ಕರ್ನಾಟಕ

karnataka

ಒಕ್ಕಲಿಗರ ಮತಗಳಿಗೆ ಕೈಹಾಕಿದ್ರೆ ಡಿಕೆಶಿ ಕುತ್ತಿಗೆಗೇ ಬರುತ್ತೆ.. ದೇವೇಗೌಡರನ್ನ ಈ ಸಮುದಾಯ ಕೈಬಿಡಲ್ಲ.. ಹೆಚ್‌ಡಿಕೆ

By

Published : Feb 23, 2022, 2:17 PM IST

ಡಿ ಕೆ ಶಿವಕುಮಾರ್ ಒಕ್ಕಲಿಗರ ಶಾಸಕರನ್ನಾದರೂ ಸೆಳೆಯಲಿ, ಬೇರೆ ಯಾವ ಶಾಸಕರನ್ನಾದರೂ ಸೆಳೆಯಲಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಹೆಚ್ ಡಿ ದೇವೆಗೌಡರು ಇರುವವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.‌ ಒಕ್ಕಲಿಗರ ಶಾಸಕರಿಗೆ ಗಾಳ ಹಾಕಿರುವುದು ಅವರ ಕುತ್ತಿಗೆಗೆ ಬರಲಿದೆ. ಈ ಸಂಬಂಧ ನಾನು ಯಾವುದೇ ರಿವರ್ಸ್ ಆಪರೇಷನ್ ಮಾಡುವುದಿಲ್ಲ.‌.

kumarswami-press-conference-in-mysore
ಹೆಚ್.ಡಿ.ಕುಮಾರಸ್ವಾಮಿ

ಮೈಸೂರು :ಹಿಜಾಬ್ ಗಲಾಟೆಗೂ ಶಿವಮೊಗ್ಗ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಮುಂದಿನ ಚುನಾವಣೆವರೆಗೂ ಇಂತಹ ಗಲಾಟೆಗಳು ನಡೆಯುತ್ತಿರುತ್ತವೆ‌. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಗಲಾಟೆಗಳಲ್ಲಿ ರಾಜಕೀಯ ಪಕ್ಷದ ಮುಖಂಡರ ಮಕ್ಕಳು ಸಾಯುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಗೂ ರಾಜಕೀಯ ಕೋವಿಡ್ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವುದು.

ಪಾದಯಾತ್ರೆ ಏಕೆ ಬೇಕು? :ಮೇಕೆದಾಟು ಯೋಜನೆಗಾಗಿ ಎರಡನೇ ಹಂತದ ಪಾದಯಾತ್ರೆ ಈಗ ಯಾಕೆ ಬೇಕು?. ನೀವs ಮಣ್ಣಿನ ಮಕ್ಕಳೆಂದು ಬೋರ್ಡ್ ಹಾಕಿಕೊಂಡು ಹೋಗಿ, ನಾವೆಂದು ಮಣ್ಣಿನ ಮಕ್ಕಳು ಅಂತಾ ಹೇಳಿಕೊಂಡಿಲ್ಲ. ನಿಮಗೆ ಕಲ್ಲಿನ ಮಕ್ಕಳು ಎಂದು ಜನ ಕರೆಯುತ್ತಾರೆ.

ಈಗ ನೀವು ಮಣ್ಣಿನ ಮಕ್ಕಳು ಅಂತಾ ಬಿಂಬಿಸಲು ಹೋಗುತ್ತಿದ್ದೀರಿ. ಮಣ್ಣಿನ ಮಕ್ಕಳು ಎಂದು ಬೋರ್ಡ್ ಹಾಕಿಕೊಳ್ಳಿ ಎಂದು ಡಿಕೆ ಬ್ರದರ್ಸ್‌ಗೆ ಹೆಚ್‌ಡಿಕೆ ಟಾಂಗ್ ನೀಡಿದರು. ಒಕ್ಕಲಿಗರ ಮತಗಳ ಬುಟ್ಟಿಗೆ ಕೈ ಹಾಕಿದರೆ ಡಿ ಕೆ ಶಿವಕುಮಾರ್ ಕುತ್ತಿಗೆಗೆ ಬರುತ್ತದೆ. ದೇವೇಗೌಡರು ಬದುಕಿರುವವರೆಗೂ ಆ ಸಮಾಜ ಅವರನ್ನ ಕೈ ಬಿಡುವುದಿಲ್ಲ.‌

