ಕರ್ನಾಟಕ

karnataka

ನಂಜನಗೂಡು ನಗರಸಭೆ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ.. ಕತ್ತಲಲ್ಲೇ ಕೆಲಸ!

By

Published : Nov 16, 2021, 3:07 PM IST

ನಿರಂತರ ಮಳೆ(rain) ಹಿನ್ನೆಲೆ ಆಗಾಗ ವಿದ್ಯುತ್(power cut) ಕಡಿತಗೊಳ್ಳುತ್ತಿದೆ. ಆದರೆ, ನಂಜನಗೂಡು(nanjangud) ನಗರಸಭೆ ಕಚೇರಿಯಲ್ಲಿ ವಿದ್ಯುತ್​ಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಹಿನ್ನೆಲೆ ವಿದ್ಯುತ್‌ ಕಡಿತಗೊಂಡ ವೇಳೆ ಮಬ್ಬುಗತ್ತಲಲ್ಲಿ ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ..

power cut in government office leads to problem for employees
ನಂಜನಗೂಡು ನಗರಸಭೆ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ...ಕತ್ತಲಲ್ಲೇ ಕೆಲಸ

ಮೈಸೂರು: ಪ್ರಸ್ತುತ ದಿನಗಳಲ್ಲಿ ವಿದ್ಯುತ್ ಕಡಿತಗೊಂಡರೂ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿರುತ್ತದೆ. ಆದರೆ, ನಂಜನಗೂಡು ನಗರಸಭೆ ಕಚೇರಿಯಲ್ಲಿ ವಿದ್ಯುತ್​ಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಕಾರಣ ವಿದ್ಯುತ್‌ ಕಡಿತಗೊಂಡ(power cut) ವೇಳೆ ಮಬ್ಬುಗತ್ತಲಲ್ಲಿ ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ.

ನಂಜನಗೂಡು ನಗರಸಭೆ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ.. ಕತ್ತಲಲ್ಲೇ ಕೆಲಸ..

ನಿರಂತರ ಮಳೆ(rain) ಹಿನ್ನೆಲೆ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಿದೆ. ಕಳೆದ ಎರಡು ತಿಂಗಳಿನಿಂದ ನಂಜನಗೂಡು(nanjangud) ನಗರಸಭೆ ಕಚೇರಿ ಸಿಬ್ಬಂದಿ ಪರದಾಡುವಂತಾಗಿದೆ‌.

ವಿದ್ಯುತ್ ಕಡಿತಗೊಂಡಾಗ ಪರ್ಯಾಯವಾಗಿ ಉಪಯೋಗಿಸುವ ಯುಪಿಎಸ್ ಅಥವಾ ಜನರೇಟರ್ ಸೇರಿ ಯಾವುದೇ ವ್ಯವಸ್ಥೆಗಳನ್ನು ನಗರ ಸಭೆ ಕಚೇರಿ ಹೊಂದಿಲ್ಲದ ಕಾರಣ ಇಲ್ಲಿನ ಸಿಬ್ಬಂದಿ ಕತ್ತಲಿನಲ್ಲೇ ಕರ್ತವ್ಯ ನಿರ್ವಹಿಸುತ್ತಾರೆ.

ಸಾರ್ವಜನಿಕ ಕೆಲಸಗಳಿಗೂ ಬ್ರೇಕ್ :ವಿದ್ಯುತ್ ಇದ್ದರೆ ಮಾತ್ರ ಸರ್ಕಾರಿ ಕಚೇರಿಗಳಲ್ಲಿನ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಆದ್ರೆ, ವಿದ್ಯುತ್ ಕೈಕೊಟ್ಟರೆ ಸಾರ್ವಜನಿಕರ ಕೆಲಸ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತದೆ. ನಗರದಲ್ಲಿ 31 ವಾರ್ಡ್​​ಗಳಿದ್ದು, 1 ಲಕ್ಷಕ್ಕೂ ಹೆಚ್ಚಿನ ಮತದಾರರಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಅಧಿಕ ಮತದಾರರಿರುವ ನಗರಸಭೆಯಾಗಿ ನಂಜನಗೂಡು ನಗರಸಭೆ ಹೊರಹೊಮ್ಮಿದೆ. ಪ್ರತಿ ದಿನ ತಮ್ಮ ಕೆಲಸ ಮಾಡಿಸಿಕೊಳ್ಳಲು ನಗರಸಭೆಗೆ ನೂರಾರು ಮಂದಿ ಬರುತ್ತಾರೆ. ಆದರೆ, ಅಸಮರ್ಪಕ ವಿದ್ಯುತ್​​ನಿಂದಾಗಿ ಸಾರ್ವಜನಿಕರ ಕೆಲಸಗಳು ಸ್ಥಗಿತಗೊಳ್ಳುತ್ತಿವೆ.

ಕೆಟ್ಟು ನಿಂತ ಯುಪಿಎಸ್ :ನಗರಸಭೆಯಲ್ಲಿರುವ ಯುಪಿಎಸ್ ಕೆಟ್ಟು‌ ತಿಂಗಳುಗಳೇ ಉರುಳಿದರೂ ಅದನ್ನು ರಿಪೇರಿ ಮಾಡಿಸುವ ಕೆಲಸಕ್ಕೆ ಅಧಿಕಾರಿಗಳು ಕೈ ಹಾಕಿಲ್ಲ ಎಂದು ತಿಳಿದು ಬಂದಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ನಂಜನಗೂಡು ನಗರದ ಅಭಿವೃದ್ಧಿಗೆ ಕೋಟ್ಯಂತರ ರೂ. ಹಣ ಮಂಜೂರು ಆಗುತ್ತದೆ. ಪ್ರತಿ ವರ್ಷ ತೆರಿಗೆ ಹಣ ವಸೂಲಾತಿ ಆಗುತ್ತದೆ. ಹೀಗಿದ್ದೂ ವಿದ್ಯುತ್ ಕೈಕೊಟ್ಟರೆ ಕತ್ತಲಿನಲ್ಲೇ ಕೆಲಸ ಮಾಡುವ ದುಃಸ್ಥಿತಿ ಎದುರಾಗುತ್ತದೆ.

ಇದನ್ನೂ ಓದಿ:ಪುನೀತ್ ರಾಜ್‍ಕುಮಾರ್ ನುಡಿನಮನ ಕಾರ್ಯಕ್ರಮಕ್ಕೆ ಹೊರಟ ಶಕ್ತಿಧಾಮದ ಮಕ್ಕಳು

ABOUT THE AUTHOR

...view details