿದ್ದಾರೆ.

ಈಜುವುದನ್ನು ಬಹುಬೇಗ ಕಲಿತು ಸಾಧನೆ

ಈ ನಾಲ್ವರಲ್ಲಿ ಇಬ್ಬರು ಅಂದರೆ ದೀಪಕ್ ಹಾಗೂ ರೇಖಾ ದಂಪತಿ ತಮ್ಮ ಮಕ್ಕಳನ್ನು ಸ್ವಿಮ್ಮಿಂಗ್​​ ಸ್ಕೂಲ್​​ಗೆ ಸೇರಿಸಲು ಬಂದಾಗ ಆಸಕ್ತಿ ಉಂಟಾಗಿ ಇವರು ಸಹ ಸ್ವಿಮ್ಮಿಂಗ್​ಗೆ ಸೇರಿಕೊಂಡಿದ್ದಾರೆ. ಇನ್ನೂ ಡಾ. ವಿದ್ಯಾ ರಮೇಶ್ ಅವರು ಏರೋಬಿಕ್ಸ್ ಸೇರಿದಂತೆ ಇತರ ತರಬೇತಿಗೆ ಹೋದಾಗ ಸಮಸ್ಯೆ ಉಂಟಾಗಿದ್ದು, ಕೀಲು, ಮೂಳೆ ತಜ್ಞ ಡಾ. ನಂದ ಕಿಶೋರ್ ಅವರ ಸಲಹೆಯ ಮೇರೆಗೆ ಸ್ವಿಮ್ಮಿಂಗ್ ತರಬೇತಿ ಪಡೆಯಲು ಬಂದಿದ್ದಾರೆ. ಇವರು ಈಜು ಕಲಿಯಲು ಬಂದಾಗ ಅತ್ಯಂತ ವೇಗವಾಗಿ ಕಲಿತು ಸಾಧನೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ:

ಇವರು ತಮ್ಮ ವಯೋಮಾನದ ಈಜು ಸ್ಪರ್ಧೆಯಲ್ಲಿ ಭಾಗಿಯಾಗಿ ಅನೇಕ‌ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರೆಲ್ಲರೂ ಸ್ಥಳೀಯ, ಜಿಲ್ಲೆ, ‌ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಡಲ್ ಪಡೆದು‌ಕೊಂಡಿದ್ದಾರೆ. ಈ ನಾಲ್ವರು ಸಹ‌ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಇನ್ನೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗಬೇಕಿತ್ತು. ಆದರೆ, ಇದೀಗ ನೇರವಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಲ್ಲಿ ದೀಪಕ್ ಹಾಗೂ ರೇಖಾ ಹಾಗೂ ಇವರ ಇಬ್ಬರು ಮಕ್ಕಳು ಸಹ ಸ್ವಿಮ್ಮರ್​ಗಳು. ಇವರದ್ದು ಒಂದು ರೀತಿಯಲ್ಲಿ ಸ್ವಿಮ್ಮರ್ಸ್ ಕುಟುಂಬ ಎನ್ನಬಹುದು.

ಇದನ್ನೂ ಓದಿ: Video: ಬೆಂಗಳೂರಿನಲ್ಲಿ ಟೋಯಿಂಗ್​ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಹೊಡೆದ ಸಾರ್ವಜನಿಕರು..

ಈಜು ಸ್ಪರ್ಧೆಗೆ ಹೊರಟ ಸ್ವಿಮ್ಮರ್ಸ್​ ಪದಕ ಪಡೆದು ಬರಲಿ ಎಂದು ಹಾರೈಸೋಣ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.