ಕರ್ನಾಟಕ

karnataka

ಅಗಾಧ ಜ್ಞಾಪಕ ಶಕ್ತಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೈಸೂರಿನ ಪುಟಾಣಿ

By

Published : Feb 2, 2022, 12:25 PM IST

Updated : Feb 2, 2022, 12:34 PM IST

ಮೈಸೂರಿನ ರಾಮಕೃಷ್ಣ ನಗರದ ನಿವಾಸಿಗಳಾದ ಬಾಲಚಂದರ್ ಮತ್ತು ವಿಪಾಂಚಿ ದಂಪತಿಗಳ ಪುತ್ರಿ ಚವಿಷ್ಕಾ ಬಿ. ನಾರಾಯಣ್ ತನ್ನ ಅಗಾಧ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ.

India book of record honors Mysore baby chavishka talent
ಅಗಾಧ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೈಸೂರಿನ ಪುಟಾಣಿ

ಮೈಸೂರು: 17 ತಿಂಗಳ ಹೆಣ್ಣು ಮಗು ತನ್ನ ಅಗಾಧ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದೆ. ಚಿಕ್ಕ ವಯಸ್ಸಿನಲ್ಲೇ ಈ ವಿಶಿಷ್ಟ ದಾಖಲೆ ಮಾಡಿದ್ದಾಳೆ ಮೈಸೂರಿನ ಪುಟಾಣಿ ಚವಿಷ್ಕ.

ಮೈಸೂರಿನ ರಾಮಕೃಷ್ಣ ನಗರದ ನಿವಾಸಿಗಳಾದ ಬಾಲಚಂದರ್ ಮತ್ತು ವಿಪಾಂಚಿ ದಂಪತಿಗಳ ಪುತ್ರಿ ಚವಿಷ್ಕ ಬಿ. ನಾರಾಯಣ್ ಚಿಕ್ಕ ವಯಸ್ಸಿನಲ್ಲೇ ಈ ವಿಶಿಷ್ಟ ಸಾಧನೆ ಮಾಡಿದ್ದಾಳೆ. ಜನವರಿ 27ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ -2022 ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಈ ಪುಟಾಣಿಯ ಹೆಸರಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೈಸೂರಿನ ಪುಟಾಣಿ ಪ್ರತಿಭೆ

ಸಾಮಾನ್ಯವಾಗಿ 17 ತಿಂಗಳು ಅಂದರೆ ಒಂದೂವರೆ ವರ್ಷದ ಮಕ್ಕಳು ತೊದಲು ನುಡಿಯಲ್ಲಿ ಮಾತನಾಡಲು ಶುರು ಮಾಡುತ್ತವೆ ಮತ್ತು ಜ್ಞಾಪಕ ಶಕ್ತಿಯೂ ಹೆಚ್ಚಾಗಿ ಇರುವುದಿಲ್ಲ. ಎಲ್ಲವನ್ನೂ ಗುರುತಿಸಲು ಸಾಧ್ಯವಿಲ್ಲ. ಆದರೆ, ಈ ಮಗು ಹಲವಾರು ವಸ್ತುಗಳ, ಪ್ರಾಣಿ ಪಕ್ಷಿಗಳ ಹೆಸರನ್ನು ಹೇಳಿದ ತಕ್ಷಣ ಗುರುತಿಸುವ ಪ್ರತಿಭೆ ಹೊಂದಿದ್ದಾಳೆ.

ಮಗುವಿನ ಪ್ರತಿಭೆ:30 ಪ್ರಾಣಿ ಪಕ್ಷಿಗಳು, 25 ವಸ್ತುಗಳು,‌ ದೇಹದ 25 ಭಾಗಗಳು, 15 ತರಕಾರಿಗಳು, 8 ಹಣ್ಣುಗಳು, 10 ವಾಹನಗಳು, 5 ಆಕಾರಗಳನ್ನು ಗೊಂದಲಕ್ಕೊಳಗಾಗದೇ ಸುಲಭವಾಗಿ ಗುರುತಿಸುತ್ತಾಳೆ.

ಕಾಡು ಪ್ರಾಣಿಗಳನ್ನು ಗುರುತಿಸಿಸಲು 2 ನಿಮಿಷ, ದೇಹದ ನಾನಾ ಭಾಗಗಳನ್ನು ತೋರಿಸಲು 1.47 ನಿಮಿಷ, ವಸ್ತುಗಳನ್ನು ತೋರಿಸಲು 1.33 ನಿಮಿಷ, ತರಕಾರಿಗಳನ್ನು ಗುರುತಿಸಲು 1.55 ನಿಮಿಷ, ವಿವಿಧ ಆಕಾರಗಳನ್ನು ಗುರುತಿಸಲು 1.28 ನಿಮಿಷಗಳನ್ನು ತೆಗೆದುಕೊಂಡಿದ್ದಾಳೆ. ಇದನ್ನೆಲ್ಲ ವಿಡಿಯೋ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್​​​​​ಗೆ ಮಗುವಿನ ಪೋಷಕರು ಕಳುಹಿಸಿದ್ದಾರೆ.

ಇದನ್ನು ಪರಿಶೀಲಿಸಿದ ತಂಡ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಚವಿಷ್ಕ ನಾರಾಯಣ್ ಹೆಸರು ಪ್ರಕಟಿಸಿದ್ದು, ಜೊತೆಗೆ ಪ್ರಮಾಣ ಪತ್ರವನ್ನು ಪೋಸ್ಟ್ ಮೂಲಕ ಪೋಷಕರಿಗೆ ತಲುಪಿಸಿದ್ದಾರೆ.

ಇದನ್ನೂ ಓದಿ:ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ: ಮುಧೋಳದ ಡಾ.ಚಿದಾನಂದ ಬೆಳಗಲಿಗೆ ಸಚಿವ ಕಾರಜೋಳ ಅಭಿನಂದನೆ

ಮೊದಲಿನಿಂದಲೂ ಚವಿಷ್ಕ ಪೋಷಕರು ಮಗುವಿಗೆ ತಮ್ಮ ಸುತ್ತಮುತ್ತಲಿನ ವಸ್ತುಗಳು, ಪ್ರಾಣಿಗಳ ಪರಿಚಯ ಮಾಡಿಕೊಡುತ್ತಿದ್ದರು. ಮಗುವಿನ ಮೇಲೆ ಯಾವುದೇ ರೀತಿಯ ಒತ್ತಡ ಹಾಕದೇ ಮಗುವಿಗೆ ಇಷ್ಟವಾಗುವ ರೀತಿಯಲ್ಲಿ ವಸ್ತುಗಳನ್ನು ಗುರುತಿಸಲು ಹೇಳಿಕೊಡುತ್ತಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಳೆದ ಎರಡು ತಿಂಗಳಿನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಮಗಳ ಹೆಸರನ್ನು ಸೇರಿಸಲು ಅವಳಿಗೆ ಹಣ್ಣು, ತರಕಾರಿ, ಪ್ರಾಣಿಗಳು, ವಸ್ತುಗಳ ಹೆಸರನ್ನು ಹೇಳಿಕೊಡುತ್ತಿದ್ದವು ಎಂದು ಪೋಷಕರು ಈಟಿವಿ ಭಾರತಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

Last Updated : Feb 2, 2022, 12:34 PM IST

ABOUT THE AUTHOR

...view details