ಡಿ ಕೆ ಶಿವಕುಮಾರ್ ಒಕ್ಕಲಿಗರ ಶಾಸಕರನ್ನಾದರೂ ಸೆಳೆಯಲಿ, ಬೇರೆ ಯಾವ ಶಾಸಕರನ್ನಾದರೂ ಸೆಳೆಯಲಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಹೆಚ್ ಡಿ ದೇವೆಗೌಡರು ಇರುವವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.‌ ಒಕ್ಕಲಿಗರ ಶಾಸಕರಿಗೆ ಗಾಳ ಹಾಕಿರುವುದು ಅವರ ಕುತ್ತಿಗೆಗೆ ಬರಲಿದೆ. ಈ ಸಂಬಂಧ ನಾನು ಯಾವುದೇ ರಿವರ್ಸ್ ಆಪರೇಷನ್ ಮಾಡುವುದಿಲ್ಲ.‌

ನನ್ನ ಸಂಪರ್ಕದಲ್ಲಿ ಯಾವುದೇ ಕಾಂಗ್ರೆಸ್ ಶಾಸಕರು ಅಥವಾ ಮುಖಂಡರು ಇಲ್ಲ.‌ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೆಳವಣಿಗೆ ನೋಡಿ ಆ ಪಕ್ಷದವರೇ ಬರುತ್ತಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದರು.

ಸದನ‌ ನಡೆಯಲೇ ಇಲ್ಲ :ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ವಿಧಾನಸಭೆಯ ಅಧಿವೇಶನ ಕೇವಲ ರಾಜ್ಯಪಾಲರ ಭಾಷಣಕ್ಕಷ್ಟೇ ಸೀಮಿತವಾಯಿತು. ಸದನದಲ್ಲಿ ಕಾಂಗ್ರೆಸ್ ನಡೆದುಕೊಂಡಿದ್ದು ಸರಿಯಲ್ಲ. ಯಾವುದೇ ವಿಚಾರದ ಚರ್ಚೆ ನಡೆಯಲಿಲ್ಲ, ಕಾಂಗ್ರೆಸ್ ಈಶ್ವರಪ್ಪ ರಾಜೀನಾಮೆ ಕೇಳಲು ಯಾವುದೇ ಸಾಕ್ಷಿ, ದಾಖಲೆಗಳನ್ನ ಇಟ್ಟುಕೊಳ್ಳದೆ ಬಾಲಿಶವಾಗಿ ಅಹೋರಾತ್ರಿ ಧರಣಿ ನಡೆಸಿದ್ದನ್ನ ಜನ ಒಪ್ಪುವುದಿಲ್ಲ.

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ನಡೆದಿರುವ ಬಗ್ಗೆ ಅನುಮಾನ ಇದೆ ಎಂದು ಹೇಳಿದರು. ಕಾಂಗ್ರೆಸ್ ಇತಿಹಾಸ ಇರುವ ಪಕ್ಷ ಎನ್ನುತ್ತಾರೆ. ಆದರೆ, ಹಿಂದಿನ ಕಾಂಗ್ರೆಸ್ ನಾಯಕರೇ ಬೇರೆ, ಇಂದಿನ ಕಾಂಗ್ರೆಸ್ ನಾಯಕರೇ ಬೇರೆ. ಇವರಿಗೆ ವಿಶೇಷ ಬಹುಮಾನ ಇದ್ದರೆ ಕೊಟ್ಟು ಬಿಡಿ ಎಂದು ವ್ಯಂಗ್ಯವಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಓದಿ :ಮಂಗಳೂರು : ಪೊಲೀಸ್ 'ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್'ನಿಂದ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು

ABOUT THE AUTHOR

...view details